ಒಂದೇ ತಂಡದ ವಿರುದ್ಧ 19 ಶತಕ ಬಾರಿಸಿದ ಲೆಜೆಂಡರಿ ಬ್ಯಾಟರ್... ನಿವೃತ್ತಿಯಾಗಿ 77 ವರ್ಷ ಕಳೆದರೂ ಆ ದಾಖಲೆಯ ಸನಿಹಕ್ಕೂ ಯಾರು ಹೋಗಿಲ್ಲ!

unbreakable cricket record: ಕ್ರಿಕೆಟ್‌ನಲ್ಲಿ ಪ್ರತಿದಿನ ಅನೇಕ ದಾಖಲೆಗಳು ಮುರಿಯಲ್ಪಡುತ್ತವೆ ಮತ್ತು ಹಲವು ಹೊಸ ದಾಖಲೆಗಳು ನಿರ್ಮಿಸಲ್ಪಡುತ್ತವೆ. ಆದರೆ ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿರುವ ಈ 5 ದಾಖಲೆಗಳ ಸನಿಹಕ್ಕೂ ಯಾರೂ ಹೋಗಲು ಸಾಧ್ಯವಾಗಿಲ್ಲ. 

Written by - Chetana Devarmani | Last Updated : Mar 3, 2025, 01:54 PM IST
  • ದಶಕಗಳಿಂದ ಮುರಿಯದೆ ಉಳಿದಿರುವ 5 ವಿಶ್ವ ದಾಖಲೆಗಳು
  • ಒಂದೇ ತಂಡದ ವಿರುದ್ಧ 19 ಶತಕ ಬಾರಿಸಿದ ಲೆಜೆಂಡರಿ ಬ್ಯಾಟರ್
  • 68 ಟೆಸ್ಟ್ ಪಂದ್ಯಗಳಲ್ಲಿ 6000 ರನ್ ಗಳಿಸಿದ ಡಾನ್ ಬ್ರಾಡ್ಮನ್
ಒಂದೇ ತಂಡದ ವಿರುದ್ಧ 19 ಶತಕ ಬಾರಿಸಿದ ಲೆಜೆಂಡರಿ ಬ್ಯಾಟರ್... ನಿವೃತ್ತಿಯಾಗಿ 77 ವರ್ಷ ಕಳೆದರೂ ಆ ದಾಖಲೆಯ ಸನಿಹಕ್ಕೂ ಯಾರು ಹೋಗಿಲ್ಲ!

ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಡಾನ್ ಬ್ರಾಡ್ಮನ್ ಹೆಸರನ್ನು ಬಹಳ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. ಈ ಲೆಜೆಂಡರಿ ಬ್ಯಾಟರ್ ತಮ್ಮ 20 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕನ ಡಾನ್ ಬ್ರಾಡ್ಮನ್ ಕೇವಲ 52 ಟೆಸ್ಟ್ ಪಂದ್ಯಗಳಲ್ಲಿ 6 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು. ಡಾನ್ ಬ್ರಾಡ್ಮನ್ ಹೆಸರಿನಲ್ಲಿ 5 ಶ್ರೇಷ್ಠ ದಾಖಲೆಗಳಿದ್ದು, ಯಾಔ ಆಟಗಾರನಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಡಾನ್ ಬ್ರಾಡ್ಮನ್ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವನ್ನು ಅನೇಕ ಟೆಸ್ಟ್ ಪಂದ್ಯಗಳಲ್ಲಿ ಗೆಲುವಿನತ್ತ ಕೊಂಡೊಯ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 299 ರನ್‌ಗಳೊಂದಿಗೆ ಅಜೇಯರಾಗಿ ಹಿಂದಿರುಗಿದ ಏಕೈಕ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್.

Add Zee News as a Preferred Source

ಮಾಜಿ ಬಲಗೈ ಆಟಗಾರ ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯ ದಾಖಲೆಯನ್ನು ಹೊಂದಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 99 ರ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 6996 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ ಅವರ ಸರಾಸರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಶ್ರೇಷ್ಠ ಬ್ಯಾಟ್ಸ್‌ಮನ್‌ ಡಾನ್ ಬ್ರಾಡ್ಮನ್ ಈ ದಾಖಲೆಯನ್ನು ಮುರಿಯುವುದು ಅಸಾಧ್ಯ. 

ಇದನ್ನೂ ಓದಿ: Champions Trophyಯಲ್ಲಿ ಕೊಹ್ಲಿ ಔಟಾಗಿದ್ದೇ ಅನುಷ್ಕಾ ಪ್ರತಿಕ್ರಿಯೆ ಹೇಗಿತ್ತು? ವಿಡಿಯೋ ವೈರಲ್...!!

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಅವರು ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 37 ಟೆಸ್ಟ್ ಪಂದ್ಯಗಳಲ್ಲಿ 19 ಶತಕಗಳನ್ನು ಗಳಿಸಿದ್ದಾರೆ. ಇದು ಒಂದೇ ತಂಡದ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ ಅತ್ಯಧಿಕ ಶತಕವಾಗಿದೆ. ಡಾನ್ ಬ್ರಾಡ್ಮನ್ ನಂತರ ಈ ಪಟ್ಟಿಯಲ್ಲಿರುವ ಎರಡನೇ ಹೆಸರು ವೆಸ್ಟ್ ಇಂಡೀಸ್ ವಿರುದ್ಧ 13 ಶತಕಗಳನ್ನು ಗಳಿಸಿದ ಟೀಮ್‌ ಇಂಡಿಯಾದ ದಂತಕಥೆ ಸುನಿಲ್ ಗವಾಸ್ಕರ್.

1936-37ರಲ್ಲಿ ಡಾನ್ ಬ್ರಾಡ್ಮನ್ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯಲ್ಲಿ 810 ರನ್ ಗಳಿಸಿದ್ದರು. ಇದು ಟೆಸ್ಟ್ ಸರಣಿಯೊಂದರಲ್ಲಿ ತಂಡದ ಕ್ಯಾಪ್ಟನ್‌ ಒಬ್ಬ ಗಳಿಸಿದ ಅತಿ ಹೆಚ್ಚು ರನ್‌ಗಳಾಗಿವೆ. ಇಲ್ಲಿಯವರೆಗೆ ಯಾವುದೇ ಕ್ರಿಕೆಟ್‌ ಟೀಮ್‌ ಕ್ಯಾಪ್ಟನ್‌ ಬ್ರಾಡ್ಮನ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಡಾನ್ ಬ್ರಾಡ್ಮನ್ ನಂತರ, ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನ ಗ್ರಹಾಂ ಗೂಚ್ (752) ಮತ್ತು ಸುನಿಲ್ ಗವಾಸ್ಕರ್ (732).

ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನದಲ್ಲಿ ತ್ರಿಶತಕ ಗಳಿಸಿದ್ದಾರೆ. ಇದು ಡಾನ್ ಬ್ರಾಡ್ಮನ್ ಹೆಸರಲ್ಲಿರುವ ವಿಶೀಷ್ಟ ವಿಶ್ವ ದಾಖಲೆ. ಡಾನ್ ಬ್ರಾಡ್ಮನ್ 1930 ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ಬ್ರಾಡ್ಮನ್ ನಂತರ, ವಿಶ್ವದ ಯಾವುದೇ ಬ್ಯಾಟ್ಸ್‌ಮನ್ ಒಂದೇ ದಿನದಲ್ಲಿ ತ್ರಿಶತಕ ಗಳಿಸಲು ಸಾಧ್ಯವಾಗಿಲ್ಲ. ಇದಲ್ಲದೆ, ಬ್ರಾಡ್ಮನ್ ಸತತ ಆರು ಟೆಸ್ಟ್‌ಗಳಲ್ಲಿ ಆರು ಶತಕಗಳನ್ನು ಗಳಿಸಿದ್ದಾರೆ. ಈ ದಾಖಲೆ ಇಂದಿಗೂ ಹಾಗೆಯೇ ಉಳಿದಿದೆ. ಈ 6 ಶತಕಗಳಲ್ಲಿ ಎರಡು ದ್ವಿಶತಕಗಳು ಕೂಡ ಸೇರಿವೆ. ಡಾನ್ ಬ್ರಾಡ್ಮನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಇನ್ನಿಂಗ್ಸ್‌ಗಳಲ್ಲಿ 2000, 3000, 4000, 5000 ಮತ್ತು 6000 ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಅವರು 68 ಇನ್ನಿಂಗ್ಸ್‌ಗಳಲ್ಲಿ 6000 ರನ್‌ಗಳನ್ನು ತಲುಪಿದರು.  

ಇದನ್ನೂ ಓದಿ: Champions Trophy IND Vs NZ: ವರುಣ್ ಚಕ್ರವರ್ತಿ 5 ವಿಕೆಟ್‌ಗಳ ನೆರವಿನಿಂದ ಟೀಂ ಇಂಡಿಯಾಗೆ 44 ರನ್‌ಗಳ ಗೆಲುವು

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News