Pakistan Cricket Team Tour Of India: ಪಾಕಿಸ್ತಾನ ಕ್ರಿಕೆಟ್ ತಂಡ 2016 ರಲ್ಲಿ ಕೊನೆಯ ಬಾರಿಗೆ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಈ ಟೂರ್ನಿಯ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಮಾಡಿಲ್ಲ. ಈ ವರ್ಷ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಹೀಗಿರುವಾಗ ಉಭಯ ದೇಶಗಳ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸುಮಾರು 7 ವರ್ಷಗಳ ನಂತರ ಭಾರತಕ್ಕೆ ಬರಲು ಪಾಕಿಸ್ತಾನ ಕ್ರಿಕೆಟ್ ತಂಡ ಸಿದ್ಧವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?


ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ, ಈ ವರ್ಷದ ಏಕದಿನ ವಿಶ್ವಕಪ್‌ ಗೆ ಭಾರತಕ್ಕೆ ತಂಡವನ್ನು ಕಳುಹಿಸುವ ಮೊದಲು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥ ಜೈ ಶಾ ಅವರಿಂದ ಲಿಖಿತ ಖಾತರಿಯನ್ನು ಬಯಸಿದೆ.


2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕ್ ನಲ್ಲಿ ನಡೆದಾಗ, ಅಲ್ಲಿಗೆ ಭಾರತ ಪ್ರಯಾಣ ಬೆಳಸಬೇಕು. ಮತ್ತು ಆ ಪಂದ್ಯದಲ್ಲಿ ಭಾಗವಹಿಸಬೇಕು. ಬಿಸಿಸಿಐ ಈ ಷರತ್ತನ್ನು ಒಪ್ಪಿಕೊಂಡರೆ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಳ್ಳಬಹುದು.


ಈ ವರ್ಷ ಅಕ್ಟೋಬರ್ 5 ರಿಂದ ನಡೆಯಲಿರುವ ವಿಶ್ವಕಪ್‌ ಗಾಗಿ ಬಿಸಿಸಿಐ ಅಹಮದಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾವನ್ನು ಪಾಕಿಸ್ತಾನದ ಪಂದ್ಯಗಳಿಗೆ ಸ್ಥಳವಾಗಿ ಆಯ್ಕೆ ಮಾಡಿದೆ.


ಜಯ್ ಶಾ ನೇತೃತ್ವದ ಎಸಿಸಿ (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಮುಂಬರುವ ಏಷ್ಯಾ ಕಪ್‌ ಗಾಗಿ ಉದ್ದೇಶಿತ ಹೈಬ್ರಿಡ್ ಮಾದರಿಯನ್ನು ದೃಢಪಡಿಸಲಿಲ್ಲ. ಹೈಬ್ರಿಡ್ ಮಾದರಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದ್ದು, ಪಾಕಿಸ್ತಾನ ಇತರ ಪಂದ್ಯಗಳನ್ನು ಆಯೋಜಿಸಲಿದೆ. ಒಂದು ಮೂಲದ ಪ್ರಕಾರ, ಸೇಥಿ ಅವರು ಮೇ 8 ರಂದು ದುಬೈಗೆ ತೆರಳಲಿದ್ದಾರೆ, ಅಲ್ಲಿ ಅವರು ಎಸಿಸಿ ಮತ್ತು ಐಸಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.


ದುಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೇಥಿ ಅವರು ಪಾಕಿಸ್ತಾನದ ತತ್ವಾಧಾರಿತ ನಿಲುವಿಗೆ ಬೆಂಬಲವನ್ನು ಪಡೆಯಲು ಲಾಬಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಅವರ ಪ್ರಕಾರ, 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುವ ಬಗ್ಗೆ BCCI ಮತ್ತು ICC ಲಿಖಿತ ಭರವಸೆ ನೀಡುವವರೆಗೆ ಪಾಕಿಸ್ತಾನವು ಭಾರತದಲ್ಲಿ ತನ್ನ ವಿಶ್ವಕಪ್ ಪಂದ್ಯಗಳನ್ನು ಆಡುವುದಿಲ್ಲ.


ಇದನ್ನೂ ಓದಿ: Team India ದಿಗ್ಗಜನ ಜೀವನಗಾಥೆಯ ಆ ಸಿನಿಮಾ ಮತ್ತೆ ರಿಲೀಸ್! ಅಂದು ಇದೇ ಚಿತ್ರ ಗಳಿಸಿದ್ದು ಬರೋಬ್ಬರಿ 215 ಕೋಟಿ!


“ಸೇಥಿ ಇತ್ತೀಚೆಗೆ ಕೆಲವು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿದ್ದು, ಪಾಕಿಸ್ತಾನವು ತನ್ನ ನಿಲುವಿಗೆ ವಿರುದ್ಧವಾಗಿ ಏಷ್ಯಾಕಪ್‌ನಲ್ಲಿ ಆಡಬೇಕೆ ಎಂದು ಅವರ ಸಲಹೆಯನ್ನು ಪಡೆದಿದ್ದಾರೆ. ಏಷ್ಯಾ ಕಪ್ ಅನ್ನು ಲಾಹೋರ್ ಮತ್ತು ದುಬೈನಲ್ಲಿ (ಹೈಬ್ರಿಡ್ ಮಾದರಿ) ನಡೆಸಬೇಕೆಂದು ಪಾಕಿಸ್ತಾನ ಬಯಸಿದೆ. ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಆಯೋಜಿಸುವ ಕುರಿತು ಎಸಿಸಿ ಸದಸ್ಯರಿಗೆ ಬಲವಾದ ಮತ್ತು ಸ್ಪಷ್ಟವಾದ ನಿಲುವನ್ನು ನೀಡಲು ಸೇಥಿ ಸರ್ಕಾರದ ಪರವಾಗಿ ಹೋಗಿದ್ದಾರೆ” ಎಂದು ಮೂಲಗಳು ಹೇಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.