ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕೆಂಪು-ಚಿನ್ನದ ಬಣ್ಣಗಳಲ್ಲಿ ಝಗಮಗಿಸುವ ಈ ತಂಡ, ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆಯನ್ನು ತನ್ನ ಹೆಗಲಿನಲ್ಲಿ ಹೊತ್ತುಕೊಂಡಿದೆ. ಇಂತಹ ತಂಡವು 2025ರಲ್ಲಿ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಚ್ಚರಿ ಎನ್ನುವಂತೆ ಪುರುಷ ಮತ್ತು ಮಹಿಳಾ ತಂಡಗಳು ತಮ್ಮ ಮೂರನೇ ಪಂದ್ಯಗಳಲ್ಲಿ ಸೋಲುಗಳನ್ನು ಕಾಣುವ ಮೂಲಕ ವಿಚಿತ್ರ ಕಾಕತಾಳೀಯಕ್ಕೆ ಕಾರಣವಾಗಿವೆ.
ಮಹಿಳಾ ತಂಡವು ಫೆಬ್ರವರಿ 21ರಂದು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್) ಮುಂಬೈ ಇಂಡಿಯನ್ಸ್‌ಗೆ ಮಣಿದರೆ, ಪುರುಷರ ತಂಡವು ಏಪ್ರಿಲ್ 2ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಗುಜರಾತ್ ಟೈಟಾನ್ಸ್‌ಗೆ ಸೋತಿತು.ಆ ಮೂಲಕ ಈಗ ತವರಿನಲ್ಲಿಯೇ ಮೂರನೇ ಪಂದ್ಯವನ್ನು ಪುರುಷ ಮತ್ತು ಮಹಿಳಾ ತಂಡಗಳು ಕಾಕತಾಳೀಯ ಎನ್ನುವಂತೆ ಸೋಲನ್ನು ಅನುಭವಿಸುವ ಮೂಲಕ ಪ್ರೇಕ್ಷಕರನ್ನು ನಿರಾಸೆಗೊಳಿಸಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲಿನಗಾಥೆ..!
ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆರ್‌ಸಿಬಿಗೆ ತವರು ಮಾತ್ರವಲ್ಲ, ಅಭಿಮಾನಿಗಳ ಉತ್ಸಾಹದ ಕೇಂದ್ರವೂ ಹೌದು, ಸಣ್ಣದಾದ ಬೌಂಡರಿಗಳಿಂದ ಇಲ್ಲಿನ ಪಿಚ್ ಬ್ಯಾಟಿಂಗ್ ಗೆ ಸಹಕಾರಿಯಾಗಿದೆ.ಹಾಗಾಗಿ ಇಲ್ಲಿ ಹೆಚ್ಚಾಗಿ ಬೃಹತ್ ಮೊತ್ತವನ್ನು ಗಳಿಸಲಾಗುತ್ತದೆ.ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮಹಿಳಾ ತಂಡವು ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಸತತ ಗೆಲುವನ್ನು ಸಾಧಿಸಿತ್ತು.ಆದರೆ ಫೆಬ್ರುವರಿ 21 ರಂದು ಹೋಂ ಗ್ರೌಂಡ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನ್ನು ಅನುಭವಿಸಿತ್ತು. ಇನ್ನೊಂದೆಡೆಗೆ ಐಪಿಎಲ್ 2025 ರ ಟೂರ್ನಿಯಲ್ಲಿ ಪುರುಷ ಆರ್ಸಿಬಿ ತಂಡವು ಸತತ ಎರಡು ಗೆಲುವಿನ ನಂತರ ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸೋಲನ್ನು ಅನುಭವಿಸುವ ಮೂಲಕ ನಿರಾಸೆಯನ್ನು ಅನುಭವಿಸಿತು.ಅಭಿಮಾನಿಗಳು ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು ಆದರೆ ಇದೆಲ್ಲವೂ ಹುಸಿಯಾಯಿತು.
ಡಬ್ಲ್ಯೂಪಿಎಲ್ 2025: ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲು
ಫೆಬ್ರವರಿ 21ರಂದು ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ಮಹಿಳಾ ತಂಡವು ಮುಂಬೈ ಇಂಡಿಯನ್ಸ್ ಎದುರು ಆಡಿತು. ಸ್ಮೃತಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರಾದರೂ ಬೇಗನೆ ವಿಕೆಟ್ ಒಪ್ಪಿಸಿದರು. ಜೊತೆಗೆ ಎಲಿಸ್ ಪೆರಿ 81 ರನ್ (11 ಬೌಂಡರಿ, 2 ಸಿಕ್ಸರ್) ಗಳಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಮಹಿಳಾ ಆರ್ಸಿಬಿ ತಂಡವು ಆರ್‌ಸಿಬಿ 167/7 ಗಳಿಸಿತು. ಆರ್ಸಿಬಿ ತಂಡವು ನೀಡಿದ 168 ರನ್ ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 19.5 ಓವರ್ ಗಳಲ್ಲಿ ಇನ್ನು ಒಂದು ಎಸೆತ ಬಾಕಿ ಇರುವಂತೆಯೇ ಆರು ವಿಕೆಟ್ ಗಳನ್ನು ಕಳೆದುಕೊಂಡು 170 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಹರ್ಮನ್ ಪ್ರೀತ್ ಕೌರ್ (50) ನ್ಯಾಟ್ ಸಿವರ್ ಬ್ರಂಟ್ ಅವರ 42 ರನ್ ಗಳ ನೆರವಿನಿಂದ ತಂಡವು ಗೆಲುವಿನ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಯಿತು.
?????? ????? ???????! ?
When the chips were down, our middle order stepped up with fight and a dash of flair! ?
A huge positive for us this year! ?#PlayBold #ನಮ್ಮRCB #IPL2025 #RCBvGT pic.twitter.com/Wm8Pk6PSnu
— Royal Challengers Bengaluru (@RCBTweets) April 3, 2025
ಐಪಿಎಲ್ 2025: ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು
ಏಪ್ರಿಲ್ 2ರಂದು ರಜತ್ ಪಾಟಿದಾರ್ ನಾಯಕತ್ವದ ಪುರುಷರ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತು.ಲಿವಿಂಗ್ ಸ್ಟನ್ ಅವರ (54) ಅವರ ಬ್ಯಾಟಿಂಗ್ ನೆರವಿನಿಂದಾಗಿ ಆರ್‌ಸಿಬಿ 169/8ಕ್ಕೆ ಸೀಮಿತವಾಯಿತು. ಗುಜರಾತ್‌ನ ಬೌಲರ್‌ಗಳಾದ ರಬಾಡಾ, ಸಿರಾಜ್, ಕೃಷ್ಣ ಆರ್‌ಸಿಬಿಯನ್ನು ಕಟ್ಟಿಹಾಕಿದರು. ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ನೆರವಿನಿಂದಾಗಿ ಅಂತಿಮವಾಗಿ 13 ಎಸೆತ ಬಾಕಿ ಇರುವಂತೆ ಕೇವಲ ಎರಡು ವಿಕೆಟ್ ಗಳನ್ನು ಕಳೆದುಕೊಂಡು 170ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು.
ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಸಮಾನ ಮೊತ್ತಗಳನ್ನು (167 ಮತ್ತು 169) ಗಳಿಸಿತು,ಆದರೆ ಬೌಲಿಂಗ್ ವೈಪಲ್ಯದಿಂದಾಗಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.ಮುಂಬೈ ಇಂಡಿಯನ್ಸ್ ಕೊನೆ ಓವರ್‌ನಲ್ಲಿ ಗೆದ್ದರೆ, ಗುಜರಾತ್ ಟೈಟಾನ್ಸ್ ತಂಡವು ಸುಲಭವಾಗಿ ಚೇಸ್ ಮಾಡಿತು.ಈಗ ಅಚ್ಚರಿ ಎನ್ನುವಂತೆ ಪುರುಷ ಮತ್ತು ಮಹಿಳಾ ತಂಡಗಳು ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಹೋಂ ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವುದು ನಿರಾಸೆಯನ್ನುಂಟು ಮಾಡಿದೆ.ಸೋಲಿನ ಹೊರತಾಗಿಯೂ ಆರ್‌ಸಿಬಿ ತನ್ನ ಹೋರಾಟದ ಚೈತನ್ಯವನ್ನು ಉಳಿಸಿಕೊಂಡಿದೆ.ಪುರುಷರ ತಂಡಕ್ಕೆ ಇನ್ನೂ ಅವಕಾಶಗಳಿವೆ.ಆದರೆ ಈ ಸೋಲುಗಳು ಆರ್‌ಸಿಬಿಯ ಪಯಣದ ಭಾಗವಷ್ಟೇ,ಸೋಲಿನ ಹೊರತಾಗಿಯೂ ಅಭಿಮಾನಿಗಳ ಪ್ರೀತಿ ಅಷ್ಟೇ ಅಚಲವಾಗಿದೆ ಎಂದು ಹೇಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









