ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುರಿಯಲು ಕೊಹ್ಲಿಗೆ ಕೇವಲ 23 ರನ್ ಗಳಷ್ಟೇ ಬಾಕಿ...!

ಕ್ಯಾನ್‌ಬೆರಾದಲ್ಲಿ ಬುಧವಾರ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.

Last Updated : Dec 1, 2020, 05:05 PM IST
ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುರಿಯಲು ಕೊಹ್ಲಿಗೆ ಕೇವಲ 23 ರನ್ ಗಳಷ್ಟೇ ಬಾಕಿ...!

ನವದೆಹಲಿ: ಕ್ಯಾನ್‌ಬೆರಾದಲ್ಲಿ ಬುಧವಾರ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.

ಹೌದು, ಏಕದಿನ ಪಂದ್ಯದಲ್ಲಿ  ವೇಗವಾಗಿ 12 ಸಾವಿರ ರೂಗಳನ್ನು ಗಳಿಸಿದ ಸಚಿನ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಹಿಂದಿಕ್ಕಲಿದ್ದಾರೆ. ಇದಕ್ಕೆ ಕೇವಲ 23 ರನ್ ಗಳಷ್ಟೇ ಬಾಕಿ ಇದೆ.ಆರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವುದರೊಂದಿಗೆ ಭಾರತ ತಂಡವು ಈಗಾಗಲೇ ಸರಣಿಯನ್ನು ಕಳೆದುಕೊಂಡಿದೆ.ಎರಡನೇ ಪಂದ್ಯದ ಸಮಯದಲ್ಲಿ ಆಸ್ಟ್ರೇಲಿಯಾ ನೀಡಿದ 390 ರನ್‌ಗಳ ಗೆಲುವಿನ ಗುರಿಯನ್ನು ತಲುಪಲು ವಿಫಲವಾಯಿತು.

Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ

ಇನ್ನೊಂದೆಡೆ ವಿರಾಟ್ ಕೊಹ್ಲಿ 89 ರನ್ ಗಳಿಸಿದರೂ ಕೂಡ ಪಂದ್ಯ ಗೆಲ್ಲುವಲ್ಲಿ ಸಾಧ್ಯವಾಗಲಿಲ್ಲ.ಆದರೆ ಈಗ ಭಾರತಕ್ಕೆ ಕ್ಯಾನ್‌ಬೆರಾದಲ್ಲಿ ನಡೆಯಲಿರುವ 3 ನೇ ಏಕದಿನ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಲು ಮತ್ತು ಕ್ಲೀನ್ ಸ್ವೀಪ್ ತಪ್ಪಿಸಲು ಅವಕಾಶವಿದೆ.ಈ ಪಂದ್ಯದಲ್ಲಿ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುವ ಅವಕಾಶ ಕೊಹ್ಲಿಗೆ ಇದೆ.

ಕೊಹ್ಲಿ 12,000 ಏಕದಿನ ರನ್ ಗಳಿಸಲು ಕೇವಲ 23 ರನ್ ದೂರದಲ್ಲಿದ್ದಾರೆ.ಈಗ ಆ ಗುರಿಯನ್ನು ತಲುಪಿದರೆ ಅವರು 251 ನೇ ಏಕದಿನ ಮತ್ತು 242 ನೇ ಇನ್ನಿಂಗ್ಸ್‌ಗಳಲ್ಲಿ ಈ ಗುರಿಯನ್ನು ತಲುಪುತ್ತಾರೆ.ಇದೇ ದಾಖಲೆಯನ್ನು ಸಚಿನ್‌ 309 ಪಂದ್ಯಗಳು ಮತ್ತು 300 ಇನ್ನಿಂಗ್ಸ್‌ಗಳಲ್ಲಿ ಸಾಧಿಸಿದ್ದರು.

ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ ಹೆಚ್ಚು ರನ್ ಗಳಿಸಿದ ಟಾಪ್ 3 ಭಾರತೀಯ ಆಟಗಾರರು ಯಾರು ಗೊತ್ತೇ?

ಒಟ್ಟಾರೆಯಾಗಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಶ್ರೀಲಂಕಾದ ಮಹೇಲ ಜಯವರ್ಧನೆ ನಂತರ ಮಾತ್ರ ಕೊಹ್ಲಿ ಪಟ್ಟಿಯಲ್ಲಿ ಆರನೇ ಆಟಗಾರನಾಗಲಿದ್ದಾರೆ.ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಹೆಚ್ಚಿನ ಏಕದಿನ ಶತಕಗಳ ದಾಖಲೆ ಸಚಿನ್ ಹೆಸರಿನಲ್ಲಿದೆ.ಒಂದು ವೇಳೆ ಕೊಹ್ಲಿ ಶತಕ ಸಿಡಿಸಿದರೆ ಇದು ಆಸೀಸ್ ವಿರುದ್ಧದ 9 ನೇ ಏಕದಿನ ಶತಕವಾಗಲಿದೆ. ಆ ಮೂಲಕ ಅವರು ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. 

More Stories

Trending News