ಸತತ 21 ಓವರ್ ಮೇಡನ್ ಮಾಡಿದ್ದ ಮಾಜಿ ಆಲ್‌ರೌಂಡರ್ ಬಾಪು ನಾಡ್ಕರ್ಣಿ ಇನ್ನಿಲ್ಲ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಓವರ್‌ಗಳನ್ನು ಮೇಡನ್ ಮಾಡುವ ಮೂಲಕ ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್‌ರೌಂಡರ್ ಬಾಪು ನಾಡ್ಕರ್ಣಿ ಶುಕ್ರವಾರ ನಿಧನರಾದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿವೆ. 

Last Updated : Jan 17, 2020, 11:42 PM IST
 ಸತತ 21 ಓವರ್ ಮೇಡನ್ ಮಾಡಿದ್ದ ಮಾಜಿ ಆಲ್‌ರೌಂಡರ್ ಬಾಪು ನಾಡ್ಕರ್ಣಿ ಇನ್ನಿಲ್ಲ  title=

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಓವರ್‌ಗಳನ್ನು ಮೇಡನ್ ಮಾಡುವ ಮೂಲಕ ಹೆಸರುವಾಸಿಯಾಗಿದ್ದ ಭಾರತದ ಮಾಜಿ ಆಲ್‌ರೌಂಡರ್ ಬಾಪು ನಾಡ್ಕರ್ಣಿ ಶುಕ್ರವಾರ ನಿಧನರಾದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿವೆ. 

ನಾಡ್ಕರ್ಣಿ ಅವರಿಗೆ 86 ವರ್ಷ ವಯಸ್ಸಾಗಿತ್ತು ಮತ್ತು ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅವರು ವೃದ್ಧಾಪ್ಯ ಸಂಬಂಧಿತ ಸಮಸ್ಯೆಗಳಿಂದ ನಿಧನರಾದರು ಎಂದು ಅವರ ಸೊಸೆ ವಿಜಯ್ ಖರೆ ಪಿಟಿಐಗೆ ತಿಳಿಸಿದರು.

ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಬೌಲರ್ ಆಗಿದ್ದ ನಾಡ್ಕರ್ಣಿ ಅವರು 41 ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು 1414 ರನ್ ಗಳಿಸಿ 88 ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. 6/43 ವಿಕೆಟ್ ಗಳಿಸಿದ್ದು ಅವರ ಅತ್ಯುತ್ತಮ ಬೌಲಿಂಗ್ ಆಗಿದೆ.

ನಾಡ್ಕರ್ಣಿ ಮುಂಬೈನ ಪ್ರಮುಖ ಆಟಗಾರರಾಗಿದ್ದು,191 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ 500 ವಿಕೆಟ್ ಪಡೆದಿದ್ದಲ್ಲದೆ 8880 ರನ್ ಗಳಿಸಿದ್ದಾರೆ. ನಾಸಿಕ್ ಮೂಲದ ನಾಡ್ಕರ್ಣಿ 1955 ರಲ್ಲಿ ದೆಹಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದರು ಮತ್ತು 1968 ರಲ್ಲಿ ಎಂಎಕೆ ಪಟೌಡಿ ನಾಯಕತ್ವದಲ್ಲಿ ಅದೇ ಎದುರಾಳಿಗಳ ವಿರುದ್ಧ ಆಕ್ಲೆಂಡ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಿದರು.

ಈಗ ಬಾಪು ನಾಡ್ಕರ್ಣಿ ಅವರ ನಿಧನಕ್ಕೆ ಸಚಿನ್ ತೆಂಡೂಲ್ಕರ್ ಹಾಗೂ ಹಿರಿಯ ಆಟಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

 

 

Trending News