close

News WrapGet Handpicked Stories from our editors directly to your mailbox

ಮೊಹಮ್ಮದ್ ಶಮಿ ಅದ್ಬುತ ಬೌಲಿಂಗ್ ಗೆ 'ಬಿರಿಯಾನಿ' ಕಾರಣವೆಂದ ಹಿಟ್ ಮ್ಯಾನ್..!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡು ಇನಿಂಗ್ಸ್ ನಲ್ಲಿ ಭರ್ಜರಿ ಶತಕಗಳಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಈಗ ಮೊಹಮ್ಮದ್ ಶಮಿ ಅವರ ಕ್ಲಾಸ್ ಬೌಲಿಂಗ್ ಪ್ರದರ್ಶನದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

Updated: Oct 7, 2019 , 12:40 PM IST
ಮೊಹಮ್ಮದ್ ಶಮಿ ಅದ್ಬುತ ಬೌಲಿಂಗ್ ಗೆ 'ಬಿರಿಯಾನಿ' ಕಾರಣವೆಂದ ಹಿಟ್ ಮ್ಯಾನ್..!
Photo courtesy: Instagram

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡು ಇನಿಂಗ್ಸ್ ನಲ್ಲಿ ಭರ್ಜರಿ ಶತಕಗಳಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಈಗ ಮೊಹಮ್ಮದ್ ಶಮಿ ಅವರ ಕ್ಲಾಸ್ ಬೌಲಿಂಗ್ ಪ್ರದರ್ಶನದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

 
 
 
 

 
 
 
 
 
 
 
 
 

Expect the Hitman to come up with such gems. This one is for Shami 😜😁😂 #TeamIndia #INDvSA @paytm

A post shared by Team India (@indiancricketteam) on

ಭಾರತ ಮೊದಲ ಟೆಸ್ಟ್ ನಲ್ಲಿ ಹರಿಣಗಳ ವಿರುದ್ಧ 203 ರನ್ ಗಳ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಶರ್ಮಾ 'ಮೊಹಮ್ಮದ್ ಶಮಿ ಫ್ರೆಶ್ ಆಗಿದ್ದಾಗ ಸ್ವಲ್ಪ ಬಿರಿಯಾನಿ ಇದ್ದರೆ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಭಾನುವಾರದಂದು ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವವನ್ನು ಸುಲಭಗೊಳಿಸಿದ್ದರು. ಈಗ ಭಾರತ ತಂಡ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ, ಅಷ್ಟೇ ಅಲ್ಲದೆ ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ತಾನವನ್ನು ಕಾಯ್ದುಕೊಂಡಿದೆ.