)
India vs England 5th Test Match: ಆಗಸ್ಟ್ 4, 2025 ರಂದು ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ರೋಮಾಂಚಕ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಅನ್ನು 6 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಭಾರತ ಐದು ಟೆಸ್ಟ್ಗಳ ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು. ಸರಣಿಯ ಮೊದಲ ಟೆಸ್ಟ್ ಅನ್ನು ಇಂಗ್ಲೆಂಡ್ 5 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಆ ಬಳಿಕ ಭಾರತ ಎರಡನೇ ಟೆಸ್ಟ್ ಅನ್ನು 336 ರನ್ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು. ಮೂರನೇ ಟೆಸ್ಟ್ನಲ್ಲಿ, ಇಂಗ್ಲೆಂಡ್ ಭಾರತವನ್ನು 22 ರನ್ಗಳಿಂದ ಸೋಲಿಸಿತು. ನಾಲ್ಕನೇ ಟೆಸ್ಟ್ ಪಂದ್ಯ ಡ್ರಾಗೊಂಡಿತು. ಇಂದು ಕೊನೆಯ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ಸರಣಿಯನ್ನು ಸಮಬಲಗೊಳಿಸಿದೆ.
ಈ ಮೂಲಕ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ 2025 ಭಾರತ ಇಂಗ್ಲೆಂಡ್ ಎರಡೂ ತಂಡಗಳ ಪಾಲಾಗಿದೆ.
ಇಂಗ್ಲೆಂಡ್
247(51.2)& 367(85.1)
vs
ಭಾರತ
224(69.4)& 396(88.0)
ಮಳೆ ಮತ್ತು ಕಳಪೆ ಬೆಳಕಿನಿಂದಾಗಿ, ನಾಲ್ಕನೇ ದಿನದಂದು ಕೇವಲ 62.3 ಓವರ್ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 76.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 339 ರನ್ ಗಳಿಸಿತ್ತು. ಈ ಪಂದ್ಯವನ್ನು ಗೆಲ್ಲಲು ಅವರಿಗೆ ಇನ್ನೂ 35 ರನ್ಗಳು ಬೇಕಾಗಿತ್ತು. ಇನ್ನೊಂದೆಡೆ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಲು ಭಾರತಕ್ಕೆ 4 ವಿಕೆಟ್ಗಳು ಬೇಕಾಗಿತ್ತು.
ನಾಲ್ಕನೇ ದಿನದ ಕೊನೆಯ ಅವಧಿಯಲ್ಲಿ ಪ್ರಸಿದ್ಧ್ ಕೃಷ್ಣ (109 ರನ್ಗಳಿಗೆ 3 ವಿಕೆಟ್ಗಳು) ಮತ್ತು ಮೊಹಮ್ಮದ್ ಸಿರಾಜ್ (95 ರನ್ಗಳಿಗೆ 2 ವಿಕೆಟ್ಗಳು) ಅವರ ಅದ್ಭುತ ಬೌಲಿಂಗ್ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯ ಕೊನೆಯ ಟೆಸ್ಟ್ ಪಂದ್ಯಕ್ಕೆ ಅತ್ಯಂತ ರೋಮಾಂಚಕಾರಿ ತಿರುವು ನೀಡಿದ್ದು ಸುಳ್ಳಲ್ಲ.