INDvsSL: ಇಂದಿನ ಪಂದ್ಯದಲ್ಲಿ ಇತಿಹಾಸ ಬರೆಯುವರೇ ಬುಮ್ರಾ!

India vs Sri Lanka: ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದ ಜಸ್ಪ್ರೀತ್ ಬುಮ್ರಾ ಈಗ ಮತ್ತೆ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ. ಇಂದೋರ್ ಟಿ 20 ಪಂದ್ಯದಲ್ಲಿ ಅವರು ಒಂದು ವಿಕೆಟ್ ಕೂಡ ಪಡೆದರು.

Last Updated : Jan 10, 2020, 12:57 PM IST
INDvsSL: ಇಂದಿನ ಪಂದ್ಯದಲ್ಲಿ ಇತಿಹಾಸ ಬರೆಯುವರೇ ಬುಮ್ರಾ! title=

ಪುಣೆ: ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಶುಕ್ರವಾರ ನಡೆಯಲಿರುವ ಮೂರನೇ ಟಿ-20 ಪಂದ್ಯವು ಸರಣಿಯ ನಿರ್ಣಾಯಕ ಪಂದ್ಯವಾಗಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಒಂದು ವೇಳೆ ಶ್ರೀಲಂಕಾ ತಂಡ ಗೆದ್ದರೆ ಅದು ಸರಣಿಗೆ ಸಮನಾಗಿರುತ್ತದೆ. ಏತನ್ಮಧ್ಯೆ, ಈ ಪಂದ್ಯವು ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗೆ ಐತಿಹಾಸಿಕ ಅವಕಾಶವನ್ನೂ ತಂದಿದೆ. ಈ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ, ಅವರು ಭಾರತದ ನಂ .1 ಟಿ 20 ಬೌಲರ್ ಸ್ಥಾನಮಾನವನ್ನು ಪಡೆಯುತ್ತಾರೆ.

ಜಸ್ಪ್ರೀತ್ ಬುಮ್ರಾ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಜಸ್ಪ್ರೀತ್ ಬುಮ್ರಾ 44 ಟಿ 20 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಲ್ ಕೂಡ ಈ ಕ್ರಿಕೆಟ್ ಮಾದರಿಯಲ್ಲಿ 52-52 ವಿಕೆಟ್ ಪಡೆದಿದ್ದಾರೆ. ಚಹಲ್ 36 ವಿಕೆಟ್ ಮತ್ತು ಅಶ್ವಿನ್ 46 ಪಂದ್ಯಗಳಲ್ಲಿ ಇಷ್ಟು ವಿಕೆಟ್ ಪಡೆದಿದ್ದಾರೆ. ಈ ರೀತಿಯಾಗಿ, ಈ ಮೂವರು ಬೌಲರ್‌ಗಳು ಜಂಟಿಯಾಗಿ ಗರಿಷ್ಠ ವಿಕೆಟ್‌ಗಳ ವಿಷಯದಲ್ಲಿ ಭಾರತದ ನಂಬರ್ -1 ಬೌಲರ್ ಆಗಿ ಉಳಿದಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಬುಮ್ರಾ ಒಂದೇ ಒಂದು ವಿಕೆಟ್ ಪಡೆದರೂ ಅವರು ರವಿಚಂದ್ರನ್ ಅಶ್ವಿನ್ (ಆರ್ ಅಶ್ವಿನ್) ಮತ್ತು ಯುಜ್ವೇಂದ್ರ ಚಾಹಲ್ ಅವರನ್ನು ಹಿಂದಿಕ್ಕಲಿದ್ದಾರೆ. ಜೊತೆಗೆ ಟಿ 20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿಕೆ ಬುಮ್ರಾ ಪಾತ್ರರಾಗುತ್ತಾರೆ. ಪ್ರಪಂಚದ ಬಗ್ಗೆ ಮಾತನಾಡುತ್ತಾ, ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆ ಲಸಿತ್ ಮಾಲಿಂಗ ಅವರ ಹೆಸರಿನಲ್ಲಿದೆ. ಶ್ರೀಲಂಕಾದ ಮಾಲಿಂಗ 81 ಪಂದ್ಯಗಳಲ್ಲಿ 106 ವಿಕೆಟ್ ಪಡೆದಿದ್ದಾರೆ.

ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದ ಜಸ್ಪ್ರೀತ್ ಬುಮ್ರಾ ಬಹಳ ಸಮಯದ ನಂತರ ಕ್ರಿಕೆಟಿಗೆ ಮರಳಿದ್ದಾರೆ. ಇಂದೋರ್‌ನಲ್ಲಿ ಆಡಿದ ಎರಡನೇ ಟಿ 20 ಪಂದ್ಯದಲ್ಲಿ, ಬುಮ್ರಾ ತಮ್ಮ ಮೊದಲ ಪಂದ್ಯವನ್ನು ಆಡಿದರು. ಈ ಪಂದ್ಯದಲ್ಲಿ ಅವರ ಸಾಧನೆ ಸಾಮಾನ್ಯವಾಗಿತ್ತು. ನಾಲ್ಕು ಓವರ್‌ಗಳಲ್ಲಿ 32 ರನ್‌ ಗಳಿಸಿದ ಅವರು ಈ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.

Trending News