IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಳೆ ಬಂದರೆ ವಿಜೇತರು ಯಾರು? ಅಂತಿಮ ಫಲಿತಾಂಶ ಏನಾಗಬಹುದು?

ICC Champions Trophy 2025: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದ ವೇಳೆ ಮಳೆ ಬಂದರೆ ಏನಾಗುತ್ತದೆ? ಇದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Mar 6, 2025, 08:15 PM IST
  • ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣವು ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಸಿದ್ಧವಾಗಿದೆ
  • ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಳೆ ಬಂದರೆ ವಿಜೇತರು ಯಾರು?
  • ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿರುತ್ತದೆ
IND vs NZ: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಳೆ ಬಂದರೆ ವಿಜೇತರು ಯಾರು? ಅಂತಿಮ ಫಲಿತಾಂಶ ಏನಾಗಬಹುದು?
ಭಾರತ vs ನ್ಯೂಜಿಲೆಂಡ್

ICC Rules For Champions Trophy 2025; India vs New Zealand: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಸಿದ್ಧವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಪಂದ್ಯ ಮಾರ್ಚ್ 9ರಂದು ಇಲ್ಲಿ ನಡೆಯಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಭಾರತ ಗೆಲುವು ಸಾಧಿಸಿತ್ತು. ಆದರೆ ಪ್ರಸ್ತುತ ನ್ಯೂಜಿಲೆಂಡ್‌ನ ಪ್ರದರ್ಶನ ನೋಡಿದರೆ ಅವರ ವಿರುದ್ಧ ಜಯಿಸುವುದು ಸುಲಭವಲ್ಲ. ಏತನ್ಮಧ್ಯೆ ಫೈನಲ್ ಪಂದ್ಯದ ಸಮಯದಲ್ಲಿ ಮಳೆ ಬಂದರೆ ಏನಾಗುತ್ತದೆ ಎಂಬ ಪ್ರಶ್ನೆಯೂ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತಿದೆ. ಫೈನಲ್‌ನಲ್ಲಿ ಏನಾಗಬಹುದು ಮತ್ತು ಐಸಿಸಿ ಅದಕ್ಕಾಗಿ ಯಾವ ವ್ಯವಸ್ಥೆಗಳನ್ನು ಮಾಡಿದೆ? ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ...

Add Zee News as a Preferred Source

ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯವಾಗಿ ಫೈನಲ್‌ ತಲುಪಿದೆ. ಮೊದಲು ಟೀಂ ಇಂಡಿಯಾ ಲೀಗ್ ಹಂತದಲ್ಲಿ ತನ್ನ ಮೂರು ಪಂದ್ಯಗಳನ್ನು ಗೆದ್ದಿತು. ನಂತರ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಆದರೆ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಇದರರ್ಥ ಸ್ಪರ್ಧೆಯು ಕಠಿಣವಾಗುವ ಎಲ್ಲಾ ಸಾಧ್ಯತೆಗಳಿವೆ. ಈಗ ಮಳೆ ಮತ್ತು ಹವಾಮಾನದ ಬಗ್ಗೆ ಹೇಳುವುದಾರೆ, ಮಾರ್ಚ್ 9ರಂದು ದುಬೈನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಆದರೆ ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ, ಐಸಿಸಿ ಇದಕ್ಕಾಗಿ ಮೀಸಲು ದಿನದ ವ್ಯವಸ್ಥೆ ಮಾಡಿದೆ. ಅಂದರೆ ಮಾರ್ಚ್ 9ರಂದು ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಅದನ್ನು ಮಾರ್ಚ್ 10ರಂದು ಮುಂದುವರೆಸಲಾಗುತ್ತದೆ. ಐಸಿಸಿ ಈಗ ನಿಯಮಗಳನ್ನು ಬದಲಾಯಿಸಿದೆ. ಮಾರ್ಚ್ 9ರಂದು ಪಂದ್ಯ ಪ್ರಾರಂಭವಾಗಿ ಕೆಲವು ಓವರ್‌ ಆಡಿದ ನಂತರ ಮಳೆ ಬಂದರೆ, ಮಾರ್ಚ್ 10ರಂದು ಮುಂದುವರೆಯಲಿದೆ. ಇದರಿಂದ ಎರಡೂ ತಂಡಗಳು ಸಮಾನವಾಗಿ ಆಡುವ ಅವಕಾಶವಿರುತ್ತದೆ. 

ಇದನ್ನೂ ಓದಿ: ಲೈವ್‌ ಶೋನಲ್ಲಿ ಮಲಗುವ ಕೋಣೆಯ ಸೀಕ್ರೆಟ್ಸ್‌ ಬಿಚ್ಚಿಟ್ಟ ಸಾನಿಯಾ ಮಿರ್ಜಾ! ಟೆನಿಸ್‌ ಆಟಗಾರ್ತಿಯ ಹೇಳಿಗೆ ತಬ್ಬಿಬ್ಬಾದ ಫ್ಯಾನ್ಸ್‌

2002ರಲ್ಲಿ ಮಳೆಯಿಂದ ಫೈನಲ್ ಪಂದ್ಯ ನಡೆದಿರಲಿಲ್ಲ!  

2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಶ್ರೀಲಂಕಾ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಅವಧಿಯಲ್ಲಿ ಎರಡೂ ದಿನಗಳಲ್ಲಿ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ನಂತರ ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಈ ಬಾರಿಯೂ ಮಳೆ ಬಂದರೆ ಅದೇ ರೀತಿ ಆಗುತ್ತದೆ. ಐಸಿಸಿ ಪ್ರಕಾರ ಅಂತಿಮ ಪಂದ್ಯವನ್ನು ಪೂರ್ಣಗೊಳಿಸಬೇಕು. ಇದು ಸಂಭವಿಸದಿದ್ದರೆ ಜಂಟಿ ವಿಜೇತರನ್ನು ಘೋಷಿಸಲಾಗುತ್ತದೆ. ಇಲ್ಲಿ ಮೊದಲು ಆಡಿದ ಪಂದ್ಯಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಪಂದ್ಯದ ದಿನದಂದು ಯಾವ ತಂಡ ಬಲಿಷ್ಠವಾಗಿದೆ ಎಂದು ಸಾಬೀತುಪಡಿಸುತ್ತದೆಯೋ ಆ ತಂಡ ಗೆಲ್ಲುತ್ತದೆ. ಆದರೆ ಮಳೆ ಬಾರದಿದ್ದರೆ ಉತ್ತಮ. ಮಳೆ ಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿಪಡಿಸಿರುತ್ತದೆ. 

25 ವರ್ಷಗಳ ಭಾರತ vs ನ್ಯೂಜಿಲೆಂಡ್ ಮುಖಾಮುಖಿ

ಭಾರತ ಮತ್ತು ನ್ಯೂಜಿಲೆಂಡ್ ಇಲ್ಲಿಯವರೆಗೆ 119 ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 61 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ ತಂಡ 50 ಪಂದ್ಯಗಳನ್ನು ಗೆದ್ದಿದೆ. ಏಳು ಪಂದ್ಯಗಳು ಫಲಿತಾಂಶ ಬಂದಿಲ್ಲ. ಆದರೆ ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಈ ಅಂಕಿಅಂಶಗಳನ್ನ ಗಮನಿಸಿದರೆ, ಟೀಂ ಇಂಡಿಯಾ ನ್ಯೂಜಿಲೆಂಡ್‌ಗಿಂತ ಬಲಿಷ್ಠವಾಗಿದೆ ಎಂದು ತೋರುತ್ತದೆ. 2000ನೇ ಇಸವಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ನಡೆದಿದ್ದು, ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯಗಳಿಸಿತ್ತು. ಇದಾದ ನಂತರ ಈಗ ಅಂದರೆ ಸುಮಾರು 25 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮತ್ತೆ ನಡೆಯುತ್ತಿದೆ. 

ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮುನ್ನ ಬಿಸಿಸಿಐಗೆ ಬಿಗ್‌ ಟೆನ್ಶನ್‌... ಅದೊಂದು ಪಂದ್ಯ ನಡೆಯುವುದೇ ಅನುಮಾನ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News