ಮಾನವೀಯತೆ ಎಲ್ಲದಕ್ಕಿಂತಲೂ ದೊಡ್ಡದು' ಎಂದು ಹರ್ಭಜನ್ ಸಿಂಗ್ ಗೆ ಧನ್ಯವಾದ ಹೇಳಿದ ಆಫ್ರಿದಿ

ಭಾರತದ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಸಾಮಾಜಿಕ ಕಾರ್ಯಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Mar 25, 2020, 08:51 PM IST
ಮಾನವೀಯತೆ ಎಲ್ಲದಕ್ಕಿಂತಲೂ ದೊಡ್ಡದು' ಎಂದು ಹರ್ಭಜನ್ ಸಿಂಗ್ ಗೆ ಧನ್ಯವಾದ ಹೇಳಿದ ಆಫ್ರಿದಿ

ನವದೆಹಲಿ: ಭಾರತದ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಸಾಮಾಜಿಕ ಕಾರ್ಯಗಳಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಆಫ್ರಿದಿ ಜನರಿಗೆ ಅಗತ್ಯ ವಸ್ತುಗಳನ್ನು ಹಂಚುತ್ತಿದ್ದಾರೆ. ಭಾರತದಲ್ಲಿ ಮಂಗಳವಾರ 21 ದಿನಗಳ ಲಾಕ್‌ಡೌನ್ ಘೋಷಣೆಯಾಗಿದ್ದರೂ, ಎರಡೂ ದೇಶಗಳಲ್ಲಿ ಸಾಂಕ್ರಾಮಿಕ ರೋಗವು ಹೆಚ್ಚಿನ ಜನರಿಗೆ ಸೋಂಕು ತಗುಲುತ್ತಿರುವ ಕಾರಣ ಪಾಕಿಸ್ತಾನ ಇನ್ನೂ ಅಂತಹ ಕ್ರಮವನ್ನು ತೆಗೆದುಕೊಂಡಿಲ್ಲ,

ಆಫ್ರಿದಿ ತನ್ನ ದೇಶದ ಜನರಿಗೆ ಆಹಾರ, ಸೋಂಕುನಿವಾರಕ ವಸ್ತುಗಳನ್ನು ಇತರರಿಗೆ ದಾನ ಮಾಡುವುದನ್ನು ನೋಡಿದ ನಂತರ ಅವರಿಗೆ ಮೆಚ್ಚುಗೆ ಸುರಿಮಳೆ ಸುರಿದಿವೆ. ಅಫ್ರಿದಿಯನ್ನು ಶ್ಲಾಘಿಸಿ  ಹರ್ಭಜನ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಮಾನವೀಯತೆಗಾಗಿ ದೊಡ್ಡ ಕೆಲಸ  ಶಾಹಿದ್ ಆಫ್ರಿದಿ  ದೇವರು ನಮ್ಮೆಲ್ಲರನ್ನು ಆಶೀರ್ವದಿಸಲಿ. ನಿಮಗೆ ಹೆಚ್ಚಿನ ಶಕ್ತಿ ನೀಡಲಿ. ವಿಶ್ವದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ನಾನಕ್ ನಾಮ್ ಚಾರ್ಡಿಕಲಾ ತೇರೆ ಭಾನೆ ಸರ್ಬತ್ ಡಾ ಭಲಾ.' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಹಿದ್ ಅಫ್ರಿದಿ 'ಮಾನವೀಯತೆ ಎಲ್ಲಕ್ಕಿಂತ ದೊಡ್ಡದು!  ಭಜ್ಜಿ  ನಿಮ್ಮ ರೀತಿಯ ಮಾತುಗಳಿಗೆ ಧನ್ಯವಾದಗಳು. ಜಗತ್ತು ಒಂದಾಗಬೇಕಿದೆ, # COVID2019 ವಿರುದ್ಧದ ಜಾಗತಿಕ ಹೋರಾಟದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ' ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 

ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದ ಇಡೀ ಕ್ರೀಡಾ ಕ್ಯಾಲೆಂಡರ್ ಹಾಳಾಗಿದೆ, ಒಂದು ವರ್ಷದಲ್ಲಿ ಹಲವಾರು ಬಹುರಾಷ್ಟ್ರೀಯ ಘಟನೆಗಳು ನಡೆಯಬೇಕಿತ್ತು. ಎಲ್ಲಾ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಹಿಂತೆಗೆದುಕೊಳ್ಳಲಾಗಿದ್ದು, ರಾಷ್ಟ್ರೀಯ ಟಿ 20 ಲೀಗ್‌ಗಳು ಸಹ  ಸ್ಥಗಿತಗೊಂಡಿವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭವನ್ನು ಮಾರ್ಚ್ 29 ರಿಂದ ಏಪ್ರಿಲ್ 15 ಕ್ಕೆ ಮುಂದೂಡಕಾಯಿತು , ಆದಾಗ್ಯೂ, ಅದು ಪ್ರಾರಂಭವಾಗುವ ಸಾಧ್ಯತೆಯಿಲ್ಲ. ಇತರ ಕ್ರೀಡಾಕೂಟಗಳಾದ ಯುರೋ 2020 ಮತ್ತು ಒಲಿಂಪಿಕ್ಸ್ 2020 ಸಹ ಕೋವಿಡ್ -19 ನಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

More Stories

Trending News