W,W,W,W,W,W,W,W,W..ಬ್ಯಾಕ್ ಟು ಬ್ಯಾಕ್ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ ಬೌಲರ್ ! ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕಿದ ಮಾರಕ ಎಸೆತಗಾರ

ಈ ಮಾರಕ ಬೌಲರ್ ಕೈ ಚಳಕದಿಂದ  ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್ ಗಳು ಕ್ಷಣ ಮಾತ್ರದಲ್ಲಿ ಪೆವಿಲಿಯನ್ ಹಾದಿ ಹಿಡಿಯುವಂತಾಯಿತು. 

Written by - Ranjitha R K | Last Updated : Jan 23, 2025, 04:16 PM IST
  • 36 ರನ್‌ಗಳಿಗೆ 9 ವಿಕೆಟ್ ಕಬಳಿಸಿದ ಬೌಲರ್
  • ದಾಂಡಿಗರ ಎದೆಯಲ್ಲಿ ನಡುಕ ಹುಟ್ಟಿಸಿದ ಎಸೆತಗಾರ
  • ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕಿದ ಮಾರಕ ಎಸೆತಗಾರ
W,W,W,W,W,W,W,W,W..ಬ್ಯಾಕ್ ಟು ಬ್ಯಾಕ್ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ ಬೌಲರ್ ! ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕಿದ ಮಾರಕ ಎಸೆತಗಾರ

ಗುಜರಾತ್‌ನ ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ಉತ್ತರಾಖಂಡ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ್ದಾರೆ. ಸಿದ್ಧಾರ್ಥ್ ದೇಸಾಯಿ ಗುರುವಾರ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ ಅತಿದೊಡ್ಡ ಸಾಧನೆಯನ್ನು ಮೆರೆದಿದ್ದಾರೆ. ಈ ಎಡಗೈ ಸ್ಪಿನ್ನರ್ ಅಹಮದಾಬಾದ್‌ನ ಗುಜರಾತ್ ಕಾಲೇಜು ಕ್ರಿಕೆಟ್ ಗ್ರೌಂಡ್ ಎನಲ್ಲಿ ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 15 ಓವರ್‌ಗಳನ್ನು ಬೌಲ್ ಮಾಡಿ 36 ರನ್‌ಗಳಿಗೆ 9 ವಿಕೆಟ್ ಕಬಳಿಸಿದ್ದಾರೆ. 

Add Zee News as a Preferred Source

ನಡುಕ ಹುಟ್ಟಿಸಿದ ಬೌಲರ್ : 
ಎಡಗೈ ಸ್ಪಿನ್ನರ್ ಸಿದ್ಧಾರ್ಥ್ ದೇಸಾಯಿ ಅವರ ಮಾರಕ ಬೌಲಿಂಗ್‌ನಿಂದಾಗಿ ಗುಜರಾತ್ ಮೊದಲ ಇನಿಂಗ್ಸ್‌ನಲ್ಲಿ ಉತ್ತರಾಖಂಡವನ್ನು 30 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಮಾಡಿದೆ. ಸಿದ್ಧಾರ್ಥ್ ದೇಸಾಯಿ ಕೈ ಚಳಕದಿಂದ  ಉತ್ತರಾಖಂಡದ ಬ್ಯಾಟ್ಸ್ ಮೆನ್ ಗಳು ತರಗೆಲೆಯಂತೆ ಉದುರಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಉತ್ತರಾಖಂಡದ ಮೊದಲ ಇನಿಂಗ್ಸ್ 30 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಕೊನೆಗೊಂಡಿತು. 

ಇದನ್ನೂ ಓದಿ : ಇಂಗ್ಲೆಂಡ್‌ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಅಭಿಷೇಕ್ ಶರ್ಮಾ ಗುರು ಯಾರು ಗೊತ್ತಾ? ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟಿದ್ದೇ ಈ ದಿಗ್ಗಜ

ರಣಜಿ ಟ್ರೋಫಿಯಲ್ಲಿ ಗುಜರಾತ್‌ನ ಅತ್ಯುತ್ತಮ ಬೌಲಿಂಗ್ : 
9/36 - ಸಿದ್ಧಾರ್ಥ್ ದೇಸಾಯಿ -ಉತ್ತರಾಖಂಡ ವಿರುದ್ಧ  
8/31 - ರಾಕೇಶ್ ಧ್ರುವ್ - ರಾಜಸ್ಥಾನ ವಿರುದ್ಧ
8/40 - ಚಿಂತನ್ ಗಜ - ರಾಜಸ್ಥಾನ ವಿರುದ್ಧ 

ರಣಜಿ ಟ್ರೋಫಿ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು :
10/49- ಅನ್ಶುಲ್ ಕಾಂಬೋಜ್  - ಕೇರಳದ ವಿರುದ್ದ  -
9/23 - ಅಂಕಿತ್ ಚವಾನ್  - ಪಂಜಾಬ್ ವಿರುದ್ಧ 
9/36 - ಸಿದ್ಧಾರ್ಥ್ ದೇಸಾಯಿ - ಉತ್ತರಾಖಂಡ  ವಿರುದ್ಧ 
9/45 - ಆಶಿಶ್ ಜೈದಿ -ವಿದರ್ಭ ವಿರುದ್ಧ 
9/52 - ಆರ್ ಸಂಜಯ್ ಯಾದವ್ -ವಿ ನಾಗಾಲ್ಯಾಂಡ್ ವಿರುದ್ಧ

ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಕಿತ್ತು ಹಾರ್ದಿಕ್‌ ಪಾಂಡ್ಯ ಫುಲ್‌ ಮಿಂಚಿಂಗ್‌! ಒಂದೇ ಏಟಿಗೆ ಭುವನೇಶ್ವರ್, ಬುಮ್ರಾ ದಾಖಲೆಯನ್ನೇ ಮುರಿದು ಚರಿತ್ರೆ ಸೃಷ್ಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News