cricketers who never play World Cup for their country: ಪ್ರತಿಯೊಬ್ಬ ಕ್ರಿಕೆಟಿಗನ ಕನಸು ತನ್ನ ದೇಶಕ್ಕಾಗಿ ಒಮ್ಮೆಯಾದರೂ ವಿಶ್ವಕಪ್ ಆಡುವುದು ಮತ್ತು ಟ್ರೋಫಿಯನ್ನು ಗೆಲ್ಲುವ ಮೂಲಕ ಸಾಕಷ್ಟು ಖ್ಯಾತಿಯನ್ನು ಗಳಿಸುವುದು. ಆದರೆ ತಮ್ಮ ದೇಶಕ್ಕಾಗಿ ವಿಶ್ವಕಪ್‌ನಲ್ಲಿ ಎಂದಿಗೂ ಆಡಲು ಸಾಧ್ಯವಾಗದಷ್ಟು ದುರದೃಷ್ಟಕರರಾದ ಅನೇಕ ಕ್ರಿಕೆಟಿಗರಿದ್ದಾರೆ. ಅಂತಹ 5 ಕ್ರಿಕೆಟಿಗರು ಯಾರೆಂಬುದನ್ನು ನೋಡೋಣ:
ಇದನ್ನೂ ಓದಿ: ಶನಿ ಗೋಚರದ ನಂತರ ಮಾರ್ಚ್ 29ರಿಂದ ಈ 3 ರಾಶಿಯ ಜನರು ಸಮಸ್ಯೆಗಳನ್ನ ಎದುರಿಸುತ್ತಾರೆ!!
ವಿವಿಎಸ್ ಲಕ್ಷ್ಮಣ್ (ಭಾರತ)
ವಿವಿಎಸ್ ಲಕ್ಷ್ಮಣ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಟೈಲಿಶ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ವಿವಿಎಸ್ ಲಕ್ಷ್ಮಣ್ 16 ವರ್ಷಗಳಲ್ಲಿ ಭಾರತ ಪರ 134 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಮ್ಯಾರಥಾನ್ ಇನ್ನಿಂಗ್ಸ್‌ಗಳನ್ನು ಕೂಡ ಆಡಿದ್ದಾರೆ. ಟೆಸ್ಟ್‌ನಲ್ಲಿ ಅದ್ಭುತವಾಗಿದ್ದ ಲಕ್ಷ್ಮಣ್, ಏಕದಿನ ವೃತ್ತಿಜೀವನ ಎಂದಿಗೂ ಉತ್ತಮವಾಗಲಿಲ್ಲ. ೨೦೦೩ ರ ವಿಶ್ವಕಪ್ ತಂಡದಲ್ಲಿ ಸೇರ್ಪಡೆಗೊಳ್ಳಲು ವಿವಿಎಸ್ ಲಕ್ಷ್ಮಣ್ ಅವರಿಗೆ ಉತ್ತಮ ಅವಕಾಶವಿತ್ತು, ಆದರೆ ಅವರನ್ನು ನಿರ್ಲಕ್ಷಿಸಲಾಯಿತು. ಲಕ್ಷ್ಮಣ್ ಅವರನ್ನು ಸೇರಿಸಿಕೊಳ್ಳದಿರುವುದು ತಪ್ಪು ಎಂದು ಆಗಿನ ಭಾರತದ ನಾಯಕ ಸೌರವ್ ಗಂಗೂಲಿ ಆಗ ಒಪ್ಪಿಕೊಂಡಿದ್ದರು.
ಜಸ್ಟಿನ್ ಲ್ಯಾಂಗರ್ (ಆಸ್ಟ್ರೇಲಿಯಾ)
ಜಸ್ಟಿನ್ ಲ್ಯಾಂಗರ್ ಅವರನ್ನು ಅನೇಕ ಅಭಿಮಾನಿಗಳು ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಆರಂಭಿಕ ಆಟಗಾರ ಎಂದು ಪರಿಗಣಿಸುತ್ತಾರೆ. ಜಸ್ಟಿನ್ ಲ್ಯಾಂಗರ್ ಮತ್ತು ಮ್ಯಾಥ್ಯೂ ಹೇಡನ್ ಅತ್ಯಂತ ಅಪಾಯಕಾರಿ ಆರಂಭಿಕ ಜೋಡಿಗಳಲ್ಲಿ ಒಬ್ಬರಾಗಿದ್ದರು. ಆದರೆ ODIಗಳಲ್ಲಿ, ಗಿಲ್‌ಕ್ರಿಸ್ಟ್ ಮತ್ತು ಹೇಡನ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತಿದ್ದರು. ಟೆಸ್ಟ್‌ನಲ್ಲಿ ಲ್ಯಾಂಗರ್ ಅವರ ಅಂಕಿಅಂಶಗಳು ಬಹಳ ಪ್ರಭಾವಶಾಲಿಯಾಗಿದ್ದರೂ, ಏಕದಿನ ಮಾದರಿಯಲ್ಲಿ ಅವರ ದಾಖಲೆ ತುಂಬಾ ಕಳಪೆಯಾಗಿದೆ. ಜಸ್ಟಿನ್ ಲ್ಯಾಂಗರ್ ಕೇವಲ ಎಂಟು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದರು. ಅಲ್ಲದೆ, ಅವರಿಗೆ ಆಸ್ಟ್ರೇಲಿಯಾ ಪರ ವಿಶ್ವಕಪ್ ಆಡಲು ಅವಕಾಶ ಸಿಗಲಿಲ್ಲ.
ಅಲಿಸ್ಟೈರ್ ಕುಕ್ (ಇಂಗ್ಲೆಂಡ್)
ಅಲಸ್ಟೈರ್ ಕುಕ್ ಇಂಗ್ಲೆಂಡ್ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಇಂಗ್ಲೆಂಡ್‌ನ ಮಾಜಿ ನಾಯಕ ಟೆಸ್ಟ್ ಕ್ರಿಕೆಟ್‌ನಲ್ಲಿ 12,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಒಂದು ಹಂತದಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ಗಳ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಅವರಿಗೆ ಸಿಕ್ಕಿತ್ತು. ಆದರೂ ಏಕದಿನ ಪಂದ್ಯಗಳಲ್ಲಿ ಅಲಸ್ಟೈರ್ ಕುಕ್ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. 2011 ರ ವಿಶ್ವಕಪ್ ನಂತರ ಆಂಡ್ರ್ಯೂ ಸ್ಟ್ರಾಸ್ ರಾಜೀನಾಮೆ ನೀಡಿದ ನಂತರ ಅಲಸ್ಟೈರ್ ಕುಕ್ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವವನ್ನು ವಹಿಸಿಕೊಂಡರು. ಆದರೆ, 2015 ರ ವಿಶ್ವಕಪ್‌ಗೆ ಮೊದಲು, ಅವರು ಇಂಗ್ಲೆಂಡ್ ಏಕದಿನ ತಂಡದ ನಾಯಕತ್ವವನ್ನು ತೊರೆಯಬೇಕಾಯಿತು.
ಸ್ಟುವರ್ಟ್ ಮೆಕ್‌ಗಿಲ್ (ಆಸ್ಟ್ರೇಲಿಯಾ)
ಸ್ಟುವರ್ಟ್ ಮ್ಯಾಕ್‌ಗಿಲ್ ಅವರನ್ನು ಇತಿಹಾಸದ ಅತ್ಯಂತ ದುರದೃಷ್ಟಕರ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಬಹುದು. ಈ ಲೆಗ್ ಸ್ಪಿನ್ನರ್‌ನ ಅದೃಷ್ಟ ಶೇನ್ ವಾರ್ನ್ ಯುಗದಲ್ಲಿ ಶೈನ್ ಆಗಲೇ ಇಲ್ಲ. ಸ್ಟುವರ್ಟ್ ಮ್ಯಾಕ್‌ಗಿಲ್ ಆಸ್ಟ್ರೇಲಿಯಾ ಪರ 44 ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಆಟಗಾರ ವಿಶ್ವಕಪ್‌ನಲ್ಲಿ ಎಂದಿಗೂ ಆಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ನನ್ನ ಹೆಂಡತಿಗೆ ಕೋಪ ಬಂದರೆ ಹೀಗೆ ಕರೀತಿನಿ: ವಿಜಯಲಕ್ಷ್ಮೀ ಅವರನ್ನ ಏನಂತ ಕರೀತಾರೆ ಗೊತ್ತಾ ನಟ ದರ್ಶನ್
ಎರಪಲ್ಲಿ ಪ್ರಸನ್ನ (ಭಾರತ)
ಎರಪಳ್ಳಿ ಪ್ರಸನ್ನ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಫ್-ಸ್ಪಿನ್ನರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ ಅವರಿಗೆ ಭಾರತ ಪರ ವಿಶ್ವಕಪ್‌ನಲ್ಲಿ ಆಡಲು ಎಂದಿಗೂ ಅವಕಾಶ ಸಿಗಲಿಲ್ಲ. ಭಾರತದ ಪರ 49 ಟೆಸ್ಟ್ ಪಂದ್ಯಗಳಲ್ಲಿ ಎರಪಳ್ಳಿ ಪ್ರಸನ್ನ 189 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಆಯ್ಕೆದಾರರು ಅವರನ್ನು ಏಕದಿನ ತಂಡಕ್ಕೆ ಎಂದಿಗೂ ಪರಿಗಣಿಸಲಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









