ಸಂಕಷ್ಟದ ಸುಳಿಗೆ ಸಿಲುಕಿದ ಭಾರತಕ್ಕೆ ಕೆಎಲ್ ರಾಹುಲ್ ಆಸರೆ

ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ನಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Updated: Sep 11, 2018 , 12:08 PM IST
ಸಂಕಷ್ಟದ ಸುಳಿಗೆ ಸಿಲುಕಿದ ಭಾರತಕ್ಕೆ ಕೆಎಲ್ ರಾಹುಲ್ ಆಸರೆ

ನವದೆಹಲಿ: ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ನಲ್ಲಿ ಭಾರತ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂಗ್ಲೆಂಡ್ ತಂಡವು ಎರಡನೇ ಇನ್ನಿಂಗ್ಸ್ ಅಲಿಸ್ಟರ್ ಕೂಕ್ (147) ಮತ್ತು ಜೋಯಿ ರೂಟ್ (125) ಅವರ ಶತಕದ ನೆರವಿನಿಂದ ಎಂಟು ವಿಕೆಟ್ ಕಳೆದುಕೊಂಡು 423 ರನ್ ಗಳಿಸಿದೆ.

ಒಟ್ಟು 464 ರನ್ ಗಳ ಗುರಿಯನ್ನು ತಲುಪಬೇಕಿರುವ ಭಾರತ ತಂಡವು ಈಗಾಗಲೇ ಕೊಹ್ಲಿ, ಶಿಖರ್ ಧವನ್, ಚೆತೆಶ್ವರ್ ಪುಜಾರ್ ಕಳೆದುಕೊಂಡಿದೆ.ಸದ್ಯ ಕೆ.ಎಲ್.ರಾಹುಲ್ (46) ಮತ್ತು ಅಜಿಂಕ್ಯಾ ರಹಾನೆ (10) ಕ್ರಿಸ್ ನಲ್ಲಿದ್ದಾರೆ.

ಇಂಗ್ಲೆಂಡ್ ತಂಡದ ಪರ ಜೇಮ್ಸ್ ಅಂಡರ್ಸನ್ ಎರಡು ವಿಕೆಟ್ ಹಾಗೂ ಸ್ಟುವರ್ಟ್ ಬ್ರಾಡ್ ಒಂದು ವಿಕೆಟ್ ತೆಗೆಯುವ ಮೂಲಕ  ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಭಾರತಕ್ಕೆ ಈಗ ಗೆಲುವಿನ ತಡ ಸೇರಲು ಇನ್ನು 406 ರನ್ ಗಳ ಅವಶ್ಯಕತೆ ಇದೆ.