Hardik Pandya 5 Wickets: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2025 ರ 16 ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಹಾರ್ದಿಕ್‌ಗಿಂತ ಮೊದಲು, ಈ ಲೀಗ್‌ನಲ್ಲಿ ಯಾರೂ ಈ ದಾಖಲೆಯ ಸೃಷ್ಟಿಸಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಆಕಾಶ್‌ದೀಪ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಹಾರ್ದಿಕ್ ಈ ದಾಖಲೆಯನ್ನು ಮಾಡಿದರು.
ಇದನ್ನೂ ಓದಿ: ಚಾಣಕ್ಯ ನೀತಿಯ ಪ್ರಕಾರ ಹೆಂಡತಿಯ ಸೌಂದರ್ಯವೇ ಗಂಡನಿಗೆ ಆಪತ್ತು! ಹೇಗೆ ಗೊತ್ತೇ?
ಇದು ಐಪಿಎಲ್‌ನಲ್ಲಿ ಹಾರ್ದಿಕ್ ಅವರ ಮೊದಲ ಗೊಂಚಲು ವಿಕೆಟ್ ಆಗಿದೆ. ಇಷ್ಟೇ ಅಲ್ಲ, ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ, ಈ ಭಾರತೀಯ ಆಲ್‌ರೌಂಡರ್ ಒಂದೇ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ ನಂತರ, ಹಾರ್ದಿಕ್ ಬೌಲಿಂಗ್‌ನಲ್ಲಿ ಅದ್ಭುತವನ್ನೇ ಮಾಡಿದ್ದಾರೆ.
4 ಓವರ್‌ಗಳಲ್ಲಿ 36 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದಿದ್ದು, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್ ಮತ್ತು ರಿಷಬ್ ಪಂತ್ ಅವರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳನ್ನೆ ಪೆವಿಲಿಯನ್‌ಗೆ ಕಳುಹಿಸಿದ್ದರು. ಆಕಾಶ್‌ದೀಪ್ ಕೊನೆಯ ವಿಕೆಟ್ ಆಗಿದ್ದರು.
ಹಾರ್ದಿಕ್ ಪಾಂಡ್ಯ ಟಿ20 ಅತ್ಯುತ್ತಮ ಪ್ರದರ್ಶನಗಳು
5/36 vs ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, 2025*
4/16 vs ನ್ಯೂಜಿಲೆಂಡ್, ಅಹಮದಾಬಾದ್, 2023
4/33 ಇಂಗ್ಲೆಂಡ್ ವಿರುದ್ಧ, ಸೌತಾಂಪ್ಟನ್, 2022
4/38 ಇಂಗ್ಲೆಂಡ್ ವಿರುದ್ಧ, ಬ್ರಿಸ್ಟಲ್, 2018
ಹಾರ್ದಿಕ್ ಪಾಂಡ್ಯ 5 ವಿಕೆಟ್ ಪಡೆಯುವ ಮೂಲಕ 16 ವರ್ಷಗಳ ಇತಿಹಾಸವನ್ನೇ ಬದಲಾಯಿಸಿದ್ದಾರೆ. ನಾಯಕನಾಗಿ ಒಂದೇ ಐಪಿಎಲ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಅನಿಲ್ ಕುಂಬ್ಳೆ ಹೊಂದಿದ್ದರು. ಅವರು 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 16 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಈಗ ಹಾರ್ದಿಕ್ ಪಾಂಡ್ಯ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 5/36 ರೊಂದಿಗೆ, ಹಾರ್ದಿಕ್ ನಾಯಕನಾಗಿ ಐಪಿಎಲ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ.
ಐಪಿಎಲ್ ಪಂದ್ಯದಲ್ಲಿ ನಾಯಕನ ಅತ್ಯುತ್ತಮ ಅಂಕಿಅಂಶಗಳು
- 5/36 - ಹಾರ್ದಿಕ್ ಪಾಂಡ್ಯ vs ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, 2025
- 4/16 - ಅನಿಲ್ ಕುಂಬ್ಳೆ vs ಡೆಕ್ಕನ್ ಚಾರ್ಜರ್ಸ್, ಜೋಹಾನ್ಸ್‌ಬರ್ಗ್, 2009
- 4/16 - ಅನಿಲ್ ಕುಂಬ್ಳೆ vs ಡೆಕ್ಕನ್ ಚಾರ್ಜರ್ಸ್, ನವಿ ಮುಂಬೈ, 2010
- 4/17 - ಜೆಪಿ ಡುಮಿನಿ vs ಸನ್‌ರೈಸರ್ಸ್ ಹೈದರಾಬಾದ್, ವಿಶಾಖಪಟ್ಟಣ, 2015
- 4/21 - ಶೇನ್ ವಾರ್ನ್ vs ಡೆಕ್ಕನ್ ಚಾರ್ಜರ್ಸ್, ನಾಗ್ಪುರ, 2010
ಇದನ್ನೂ ಓದಿ: ಟಾಕ್ಸಿಕ್ ಸಿನಿಮಾಗೆ ಯಶ್ ಪಡೆಯುತ್ತಿರುವ ಸಂಭಾವನೆ ರಹಸ್ಯ ಲೀಕ್!?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









