)
ICC Womens World Cup 2025: 2025ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾ ತಂಡಕ್ಕೆ ಟೀಂ ಇಂಡಿಯಾ ಮಣ್ಣುಮುಕ್ಕಿಸಿದೆ. ಏಷ್ಯಾಕಪ್ನಲ್ಲಿ ಪುರುಷರ ತಂಡ ಪಾಕಿಸ್ತಾನಕ್ಕೆ ಮೂರು ಬಾರಿ ಸೋಲಿನ ರುಚಿ ತೋರಿಸಿದ ಬಳಿಕ ಇದೀಗ ಭಾರತದ ಮಹಿಳೆಯರು ಪಾಕ್ ತಂಡಕ್ಕೆ ಮತ್ತೊಂದು ಪೆಟ್ಟು ನೀಡಿದ್ದಾರೆ. ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ 88 ರನ್ಗಳಿಂದ ಪಾಕ್ ತಂಡಕ್ಕೆ ಭಾರತದ ಮಹಿಳಾ ತಂಡ ಸೋಲಿನ ರುಚಿ ತೋರಿಸಿತು.
ಈ ಪಂದ್ಯದ ವೇಳೆ ಕೆಲವು ಗೊಂದಲದ ಪ್ರಸಂಗಗಳು ಜರುಗಿವೆ. ಟಾಸ್ ಮಾಡುವ ವೇಳೆಯೇ ವಿವಾದ ಭುಗಿಲೆದ್ದಿತ್ತು. ಮ್ಯಾಚ್ ರೆಫರಿಯ ತಪ್ಪಿನಿಂದ ಭಾರತ ತಂಡವು ಟಾಸ್ ಸೋಲಬೇಕಾಯಿತು. ಭಾರತ Vs ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡು 247 ರನ್ ಗಳಿಸಿತು. ಭಾರತ ಪರ ಹರ್ಲೀನ್ ಡಿಯೋಲ್ ಗರಿಷ್ಠ ಸ್ಕೋರ್ ಮಾಡಿದರು.
ಇದನ್ನೂ ಓದಿ: ಮಹಿಳಾ ತಂಡದಲ್ಲೂ ನೋ-ಹ್ಯಾಂಡ್ಶೇಕ್ ಸಮರ
ಹರ್ಲೀನ್ 65 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಇದ್ದ 46 ರನ್ ಗಳಿಸಿ ಉತ್ತಮ ಆಟವಾಡಿದರು. ಇನ್ನುಳಿದಂತೆ ರಿಚಾ ಘೋಷ್ (ಔಟಾಗದೆ 35), ಜೆಮಿಮಾ ರೋಡ್ರಿಗಸ್ (32), ಪ್ರತೀಕ್ ರಾವಲ್ (31) ಮತ್ತು ದೀಪ್ತಿ ಶರ್ಮಾ (25) ರನ್ ಗಳಿಸಿದರು. ಪಾಕಿಸ್ತಾನದ ಪರ ಡಯಾನಾ ಬೇಗ್ 4 ವಿಕೆಟ್ ಪಡೆದು ಮಿಂಚಿದರೆ, ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ತಲಾ 2, ರಮೀನ್ ಶಮಿಮ್ ಮತ್ತು ನಶ್ರಾ ಸಂಧು ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಮೊದಲು ನಾಟೌಟ್ ನಂತರ Out ಘೋಷಣೆ
One of THE most bizarre passages of play.
Huge LBW appeal. Not given out.
Deepti throws (ofc she does), direct hit.
Muneeba grounded bat but was in the air when the stump was disturbed.
After ages, TV umpire says out.
Turns out, LBW would have been out. pic.twitter.com/8jAjUuXZR2
— Vinayakk (@vinayakkm) October 5, 2025
248 ರನ್ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ತಂಡವು ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ನಲುಗಿತು. ಹೀಗಾಗಿ 43 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನ ಕಳೆದುಕೊಂಡು ಕೇವಲ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಬ್ಯಾಟಿಂಗ್ ಮಾಡಲು ಬಂದ ತಕ್ಷಣ ಪಂದ್ಯದ ಸಮಯದಲ್ಲಿ ಮತ್ತೊಂದು ವಿವಾದ ಉಂಟಾಗಿತ್ತು. ಪಾಕ್ ಬ್ಯಾಟ್ಸ್ಮನ್ ಮುನೀಬಾ ಅಲಿ ಅವರ ರನೌಟ್ ವಿವಾದಾತ್ಮಕವಾಗಿತ್ತು. ಮುನೀಬಾ ಅಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತೀಯ ಬೌಲರ್ ಕ್ರಾಂತಿ ಗೌಡ್ ಬೌಲಿಂಗ್ ಮಾಡುತ್ತಿದ್ದರು. ಕ್ರಾಂತಿ ಅದ್ಭುತವಾಗಿ ಬೌಲಿಂಗ್ ಮಾಡಿ ಮುನೀಬಾರಿಗೆ ಸಂಕಷ್ಟ ತಂದೊಡ್ಡಿದ್ದರು. ಅವರ ಓವರ್ನ ಕೊನೆಯ ಚೆಂಡು ಮುನೀಬಾ ಅಲಿ ಅವರ ಪ್ಯಾಡ್ಗೆ ಬಡಿಯಿತು. ಈ ವೇಳೆ ಭಾರತ LBWಗೆ ಮನವಿ ಮಾಡಿತು. ಆದರೆ ಈ ವೇಳೆ ರಿಚಾ ಘೋಷ್ DRS ತೆಗೆದುಕೊಳ್ಳಲಿಲ್ಲ. ಭಾರತ ತಂಡವು ರಿವ್ಯೂ ಸ್ವೀಕರಿಸಲಿಲ್ಲ.
ಆದರೆ ದೀಪ್ತಿ ಶರ್ಮಾ ಯಾವುದೇ ತಪ್ಪು ಮಾಡದೆ ನೇರವಾಗಿ ಸ್ಟಂಪ್ಗೆ ಚೆಂಡನ್ನ ಎಸೆದರು. ಮುನೀಬಾ ಕ್ರೀಸ್ನಿಂದ ಹೊರಗಿರುವುದು ಅವರಿಗೆ ತಿಳಿದಿರಲಿಲ್ಲ. ಈ ವೇಳೆ ಭಾರತವು ರನ್ ಔಟ್ಗೆ ಮನವಿ ಮಾಡಿತು. ಮುನೀಬಾ ಒಮ್ಮೆ ರನೌಟ್ ಆಗುವ ಮೊದಲು ಕ್ರೀಸ್ನೊಳಗೆ ತನ್ನ ಬ್ಯಾಟ್ ಇಟ್ಟಿದ್ದರು. ನಂತರ ಕ್ರೀಸ್ನಿಂದ ಹೊರಬಂದ ನಂತರ ಚೆಂಡು ಸ್ಟಂಪ್ಗೆ ಬಡಿಯಿತು. ಈ ವೇಳೆ ಅವರ ಬ್ಯಾಟ್ ಗಾಳಿಯಲ್ಲಿತ್ತು. ಮೂರನೇ ಅಂಪೈರ್ ಮೊದಲಿಗೆ ಮುನೀಬಾ ನಾಟೌಟ್ ಎಂದು ಘೋಷಿಸಿದ್ದರು. ಬಳಿಕ ಮತ್ತೊಮ್ಮೆ ಪರಿಶೀಲಿಸಿದಾಗ ಬ್ಯಾಟ್ ಗಾಳಿಯಲ್ಲಿ ಇರುವುದು ಗೊತ್ತಾಗಿದ್ದರಿಂದ ಮೂರನೇ ಅಂಪೈರ್ ಔಟ್ ಅಂತಾ ಘೋಷಿಸಿದರು.
ಹೀಗಾಗಿ ಪಾಕಿಸ್ತಾನದ ಡ್ರೆಸ್ಸಿಂಗ್ ರೂಂನಲ್ಲಿ ಆತಂಕ ಶುರುವಾಯಿತು. ಕೂಡಲೇ ಪಾಕಿಸ್ತಾನ ನಾಯಕಿ ಫಾತಿಮಾ ಮೈದಾನಕ್ಕೆ ಬಂದು ನಾಲ್ಕನೇ ಅಂಪೈರ್ ಜೊತೆಗೆ ಚರ್ಚಿಸಿದರು. ಆದರೆ ಮುನೀಬಾ ಬೌಂಡರಿ ಲೈನ್ ಬಳಿ ನಿಂತಿದ್ದರು. ಈ ಡ್ರಾಮಾ ಮೈದಾನದಲ್ಲಿ ಬಹಳ ಹೊತ್ತು ಮುಂದುವರೆಯಿತು. ಕೊನೆಗೆ ಮುನೀಬಾರನ್ನ ಔಟ್ ಎಂದು ಘೋಷಿಸಲಾಯಿತು. ಮುನೀಬಾ ರನೌಟ್ ಆಗಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕರು ಅದು ನಾಟೌಟ್ ಎಂದರೆ, ಇನ್ನೂ ಕೆಲವರು ಅಂಪೈರ್ ತೀರ್ಮಾನ ಸರಿ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆ ಕೂಡ ನಡೆಯುತ್ತಿದೆ.