ನವದೆಹಲಿ: ಪಾಕಿಸ್ತಾನದ ಬೌಲಿಂಗ್ ದಂತಕಥೆ ವಕಾರ್ ಯೂನಿಸ್ ಮುಂದಿನ ವರ್ಷದ ಐಸಿಸಿ ವಿಶ್ವ ಕಪ್ ನಲ್ಲಿ  ಭಾರತ ತಂಡವು  ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಒಂದು ಶಕ್ತಿಯಾಗಿರುತ್ತದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಭಾರತವು ಯಾವಾಗಲೂ ವಿಶ್ವಕಪ್ ಹೋಗುವ ಶಕ್ತಿಯಾಗಿರುತ್ತದೆ, ಏಕೆಂದರೆ ವಿರಾಟ್ ಕೊಹ್ಲಿ ಅವರು ತಂಡಕ್ಕೆ ಮರಳಿ ಬರುತ್ತಿದ್ದಾರೆ,ಮತ್ತು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಾರೆ" ಎಂದು ವಕಾರ್ ಯೂನಿಸ್ ಖಲೀಜ್ ಟೈಮ್ಸ್ ಗೆ ಹೇಳಿದ್ದಾರೆ. ಭಾರತ ತಂಡವು ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದೆ,ಆದರೆ ಬ್ಯಾಟಿಂಗ್ ಯಾವಾಗಲೂ ಇತ್ತು, ಈಗ ಈ ಯುವಕರು ತಮ್ಮ ಫಿಟ್ನೆಸ್ ಮತ್ತು ಕೌಶಲ್ಯಗಳನ್ನು ತೋರಿಸುವ ಮೂಲಕ ಫೀಲ್ಡಿಂಗ್ ಗುಣಮಟ್ಟ ಉತ್ತಮವಾಗಿದೆ ಎಂದು ವಕಾರ್ ಯೂನಿಸ್ ಹೇಳಿದರು. 


2018 ರ ಏಷ್ಯಾ ಕಪ್ನ ಅಂತಿಮ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿತು. ಆಗ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವದ ವಹಿಸಿದ್ದ ಭಾರತ ತಂಡದ ರೋಹಿತ್ ಶರ್ಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.


ವಿರಾಟ್ ಮೂರನೇ ಸ್ಥಾನದಲ್ಲಿ ತಮ್ಮ ಬ್ಯಾಟಿಂಗ್ ನಿಂದ ಸಾಕಷ್ಟು ಪಂದ್ಯದಲ್ಲಿನ ಏರಿಳಿತ ಮಾಡಬಲ್ಲರು ಆದರೆ ವಿರಾಟ್ ಇಲ್ಲದೆ  ರೋಹಿತ್ ಅದ್ಭುತ ಕೆಲಸ ಮಾಡಿದ್ದಾನೆ ಅವನು ತುಂಬಾ ಶಾಂತನಾಗಿರುತ್ತಾನೆ ಮತ್ತು ಅವರ ನಾಯಕತ್ವ ಪ್ರತಿ ದಿನವೂ ಬೆಳೆಯುತ್ತಿದೆ. ನಾನು ಐಪಿಎಲ್ನಲ್ಲಿ ಅವರ  ನಾಯಕತ್ವವನ್ನು ನೋಡಿದ್ದೇನೆ. ಇತರರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಅವಕಾಶ ನೀಡುತ್ತಾರೆ, ಅವರೊಬ್ಬ ಅದ್ಬುತ  ನಾಯಕ ಎಂದು ಪಾಕಿಸ್ತಾನದ ಮಾಜಿ  ವಕಾರ ಯೂನಿಸ್ ತರಬೇತುದಾರರು ತಿಳಿಸಿದ್ದಾರೆ.