Kapil Dev on Rohit Sharma captaincy: ಹಿಟ್ ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾದ ಸೋಲು ಸ್ಪಷ್ಟವಾಗಿ ಅವರ ನಾಯಕತ್ವದ ಮೇಲೆ ಆಳವಾದ ಕಳಂಕವನ್ನುಂಟು ಮಾಡಿದೆ. ಈಗ ಟೀಮ್ ಇಂಡಿಯಾವನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೊಂಡೊಯ್ಯುವುದು ಹಿಟ್‌ಮ್ಯಾನ್‌ಗೆ 'ಟ್ರಯಲ್ ಬೈ ಫೈರ್'ಗಿಂತ ಕಡಿಮೆಯಿಲ್ಲ.
ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ 10 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅದರ ನಂತರ ನಾಯಕತ್ವದ ವಿಷಯ ಮತ್ತೊಮ್ಮೆ ವೇಗ ಪಡೆಯುತ್ತಿದೆ. ಇದೇ ವೇಳೆ ಮಾಜಿ ನಾಯಕ ಕಪಿಲ್ ದೇವ್ ಈ ವಿಚಾರವಾಗಿ ಮನದಾಳದ ಮಾತುಗಳನ್ನಾಡಿದ್ದಾರೆ.
ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿ ಅದ್ಭುತ ಜಯ ದಾಖಲಿಸಿದ ಜಸ್ಪ್ರೀತ್ ಬುಮ್ರಾರನ್ನು, ರೋಹಿತ್ ನಂತರ ಟೆಸ್ಟ್ ನಾಯಕತ್ವಕ್ಕೆ ಎರಡನೇ ಆಯ್ಕೆ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಈ ಇಬ್ಬರನ್ನೂ ಅನೇಕ ವಿಚಾರಗಳಲ್ಲಿ ಹೋಲಿಕೆ ಮಾಡಲಾಗುತ್ತಿದೆ. ಆದರೆ ಅಂತಿಮವಾಗಿ ಇವರಿಬ್ಬರಲ್ಲಿ ಯಾರು ಉತ್ತಮ ಎಂಬುದು ಕಪಿಲ್ ದೇವ್ ಹೇಳಿಕೆಯಿಂದ ಸ್ಪಷ್ಟವಾಗಲಿದೆ.
ಕಪಿಲ್ ದೇವ್ ಹೇಳಿದ್ದೇನು?
ನಾಯಕತ್ವದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಪಿಲ್ ದೇವ್, "ಉತ್ತಮ ಪ್ರದರ್ಶನದೊಂದಿಗೆ ನೀವು ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಎಂದು ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ಮುಂಚೆಯೇ ಯೋಚಿಸಿದ್ದೆ. ಹಾಗೆಯೇ, ಕಳಪೆ ಪ್ರದರ್ಶನದೊಂದಿಗೆ ಅವರು ಅಲ್ಲಿ ಆಡಲು ಅರ್ಹರಲ್ಲ ಎಂದು ಹೇಳುವುದು ಕೂಡ ಒಳ್ಳೆಯದಲ್ಲ. ಆಟಗಾರನಾಗಿ ಅಥವಾ ನಾಯಕನಾಗಿ ಎಷ್ಟೇ ಪಂದ್ಯಗಳನ್ನಾಡಿದರೂ, ಏರಿಳಿತಗಳು ಇರುತ್ತವೆ" ಎಂದಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಸೋತ ದುಃಖದಲ್ಲಿ ಸಂಚಲನದ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ..! ಅಭಿಮಾನಿಗಳಿಗೆ ಆಘಾತ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಬಂದಿದೆ. ಇದೀಗ ಭಾರತಕ್ಕೆ ಫೈನಲ್ ಹಾದಿ ಇನ್ನಷ್ಟು ಕಷ್ಟಕರವಾಗಿದೆ. ಮೂರನೇ ಟೆಸ್ಟ್ ಡಿಸೆಂಬರ್ 14 ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಬಿಜಿಟಿಯಲ್ಲಿ ಉಳಿದಿರುವ ಟೆಸ್ಟ್‌ಗಳು ರೋಹಿತ್‌ಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ