ನವದೆಹಲಿ: ಕಾರ್ಡಿಫ್ ನ ಸೋಫಿಯಾ ಗಾರ್ಡನ್ ನಲ್ಲಿ ವಿಶ್ವಕಪ್ ಟೂರ್ನಿ ಅಂಗವಾಗಿ ನಡೆದ ಲೀಗ್ ಪಂದ್ಯದಲ್ಲಿ  ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಲಂಕಾ ತಂಡವು ಕೇವಲ 136 ರನ್ ಗಳಿಗೆ ಆಲೌಟ್ ಮಾಡಿದೆ.



COMMERCIAL BREAK
SCROLL TO CONTINUE READING

ಮೊದಲು ಬ್ಯಾಟಿಂಗ್  ಆರಂಭಿಸಿದ ಲಂಕಾ ತಂಡಕ್ಕೆ ಆರಂಭದಲ್ಲಿಯೇ ಆಘಾತವೆರಗಿ ಬಂದಿತು. 4 ರನ್ ಆಗುವಷ್ಟರಲ್ಲಿ ಲಹಿರು ತಿರಿಮನ್ನೇ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟವನ್ನು ಅನುಭವಿಸಿತು.ಎರಡನೇ ವಿಕೆಟ್ ಗೆ ಉತ್ತಮ ಜೊತೆಯಾಟದ ಭರವಸೆ ಬಂದರೂ ಕೂಡ ಆಗ ಕುಸಾಲ್ ಮೆಂಡಿಸ್ ಅವರು ಗುಪ್ತಿಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಲಂಕಾದ ಬ್ಯಾಟ್ಸ್ ಗಳು ಪೆರೇಡ್ ನಂತೆ ವಿಕೆಟ್ ಒಪ್ಪಿಸಿದರು. ಕೇವಲ 60 ರನ್ ಗಳು ಆಗುವಷ್ಟರಲ್ಲಿ 6 ವಿಕೆಟ್ ಗಳನ್ನು ಲಂಕಾ ಕಳೆದು ಕೊಂಡಿತು.



ಲಂಕಾದ ಪರವಾಗಿ ದಿಮುತ್ ಕರುನಾರತ್ನೆ ಕೊನೆಯವರೆಗೆ ಅಜೇಯರಾಗಿ ಏಕಾಂಗಿ ಹೋರಾಟ ನಡೆಸಿದರಾದರೂ ಸಹ ಆಟಗಾರರ ಯಾವುದೇ ಸಾಥ್ ನೀಡಲಿಲ್ಲ. ಇನ್ನೊಂದೆಡೆಗೆ ನ್ಯೂಜಿಲೆಂಡ್ ನ ಮ್ಯಾಟ್ ಹೆನ್ರಿ ಹಾಗೂ ಲಕಿ ಫಾರ್ಗುಶನ್ ತಲಾ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ  ಲಂಕಾದ ರನ್ ಗತಿಗೆ ಕಡಿವಾಣ ಹಾಕಿದರು.