close

News WrapGet Handpicked Stories from our editors directly to your mailbox

ಗೌತಮ್ ಗಂಭೀರ್ ಕೆರಿಯರ್ ಮುಗಿಸಿದ್ದೇ ನಾನು: ಮೊಹಮ್ಮದ್ ಇರ್ಫಾನ್

ಗೌತಮ್ ಗಂಭೀರ್ ಅವರ ಕೆರಿಯರ್ ಮುಗಿಸಿದ್ದೆ ನಾನು ಎಂದು ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಇರ್ಫಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Updated: Oct 7, 2019 , 01:34 PM IST
ಗೌತಮ್ ಗಂಭೀರ್ ಕೆರಿಯರ್ ಮುಗಿಸಿದ್ದೇ ನಾನು: ಮೊಹಮ್ಮದ್ ಇರ್ಫಾನ್

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರ ಕೆರಿಯರ್ ಮುಗಿಸಿದ್ದೆ ನಾನು ಎಂದು ಪಾಕಿಸ್ತಾನದ ಎಡಗೈ ವೇಗಿ ಮೊಹಮ್ಮದ್ ಇರ್ಫಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿರುವ ಇರ್ಫಾನ್, 2012ರ ಉಭಯ ಸರಣಿಯಲ್ಲಿ ಗೌತಮ್ ಗಂಭೀರ್ ಅವರನ್ನು ನಾಲ್ಕು ಬಾರಿ ಔಟ್ ಮಾಡಿದ್ದೆ. ಇದು ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರನ ವೈಟ್-ಬಾಲ್ ವೃತ್ತಿಜೀವನವನ್ನು ಅಕ್ಷರಶಃ ಮುಗಿಸಿತು ಎಂದಿದ್ದಾರೆ.

"ನಾನು ಭಾರತದ ವಿರುದ್ಧ ಆಡಿದಾಗ, ಅವರು ನನ್ನ ವಿರುದ್ಧ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಲ್ಲಿ ಕೆಲವರು 2012ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ ನನ್ನ ಎತ್ತರದಿಂದಾಗಿ ನನ್ನ ಚೆಂಡನ್ನು ಸರಿಯಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಗಂಭೀರ್ ಕೂಡ ನನ್ನ ಬೌಲಿಗ್ ಎದುರಿಸಲು ಹೆದರುತ್ತಿದ್ದರು. ನನ್ನ ಕಾರಣದಿಂದಾಗಿಯೇ ಅವರ ವೃತ್ತಿ ಜೀವನ ಕೊನೆಗೊಂಡಿತು, ಆ ಬಳಿಕ ಗಂಭೀರ್ ಮತ್ತೆ ತಂಡಕ್ಕೆ ಹಿಂದಿರುಗಲೇ ಇಲ್ಲ" ಎಂದು 7.1 ಅಡಿ ಎತ್ತರವಿರುವ ಪಾಕ್ ವೇಗಿ ಇರ್ಫಾನ್ ಹೇಳಿದ್ದಾರೆ.