ಮಹಿಕಾ ಬಗ್ಗೆ ಹಾರ್ದಿಕ್ ಪಾಂಡ್ಯ ಎಷ್ಟೊಂದು ಕೇರ್‌ ಮಾಡ್ತಾರೆ.. ಗೆಲುವಿನ ಬಳಿಕ ಗರ್ಲ್‌ಫ್ರೆಂಡ್‌ಗೆ ಏನ್‌ ಕೊಟ್ರು ಗೊತ್ತಾ?

ಮಹಿಕಾ ಶರ್ಮಾ ಮತ್ತು ಹಾರ್ದಿಕ್‌ ಪಾಂಡ್ಯ ತಮ್ಮ ನಡುವಿನ ಸಂಬಂಧವನ್ನು ಇತ್ತೀಚೆಗಷ್ಟೇ ಬಹಿರಂಗ ಪಡಿಸಿದ್ದರು. ಈಗ ಎಲ್ಲಿಯೇ ಹೋದರೂ ಇಬ್ಬರೂ ಜೊತೆಯಾಗಿ ಇರುತ್ತಾರೆ.   

Written by - Bhimappa | Last Updated : Dec 10, 2025, 01:15 PM IST
  • ಆಲ್‌ರೌಂಡರ್‌ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾಗಿದ್ದ ಪಾಂಡ್ಯ
  • ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20ಯಲ್ಲಿ ಭಾರತಕ್ಕೆ ಗೆಲುವು
  • ಪಾಪರಾಜಿಗಳ ವಿರುದ್ಧ ಕೆಂಡಾಮಂಡ ಆಗಿದ್ದ ಆಲ್‌ರೌಂಡರ್‌
ಮಹಿಕಾ ಬಗ್ಗೆ ಹಾರ್ದಿಕ್ ಪಾಂಡ್ಯ ಎಷ್ಟೊಂದು ಕೇರ್‌ ಮಾಡ್ತಾರೆ.. ಗೆಲುವಿನ ಬಳಿಕ ಗರ್ಲ್‌ಫ್ರೆಂಡ್‌ಗೆ ಏನ್‌ ಕೊಟ್ರು ಗೊತ್ತಾ?
Pic credit: Amar

ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0ದಿಂದ ಮುನ್ನಡೆ ಕಾಯ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್‌ ಇಂಡಿಯಾ ಅಭೂತಪೂರ್ವ ಗೆಲುವು ಸಾಧಿಸಿದೆ. ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಾಂಡ್ಯ ಅವರು ತಮ್ಮ ಪರ್ಫಾಮೆನ್ಸ್‌ನ ಕ್ರೆಡಿಟ್‌ ಅನ್ನು ತನ್ನ ಹೊಸ ಗೆಳತಿಗೆ ನೀಡಿದ್ದಾರೆ.

Add Zee News as a Preferred Source

ಪಂದ್ಯ ಗೆಲುವಿನ ನಂತರ ಮಾತನಾಡಿದ ಹಾರ್ದಿಕ್‌ ಪಾಂಡ್ಯ ಅವರು, ಮಹಿಕಾ ಶರ್ಮಾ ಅವರು ನನ್ನ ಜೀವನದಲ್ಲಿ ಬಂದ ಮೇಲೆ ಹೊಸ ವಿಷಯಗಳು ನಡೆದಿವೆ. ಅವು ನನಗೆ ಹೆಚ್ಚು ಸಂತೋಷದಾಯಕವಾಗಿವೆ. ತಂಡದಲ್ಲಿ ನಾನು ನೀಡಿದ ಪ್ರದರ್ಶನದಲ್ಲಿ ಅವಳದು ಪಾಲು ಇದೆ. ಇದೊಂದು ನನ್ನ ಸಂಗಾತಿಗೆ ವಿಶೇಷ ಗೌರವ ಎಂದು ಹೇಳಿದ್ದಾರೆ. 

ಜೀವನದಲ್ಲಿ ನಾನು ಪ್ರಮಾಣಿಕನಾದ ವ್ಯಕ್ತಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ತುಂಬಾ ಪ್ರಾಮಾಣಿಕವಾಗಿ ಇದ್ದೇನೆ. ಮಹಿಕಾ ಶರ್ಮಾ ಕೆಲವೊಂದಿಷ್ಟನ್ನು ಬದಲಾಯಿಸಿಕೊಂಡೆ. ನನ್ನ ಬಗ್ಗೆ ಇತರರು ಯಾವ ರೀತಿ ಯೋಚಿಸುತ್ತಾರೆ ಎಂಬುದು ಬೇಕಿಲ್ಲ. ಒಳಗಿನಿಂದ ನಾನು ಹೇಗಿದ್ದೀನೋ ಹಾಗೇ ಇದ್ದೇನೆ. ಈ ಟಿ20 ಪಂದ್ಯದಲ್ಲಿ ನೀಡಿದ ಪ್ರದರ್ಶನದ ಕ್ರೆಡಿಟ್‌ ಅನ್ನು ಮಹಿಕಾ ಶರ್ಮಾಗೆ ನೀಡುತ್ತೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಆಡಿದ್ದೇ 13 ಟಿ20 ಮ್ಯಾಚ್‌.. ಲೆಜೆಂಡ್ರಿ ವಿಕೆಟ್‌ ಕೀಪರ್‌ ದಾಖಲೆ ಸರಿಗಟ್ಟಿದ ಯಂಗ್‌ ಮ್ಯಾನ್‌..!

ಮಹಿಕಾ ಶರ್ಮಾಗಾಗಿ ಮೊನ್ನೆ ಮೊನ್ನೆ ಅಷ್ಟೇ ಪಾಪರಾಜಿಗಳ ವಿರುದ್ಧ ಹಾರ್ದಿಕ್‌ ಪಾಂಡ್ಯ ಕೆಂಡಾಮಂಡಲಾಗಿದ್ದರು. ಮಹಿಕಾ ಶರ್ಮಾ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಪಾಪರಾಜಿಗಳು ತೆಗೆಯಲು ಪ್ರಯತ್ನಿಸಿದಾಗ ಹಾರ್ದಿಕ್‌ ಪಾಂಡ್ಯ ಕೋಪಿಸಿಕೊಂಡು ಅವರನ್ನು ಟೀಕಿಸಿದ್ದರು. ಯಾವುದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ಮೀರಿ ವರ್ತಿಸಲು ಪಾಪರಾಜಿಗಳು ಮುಂದಾಗಿದ್ದಾಗ ಹಾರ್ದಿಕ್‌ ಪಾಂಡ್ಯ ಅವರಿಗೆ ಬೈದು ಬುದ್ಧಿ ಹೇಳಿದರು. 

ಇದನ್ನೂ ಓದಿ: ಬೆತ್ತಲೆಯಾಗಿ ಓಡಾಡುತ್ತೇನೆ ಎಂದಿದ್ದ ತಂದೆ.. ಅಪ್ಪನ ಮಾತಿಗೆ ಮಗಳಿಗೆ ಮುಜುಗರ, ಆಕೆ ಹೇಳಿದ್ದು ಏನು?
 

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News