Stop Clock Rule in Cricket: ಐಸಿಸಿ ಮಹತ್ವದ ಘೋಷಣೆ ಮಾಡಿದ್ದು, ಈ ವರ್ಷದ ಜೂನ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌’ನ ವೈಟ್ ಬಾಲ್ ಮಾದರಿಯಲ್ಲಿ 'ಸ್ಟಾಪ್ ಕ್ಲಾಕ್' ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯ ಜೂನ್ 29 ರಂದು ನಡೆಯಲಿದೆ. ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಕೊನೆಗೊಳಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಈ ಘೋಷಣೆ ಹೊರಡಿಸಿದೆ.


ಇದನ್ನೂ ಓದಿ: ಇಂದು ಪ್ರೀತಿ ಯೋಗ ರಚನೆ: ಈ ರಾಶಿಗೆ ಕೂಡಿಬರಲಿದೆ ಕಂಕಣ ಬಲ-ಅಂದುಕೊಂಡಿದ್ದು ಸಿದ್ಧಿಸುವ ಶುಭದಿನ


ಏನಿದು ಸ್ಟಾಪ್ ಕ್ಲಾಕ್ ರೂಲ್?


ಈ ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುತ್ತಿರುವ ತಂಡವು ಒಂದು ಓವರ್ ಪೂರ್ಣಗೊಳಿಸಿದ ತಕ್ಷಣ ಸ್ಟಾಪ್‌ ಕ್ಲಾಕ್‌ ಆನ್‌ ಆಗುತ್ತದೆ. ಮೈದಾನದ ದೊಡ್ಡ ಪರದೆಯಲ್ಲಿ 60 ಸೆಕೆಂಡ್‌’ಗಳನ್ನು ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಪ್ರದರ್ಶಿಸಲಾಗುತ್ತದೆ. ಅಂದರೆ ಈ 60 ಸೆಕೆಂಡುಗಳ ಮುಗಿಯುವ ಒಳಗೆ ಮುಂದಿನ ಓವರ್ ಪ್ರಾರಂಭಿಸಬೇಕು ಎಂದರ್ಥ. ಪ್ರತಿ ಓವರ್‌ ಮುಗಿದ ತಕ್ಷಣ ಈ ಸ್ಟಾಪ್‌ ಕ್ಲಾಕ್ ಆರಂಭವಾಗುತ್ತದೆ. ಇದರ ಜವಾಬ್ದಾರಿ ಥರ್ಡ್ ಅಂಪೈರ್ ಮೇಲಿರುತ್ತದೆ.


ICC ಡಿಸೆಂಬರ್ 2023 ರಲ್ಲಿ 'ಸ್ಟಾಪ್ ಕ್ಲಾಕ್' ನಿಯಮವನ್ನು ಪರಿಚಯಿಸಿತ್ತು. ಇದೀಗ ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌’ನಲ್ಲಿ ಪ್ರಾರಂಭವಾಗುವ T20 ವಿಶ್ವಕಪ್‌ ಬಳಿಕ ಇದನ್ನು ಅಧಿಕೃತವಾಗಿ ಚಾಲ್ತಿಗೆ ತರಲಾಗುತ್ತಿದೆ.


ಐಸಿಸಿ ತನ್ನ ವಾರ್ಷಿಕ ಮಂಡಳಿ ಸಭೆಯ ನಂತರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ವೆಸ್ಟ್ ಇಂಡೀಸ್ ಮತ್ತು USAನಲ್ಲಿ ICC ಪುರುಷರ T20 ವಿಶ್ವಕಪ್ 2024 ರಿಂದ ಪ್ರಾರಂಭವಾಗುತ್ತಿದ್ದು, ಜೂನ್ 2024 ರಿಂದ ಎಲ್ಲಾ ODI ಮತ್ತು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 'ಸ್ಟಾಪ್ ಕ್ಲಾಕ್' ನಿಯಮವು ಶಾಶ್ವತವಾಗಲಿದೆ” ಎಂದು ಘೋಷಿಸಿದೆ.


ಇದನ್ನೂ ಓದಿ: ತನಗಿಂತ 6 ವರ್ಷ ಹಿರಿಯ ವೈದ್ಯೆ ಮೇಲೆ ಲವ್… ಕಡೆಗೂ ಕಾಡಿಬೇಡಿ ಮದುವೆಯಾದ ಟೀಂ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟ್ಸ್’ಮನ್ ಇವರೇ!


ಮೀಸಲು ದಿನವೂ ಫಿಕ್ಸ್:


ಐಸಿಸಿ ಸಭೆಯಲ್ಲಿ ಟಿ 20 ವಿಶ್ವಕಪ್‌’ನ ಸೆಮಿ-ಫೈನಲ್ (ಜೂನ್ 27) ಮತ್ತು ಅಂತಿಮ (ಜೂನ್ 29) ಪಂದ್ಯಕ್ಕಾಗಿ 'ಮೀಸಲು' ದಿನಗಳನ್ನು ಸಹ ಅನುಮೋದಿಸಲಾಗಿದೆ. ಗುಂಪು ಹಂತ ಮತ್ತು ಸೂಪರ್ ಎಂಟರ ಹಂತದಲ್ಲಿ ಪಂದ್ಯವೊಂದನ್ನು ಪೂರ್ಣಗೊಳಿಸಲು ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಕನಿಷ್ಠ 5 ಓವರ್‌’ಗಳನ್ನು ಬೌಲ್ ಮಾಡಬೇಕು. ಆದರೆ 'ನಾಕೌಟ್' ಪಂದ್ಯದಲ್ಲಿ ಈ ನಿಯಮ ಬದಲಾಗುತ್ತದೆ. ಅಲ್ಲಿ ಕನಿಷ್ಠ ಹತ್ತು ಓವರ್‌’ಗಳನ್ನು ಬೌಲ್ ಮಾಡಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.