ನವದೆಹಲಿ: ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಅದರಲ್ಲೂ ಅವರ ಕೀಪಿಂಗ್ ವಿಷಯ ಬಂದಾಗಲಂತೂ ಯಾರೂ ಕೂಡ ಅವರ ಸರಿಸಮನಾಗಿ ನಿಲ್ಲಲಾರರು.ಇದಕ್ಕೆ ಪೂರಕ ಎನ್ನುವಂತೆ ಈಗ ಐಸಿಸಿ ಕೂಡ ಟ್ವೀಟ್ ಮಾಡಿದೆ.
ಇದನ್ನು ಅವರು ಪ್ರತಿಪಂದ್ಯದಲ್ಲೂ ಕೂಡ ಸಾಭೀತು ಮಾಡುತ್ತಲೇ ಬಂದಿದ್ದಾರೆ. ಸದ್ಯ ಈ 37 ವರ್ಷದ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಒಟ್ಟು 190 ಸ್ಟಂಪಿಂಗ್ ಮಾಡಿರುವ ದಾಖಲೆ ಇದೆ. ಈಗ ಅವರ ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆ ಸ್ವತಃ ಐಸಿಸಿ ಬೆರಗಾಗಿದೆ.
Never leave your crease with MS Dhoni behind the stumps! https://t.co/RoUp4iMpX6
— ICC (@ICC) February 3, 2019
ಜಪಾನ್ ಮೂಲದ ಮಲ್ಟಿಮೀಡಿಯಾ ಕಲಾವಿದ ಯೋಕೋ ಐಸಿಸಿಗೆ ಶೈನ್ ಆಗಲು ಕೆಲವು ಸಲಹೆಗಳನ್ನು ನೀಡಬೇಕೆಂದು ಕೇಳಿಕೊಂಡಿದ್ದಾರೆ.ಇದಕ್ಕೆ ತಕ್ಷಣ ಉತ್ತರಿಸಿರುವ ಐಸಿಸಿ " ಸ್ಟಂಪ್ ಹಿಂದೆ ಮಹೇಂದ್ರ ಸಿಂಗ್ ಧೋನಿ ಇದ್ದಾಗ ಕ್ರೀಸ್ ಬಿಡಬೇಡಿ ಎನ್ನುವ ಉತ್ತರವನ್ನು ನೀಡುವ ಮೂಲಕ ಎಲ್ಲ ಕ್ರಿಕೆಟ್ ಆಟಗಾರರನ್ನು ಅಚ್ಚರಿಗೊಳಿಸಿದೆ.
ಭಾರತ ಇತ್ತೀಚಿಗೆ ನ್ಯೂಜಿಲ್ಯಾಂಡ್ ವಿರುದ್ದ 35 ರನ್ ಅಂತರಲ್ಲಿ ಅಂತಿಮ ಪಂದ್ಯ ಗೆಲ್ಲುವು ಮೂಲಕ 4-1 ರ ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು.