WATCH: ಆರ್.ಅಶ್ವಿನ್ ಎಡಗೈ ಬ್ಯಾಟಿಂಗ್ ಗೆ ಮನಸೋತ ಫ್ಯಾನ್ಸ್ ಹೇಳಿದ್ದೇನು ಗೊತ್ತೇ ?

ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಬೌಲಿಂಗ್ ನಿಂದಾಗಿ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನೂ ಆಗಾಗ ಅವರು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚುವ ಮೂಲಕ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಾರೆ.

Last Updated : Nov 15, 2019, 11:41 AM IST
WATCH: ಆರ್.ಅಶ್ವಿನ್ ಎಡಗೈ ಬ್ಯಾಟಿಂಗ್ ಗೆ ಮನಸೋತ ಫ್ಯಾನ್ಸ್ ಹೇಳಿದ್ದೇನು ಗೊತ್ತೇ ? title=
Photo courtesy: Instagram

ನವದೆಹಲಿ: ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಬೌಲಿಂಗ್ ನಿಂದಾಗಿ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನೂ ಆಗಾಗ ಅವರು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚುವ ಮೂಲಕ ಆಲ್ ರೌಂಡರ್ ಪಾತ್ರವನ್ನು ನಿರ್ವಹಿಸುತ್ತಾರೆ.

ಈಗ ಭಾರತೀಯ ಕ್ರಿಕೆಟ್ ತಂಡವು ಹಂಚಿಕೊಂಡಿರುವ ಇನ್ಸ್ಟಾಗ್ರಾಂ ವೀಡಿಯೋವೊಂದರಲ್ಲಿ ಆರ್.ಅಶ್ವಿನ್ ತಮ್ಮ ಎಡಗೈ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.' ನಿಮ್ಮ ಫೋನ್ ಅನ್ನು ಪರೀಕ್ಷಿಸಬೇಡಿ ಇದು ನಿಜಕ್ಕೂ ಎಡಗೈ ಅಶ್ವಿನ್ ಬ್ಯಾಟಿಂಗ್" ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.

 
 
 
 

 
 
 
 
 
 
 
 
 

No. Do not check your phone 😆😂 It's indeed a left-handed Ashwin Batting 😮😉 #TeamIndia #INDvBAN

A post shared by Team India (@indiancricketteam) on

ಈ ವೀಡಿಯೊ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಅಶ್ವಿನ್ ಅವರ ಬ್ಯಾಟ್ ಸಾಮರ್ಥ್ಯಕ್ಕೆ ಅಚ್ಚರಿ ವ್ಯಕ್ತಪಡಿಸಿ ಅವರಲ್ಲಿ ಕೆಲವರು ರಿಷಭ್ ಪಂತ್ ಗಿಂತ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಹೇಳಿದರು. ಇತ್ತೀಚಿಗೆ ರಿಷಭ್ ಪಂತ್ ಅವರ  ಆಟದ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ ಈ ಹಿನ್ನಲೆಯಲ್ಲಿ ಅವರಿಗಿಂತ ಉತ್ತಮ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ.

'ಪ್ರತಿದಿನ, ಪ್ರತಿ ನಿಮಿಷದಲ್ಲಿ ರಿಷಭ್ ಪಂತ್ ಬಗ್ಗೆ ಸಾಕಷ್ಟು ಮಾತುಕತೆ ನಡೆಯುತ್ತಿದೆ ಎಂದು ನಿಮಗೆ ತಿಳಿದಿದೆ. ಅವರು ಮೈದಾನದಲ್ಲಿ ಏನು ಮಾಡಲು ಬಯಸುತ್ತಾರೋ ಅದನ್ನು ಮಾಡಲು ಅವರಿಗೆ ಅವಕಾಶ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ಸ್ವಲ್ಪ ಸಮಯದವರೆಗೆ  ರಿಷಭದಿಂದ ದೂರವಿಡುವಂತೆ ನಾನು ವಿನಂತಿಸುತ್ತೇನೆ' ರೋಹಿತ್ಶರ್ಮಾ ಹೇಳಿದ್ದರು.

Trending News