Andrew McDonald Statement on Day 2's Play: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಜಸ್ಪ್ರೀತ್ ಬುಮ್ರಾ ಮುಂದಾಳತ್ವದ ಟೀಂ ಇಂಡಿಯಾ ಪಂದ್ಯದ ಮೇಲಿನ ಹಿಡಿತವನ್ನು ಬಲಪಡಿಸಿದೆ. ಎರಡನೇ ಇನ್ನಿಂಗ್ಸ್‌ʼನಲ್ಲಿ ಯಶಸ್ವಿ ಜೈಸ್ವಾಲ್ (90 ರನ್*) ಮತ್ತು ಕೆಎಲ್ ರಾಹುಲ್ (62 ರನ್*) ಅವರು ಅದ್ಭುತ ಆಟ ಪ್ರದರ್ಶಿಸಿದರು. ಭಾರತದ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 172 ರನ್ ಆಗಿದ್ದು, ಒಟ್ಟು ಮುನ್ನಡೆ 218 ರನ್ ಆಗಿದೆ. ಅಂದಹಾಗೆ ಆಸ್ಟ್ರೇಲಿಯನ್ ಬೌಲರ್‌ಗಳು ಇಡೀ ಎರಡು ಸೆಷನ್‌ಗಳಲ್ಲಿ ಒಂದೇ ಒಂದು ಯಶಸ್ಸನ್ನು ಪಡೆದಿಲ್ಲ, ಈ ಕಾರಣದಿಂದಾಗಿ ಅವರ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2025ರ ಆರಂಭದಲ್ಲೇ ಈ ಜನ್ಮರಾಶಿಯ ಕೈಹಿಡಿಯಲಿದೆ ಶುಕ್ರದೆಸೆ: ವರ್ಷವಿಡೀ ಸುಖದ ಸುಪ್ಪತ್ತಿಗೆಯಲ್ಲೇ ಮಿಂದೇಳುವರು; ನಯಾಪೈಸೆ ಸಾಲವಿಲ್ಲದೆ ದುಡಿದಷ್ಟು ಹಣ ಜೇಬು ಸೇರುವುದು!


ಆಪ್ಟಸ್ ಸ್ಟೇಡಿಯಂನಲ್ಲಿ ಎರಡನೇ ದಿನದಂದು ಆತಿಥೇಯ ತಂಡದ ಬೌಲರ್‌ಗಳು ಯಾವುದೇ ತಪ್ಪುಗಳನ್ನು ಮಾಡಲಿಲ್ಲ, ಆದರೆ ಪಿಚ್ ಬೇಗನೆ ಒಣಗಿತ್ತು. ಇದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡಿತು ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿಕೆ ನೀಡಿದ್ದಾರೆ.


ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (90 ರನ್) ಮತ್ತು ಕೆಎಲ್ ರಾಹುಲ್ (62 ರನ್) 172 ರನ್‌ಗಳ ಅಜೇಯ ಜೊತೆಯಾಟವನ್ನು ಆಡುವ ಮೂಲಕ ಆತಿಥೇಯ ತಂಡವನ್ನು ಹಿಂದಿಕ್ಕಿದ್ದಾರೆ.


ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಕ್‌ಡೊನಾಲ್ಡ್, "ಇಂದು ಪಿಚ್ ತುಂಬಾ ಶುಷ್ಕವಾಗಿ ಕಾಣುತ್ತದೆ. ಬೇಗನೆ ಒಣಗಿತ್ತು. ಬಹುಶಃ ಚೆಂಡಿನಲ್ಲಿ ಸ್ವಲ್ಪ ಹೆಚ್ಚು 'ಸ್ವಿಂಗ್' ಇರಬಹುದೆಂದು ನಾವು ಭಾವಿಸಿದ್ದೇವೆ. ಹಾಗಾಗ ಅಷ್ಟೊಂದು 'ಸೀಮ್ ಮೂವ್ಮೆಂಟ್' ಅಥವಾ 'ಸ್ವಿಂಗ್' ಇರಲಿಲ್ಲ" ಎಂದಿದ್ದಾರೆ.


ಇದನ್ನೂ ಓದಿ: ದಾಸನ ಅಟ್ಟಹಾಸಕ್ಕೆ ಸಿಕ್ತು ಸಾಕ್ಷಿ..! ಶೆಡ್‌ನಲ್ಲಿ ಆರೋಪಿಗಳ ಜೊತೆ ದರ್ಶನ್‌ ಪೋಸ್‌..


ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಆಡಿದ್ದಾರೆ. ಆದರೆ ನಮ್ಮ ಬೌಲರ್‌ಗಳು ನಿನ್ನೆಯಂತೆಯೇ ಬೌಲಿಂಗ್‌ ಮಾಡುತ್ತಿದ್ದರು. ಕೆಲವು ಸಂದರ್ಭಗಳು ನಿನ್ನೆಯಂತೆ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.