Asian Games 2023, India Medal Tally: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್-2022 ರಲ್ಲಿ ಭಾರತವು ಶುಭಾರಂಭ ಮಾಡಿದೆ. ಸ್ಪರ್ಧೆಯ ಮೊದಲ ದಿನವಾದ ಭಾನುವಾರ ಅಂದರೆ ಇಂದು ಈ ಪಂದ್ಯಗಳಲ್ಲಿ ಭಾರತದ ಆಟಗಾರರು 4 ಪದಕಗಳನ್ನು ಗೆದ್ದಿದ್ದಾರೆ. ಸ್ಟಾರ್ ಶೂಟರ್ ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಇದಾದ ಬಳಿಕ ರೋಯಿಂಗ್‌’ನಲ್ಲಿ ದೇಶಕ್ಕೆ ಪದಕಗಳು ಬಂದಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Asian Games 2023: ಏಷ್ಯನ್ ಗೇಮ್ಸ್ ಫೈನಲ್ ತಲುಪಿದ ಭಾರತೀಯ ಕ್ರಿಕೆಟ್ ತಂಡ!


ಶೂಟಿಂಗ್‌’ನಲ್ಲಿ ಮೊದಲ ಪದಕ:


ಶೂಟಿಂಗ್‌’ನಲ್ಲಿ, ಭಾರತವು ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌’ನಲ್ಲಿ 1886 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯಗಳಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಮೂವರು ಭಾರತಕ್ಕೆ ಈ ಪದಕ ಗೆದ್ದಿದ್ದಾರೆ. ರಮಿತಾ 631.9, ಮೆಹುಲಿ 630.8 ಮತ್ತು ಆಶಿ 623.3 ಅಂಕ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಆತಿಥೇಯ ಚೀನಾ ಚಿನ್ನದ ಪದಕ ಗೆದ್ದುಕೊಂಡಿತು.


ರೋಯಿಂಗ್‌’ನಲ್ಲಿ ಬೆಳ್ಳಿ:


ರೋಯಿಂಗ್‌’ನಲ್ಲಿ ಭಾರತ ತನ್ನ ಎರಡನೇ ಪದಕವನ್ನು ಪಡೆದುಕೊಂಡಿತು. ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್‌’ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದಾರೆ.


ಬಾಬು ಲಾಲ್-ರಾಮ್ ಲೇಖ್ ವಿಜಯಮಾಲೆ:


ರೋಯಿಂಗ್‌’ನಲ್ಲಿ ಭಾರತಕ್ಕೆ ದಿನದ ಮೂರನೇ ಪದಕ ಲಭಿಸಿದೆ. ಬಾಬು ಲಾಲ್ ಯಾದವ್ ಮತ್ತು ರಾಮ್ ಲೇಖ್ ಪುರುಷರ ಡಬಲ್ಸ್ ಫೈನಲ್-ಎಯಲ್ಲಿ ಕಂಚಿನ ಪದಕ ಗೆದ್ದರು. ಭಾರತದ ಈ ಜೋಡಿ 6:50:41 ಸಮಯ ತೆಗೆದುಕೊಂಡು, ಕಂಚು ಗೆದ್ದಿದೆ.


ಫೈನಲ್‌’ ಪ್ರವೇಶಿಸಿದ ಮಹಿಳಾ ಕ್ರಿಕೆಟ್ ತಂಡ:


ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೇಮ್ಸ್‌’ನ ಫೈನಲ್ ಪ್ರವೇಶಿಸಿದೆ. ಸ್ಮೃತಿ ಮಂಧಾನ ತಂಡ ಸೆಮಿಫೈನಲ್‌’ನಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌’ಗಳಿಂದ ಸೋಲಿಸಿತು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಈ ಪಂದ್ಯಗಳಲ್ಲಿ ಕನಿಷ್ಠ ಬೆಳ್ಳಿಯನ್ನು ಖಚಿತಪಡಿಸಿದೆ.


ಇದನ್ನೂ ಓದಿ:  ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು?


ಚೀನಾದ ಹ್ಯಾಂಗ್‌ ಝೌನಲ್ಲಿ ನಡೆಯುತ್ತಿರುವ ಈ ಏಷ್ಯನ್ ಗೇಮ್ಸ್‌’ನಲ್ಲಿ ಭಾರತದ ಒಟ್ಟು 655 ಆಟಗಾರರು ಭಾಗವಹಿಸುತ್ತಿದ್ದಾರೆ. ಇದು ಏಷ್ಯನ್ ಗೇಮ್ಸ್‌’ನಲ್ಲಿ ಇದುವರೆಗಿನ ದೇಶದ ಅತಿದೊಡ್ಡ ತಂಡವಾಗಿದೆ. ಭಾರತದ ಆಟಗಾರರು ಒಟ್ಟು 40 ಇವೆಂಟ್‌’ಗಳಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಸಹ ಭಾಗವಹಿಸುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ