ಕ್ರಿಕೆಟ್ ಇಲ್ಲದಿದ್ದರೆ ಆರ್ಮಿ ಸೇರುತ್ತಿದ್ದೆ -ಗೌತಮ್ ಗಂಭೀರ್

ಕ್ರಿಕೆಟ್ ನಲ್ಲಿ ಕರಿಯರ್ ಕಂಡುಕೊಳ್ಳುವ ಮೊದಲು ತಾವು ಆರ್ಮಿಗೆ ಸೇರುವುದನ್ನು ಹೆಚ್ಚು ಇಷ್ಟಪಟ್ಟಿದ್ದು ಎನ್ನುವ ಸಂಗತಿಯನ್ನು ಈಗ ಭಾರತದ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.

Last Updated : Feb 14, 2019, 01:09 PM IST
ಕ್ರಿಕೆಟ್ ಇಲ್ಲದಿದ್ದರೆ ಆರ್ಮಿ ಸೇರುತ್ತಿದ್ದೆ -ಗೌತಮ್ ಗಂಭೀರ್ title=

ನವದೆಹಲಿ: ಕ್ರಿಕೆಟ್ ನಲ್ಲಿ ಕರಿಯರ್ ಕಂಡುಕೊಳ್ಳುವ ಮೊದಲು ತಾವು ಆರ್ಮಿಗೆ ಸೇರುವುದನ್ನು ಹೆಚ್ಚು ಇಷ್ಟಪಟ್ಟಿದ್ದು ಎನ್ನುವ ಸಂಗತಿಯನ್ನು ಈಗ ಭಾರತದ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ತಿಳಿಸಿದ್ದಾರೆ.

2007 ರ ಟ್ವೆಂಟಿ ವಿಶ್ವಕಪ್ ಹಾಗೂ 2017 ರ ವಿಶ್ವಕಪ್ ಟ್ರೋಪಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಗೌತಮ್ ಗಂಭೀರ್, ಈಗ ರಾಧಿಕಾ ಕ್ವಾರ್ಲಾ ಸಿಂಗ್ ರಚಿಸಿರುವ It’s Easy To Be You ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಕ್ರಿಕೆಟ್ ಗೆ ಸೇರುವ ಮೊದಲು ತಮ್ಮ ಪ್ರೀತಿ ಆರ್ಮಿ ಮೇಲೆ ಇತ್ತು ಎನ್ನುವ ಅಂಶವನ್ನು ತಿಳಿಸಿದ್ದಾರೆ.

"ಅದೆಲ್ಲವೂ ಕೂಡ ಹಣೆಬರಹ ಒಂದು ವೇಳೆ ನಾನು 12 ಕ್ಲಾಸ್ ನಲ್ಲಿ ರಣಜಿ ಟ್ರೋಪಿ ಆಡದೆ ಇದ್ದಿದ್ದರೆ ನಾನು ಎನ್ ಡಿಎ ಗೆ ಸೇರುತ್ತಿದ್ದೆ. ಏಕೆಂದರೆ ಅದು ನನ್ನ ಮೊದಲ ಮೋಹ, ಈಗಲೂ ಸಹಿತ ನನಗೆ ಆರ್ಮಿ ಸೇರದಿರುವ ಬಗ್ಗೆ ಬೇಸರವಿದೆ" ಎಂದು ಗಂಭೀರ್ ತಿಳಿಸಿದರು. 

ಗೌತಮ್ ಗಂಭೀರ್ ಈಗ ಸೈನ್ಯದಲ್ಲಿ ಹುತಾತ್ಮರಾಗಿರುವ ಮಕ್ಕಳಿಗಾಗಿ ತಮ್ಮ ಫೌಂಡೆಶನ್ ವೊಂದನ್ನು ಪ್ರಾರಂಭಿಸಿದ್ದಾರೆ.ಸದ್ಯ ಅವರು ಹೇಳುವಂತೆ 50 ಮಕ್ಕಳು ಈ ಫೌಂಡೆಶನ್ ನಲ್ಲಿ ಇದ್ದಾರೆ ಮುಂಬರುವ ದಿನಗಳಲ್ಲಿ ಇದನ್ನು 100 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. 

Trending News