ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಇಬ್ಬರು ಕ್ರಿಕೆಟಿಗರು ಪಾದರ್ಪಾಣೆ ಮಾಡಿದ್ದಾರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಆಲ್ರೌಂಡರ್ ಕ್ರುನಾಲ್ ಪಾಂಡ್ಯ. ಕ್ರುನಾಲ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಕೆಲ ದಾಖಲೆ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಸಹೋದರ ಹಾರ್ದಿಕ್ ಪಾಂಡ್ಯ(Hardhik Pandya)ರಿಂದ ಡೆಬ್ಯೂ ಕ್ಯಾಪ್ ಸ್ವೀಕರಿಸಿದ ಕ್ರುನಾಲ್() ಭಾವುಕರಾಗಿದ್ದರು. ಹಾರ್ದಿಕ್ ಬಿಗಿದಪ್ಪಿ ಮೈದಾನದಲ್ಲಿ ಭಾವುಕರಾಗಿದ್ದರು. ಆದರೆ ಬ್ಯಾಟಿಂಗ್ ಇಳಿದ ಕ್ರುನಾಲ್, ಇಂಗ್ಲೆಂಡ್ ಬೌಲರ್‌ಗಳ ಬೆಂಡೆತ್ತಿದ್ದಾರೆ. ಕೇವಲ 26 ಎಸೆತದಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.


IND vs ENG ODI: ಇಂದಿನಿಂದ ಏಕದಿನ ಸರಣಿ ಆರಂಭ, ಈ ಆಟಗಾರರತ್ತ ಎಲ್ಲರ ಚಿತ್ತ


ಪದಾರ್ಪಣಾ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಕ್ರಿಕೆಟಿಗ ಅನ್ನೋ ದಾಖಲೆಗೆ ಕ್ರುನಾಲ್ ಪಾಂಡ್ಯ(Krunal Pandya) ಪಾತ್ರರಾಗಿದ್ದಾರೆ. 31 ಎಸೆತದ ಎದುರಿಸಿದ ಕ್ರುನಾಲ್ ಅಜೇಯ 58 ರನ್ ಸಿಡಿಸಿದರು. ಡೆಬ್ಯೂ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಭಾರತದ 15ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಕ್ರುನಾಲ್ ಪಾತ್ರರಾಗಿದ್ದಾರೆ.


"ಶಿಖರ್ ಧವನ್ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುತ್ತಾರೆ"-ವಿರಾಟ್ ಕೊಹ್ಲಿ


7ನೇ ಹಾಗೂ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಹಾಫ್ ಸೆಂಚುರಿ(Off Century) ಸಿಡಿಸಿದ ಭಾರತದ 3ನೇ ಆಟಗಾರ ಅನ್ನೋ ಹೆಗ್ಗಳಿಕೆಗೆ ಕ್ರುನಾಲ್ ಪಾತ್ರರಾಗಿದ್ದಾರೆ.


Ind Vs Eng ODI Series: ಮೊದಲ ಏಕದಿನ ಪಂದ್ಯದ ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ ಹೀಗಿರುವ ಸಾಧ್ಯತೆ


7ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್(Batting) ಇಳಿದ 50+ ಸ್ಕೋರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ವಿವರ 55 ಸಾಬಾ ಕರೀಮ್ v ಸೌತ್ ಆಫ್ರಿಕಾ, 1997 60, ರವೀಂದ್ರ ಜಡೇಜಾ v ಶ್ರೀಲಂಕಾ, 2009 58, ಕ್ರುನಾಲ್ ಪಾಂಡ್ಯ v ಇಂಗ್ಲೆಂಡ್, 2021


Team India: ನಿಮ್ಮ ನೆಚ್ಚಿನ ಕ್ರಿಕೆಟ್ ತಾರೆಯರ ವಿಮಾನ ಪ್ರಯಾಣ ಹೇಗಿರುತ್ತೆ, ಇಲ್ಲಿದೆ ವಿಡಿಯೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.