)
RCB Kohli, AB de Villiers record: ರಾಜಸ್ತಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಓಪನರ್ ಸಾಯಿ ಸುದರ್ಶನ್ ಅವರು ಮೊದಲು ಅರ್ಧಶತಕ ಸಿಡಿಸಿದರು. ಸುದರ್ಶನ್ ಬೆನ್ನಲ್ಲೇ ಶುಭಮನ್ ಗಿಲ್ ಕೂಡ ಭರ್ಜರಿ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆತ್ತಿದರು. ಇದರೊಂದಿಗೆ ಪಾರ್ಟನರ್ಶಿಪ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ಓಪನರ್ ಬ್ಯಾಟರ್ಸ್ ವಿಶೇಷವಾದ ದಾಖಲೆ ಬರೆದಿದ್ದಾರೆ. ಆರ್ಸಿಬಿಯ ವಿರಾಟ್ ಕೊಹ್ಲಿ, ಡಿವಿಲಿಯರ್ಸ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ಕ್ಯಾಪ್ಟನ್ ಯಶಸ್ವಿ ಜೈಸ್ವಾಲ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಮೊದಲ ಬ್ಯಾಟಿಂಗ್ ಮಾಡಲು ಆಗಮಿಸಿತು. ಒಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅವರು ಅತ್ಯುತ್ತಮ ಫಾರ್ಮ್ನಲ್ಲಿ ಬ್ಯಾಟಿಂಗ್ ಮಾಡಿದರು.
ಪಂದ್ಯದಲ್ಲಿ ಆರಂಭದಿಂದಲೂ ಅಮೋಘ ಬ್ಯಾಟಿಂಗ್ ಮಾಡಿದ ಸಾಯಿ ಸುದರ್ಶನ್ ಅವರು 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 55 ರನ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ಕ್ಯಾಪ್ಟನ್ ಗಿಲ್ ಕೂಡ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, ಸಂಭ್ರಮಿಸಿದರು. ಇದು ಅಲ್ಲದೇ ಪಾರ್ಟನರ್ಶಿಪ್ನಲ್ಲಿ ನೂರು ರನ್ಗಳನ್ನು ದಾಖಲಿಸಿ ವಿಶೇಷವಾದ ಸಾಧನೆ ಮಾಡಿದರು. ಗುಜರಾತ್ ಟೈಟನ್ಸ್ ತಂಡವೆಂದರೆ ಗಿಲ್, ಸಾಯಿ ಬ್ಯಾಟಿಂಗ್ ಬಲವೇ ದೊಡ್ಡದಾಗಿ ಕಾಣಿಸುತ್ತದೆ.
ಇದನ್ನೂ ಓದಿ: RCB ಪ್ಲೇಯಿಂಗ್- 11ಗೆ ಯಂಗ್ ಗನ್ ಎಂಟ್ರಿ..
ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಓಪನರ್ ಬ್ಯಾಟರ್ಗಳಾಗಿ ಅತಿ ಹೆಚ್ಚು ಬಾರಿ 100 ರನ್ ದಾಖಲಿಸಿದ ಜೋಡಿ ಎಂದರೆ ಹೈದರಾಬಾದ್ ತಂಡದಲ್ಲಿದ್ದ ಶಿಖರ್ ಧವನ್ ಮತ್ತು ಡೇವಿಡ್ ಮಿಲ್ಲರ್. ಈ ಇಬ್ಬರು 6 ಬಾರಿ ಓಪನಿಂಗ್ ಪಾರ್ಟನರ್ಶಿಪ್ನಲ್ಲಿ ನೂರು ರನ್ ಗಲಿಸಿದ್ದಾರೆ. ಇದೇ ರೀತಿ ಹೈದರಾಬಾದ್ ತಂಡದ ಮತ್ತೊಂದು ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಆಗಿದ್ದಾರೆ. ಹೈದರಾಬಾದ್ನ ಮೂರನೇ ಜೋಡಿ ಡೇವಿಡ್ ವಾರ್ನರ್ ಮತ್ತು ಜಾನಿ ಬೈರಷ್ಟೋ 6 ಸಲ ಈ ಸಾಧನೆ ಮಾಡಿದ್ದಾರೆ. ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರು 5 ಬಾರಿ ಈ ದಾಖಲೆ ಮಾಡಿದ್ದರು. ಈಗ ಇದನ್ನು ಬ್ರೇಕ್ ಮಾಡಲಾಗಿದೆ.