India vs New Zealand LIVE Cricket Score, Champions Trophy Final 2025: : ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲ್ಲ..!

ಈಗ ಫೈನಲ್ ಗೆ ತಲುಪಿರುವ ಎರಡು ತಂಡಗಳು ಪ್ರಶಸ್ತಿಯನ್ನು ಗೆಲ್ಲುವಲ್ಲಿ 50-50 ಅವಕಾಶವನ್ನು ಹೊಂದಿದೆ.ಒಂದೆಡೆಗೆ ಟೀಮ್ ಇಂಡಿಯಾ ಇಲ್ಲಿನ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಂಡಿರುವುದರಿಂದ ಒಂದು ರೀತಿ ಇದು ತಂಡಕ್ಕೆ ವರದಾನವಾಗಲಿದೆ.

Written by - Manjunath Naragund | Last Updated : Mar 9, 2025, 01:56 PM IST
  • ಈಗ ಫೈನಲ್ ಗೆ ತಲುಪಿರುವ ಎರಡು ತಂಡಗಳು ಪ್ರಶಸ್ತಿಯನ್ನು ಗೆಲ್ಲುವಲ್ಲಿ 50-50 ಅವಕಾಶವನ್ನು ಹೊಂದಿದೆ.
  • ಇಲ್ಲಿನ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಂಡಿರುವುದರಿಂದ ಒಂದು ರೀತಿ ಇದು ತಂಡಕ್ಕೆ ವರದಾನವಾಗಲಿದೆ.
  • ಒತ್ತಡದಲ್ಲಿ ಶಾಂತವಾಗಿ ಆಟವಾಡುವ ಸಾಮರ್ಥ್ಯವು ಅವರ ಪ್ಲಸ್ ಪಾಯಿಂಟ್ ಆಗಿದೆ.
India vs New Zealand LIVE Cricket Score, Champions Trophy Final 2025: : ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲ್ಲ..!
Photo Courtsey:ICC

India vs New Zealand LIVE Cricket Score, Champions Trophy Final 2025: ದುಬೈ: ದುಬೈನಲ್ಲಿರುವ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಹಣಾಹಣಿ ನಡೆಸಲಿವೆ.

Add Zee News as a Preferred Source

ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಈಗಾಗಲೇ ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ಸೆಮಿಫೈನಲ್‌ಗೆ ಎಂಟ್ರಿ ನೀಡಿತ್ತು. ಇದಾದ ನಂತರ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಟೂರ್ನಿಯುದ್ದಕ್ಕೂ ಟೀಮ್ ಇಂಡಿಯಾ ಯಾವುದೇ ಪಂದ್ಯವನ್ನು ಸೋತಿಲ್ಲ. ಇನ್ನೊಂದೆಡೆಗೆ ನ್ಯೂಜಿಲೆಂಡ್ ತಂಡವು ಲೀಗ್ ಹಂತದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸೋಲಿಸಿದ್ದಲ್ಲದೆ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿಯುವುದರ ಮೂಲಕ ಈಗ ಭಾರತದೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಈಗ ಫೈನಲ್ ಗೆ ತಲುಪಿರುವ ಎರಡು ತಂಡಗಳು ಪ್ರಶಸ್ತಿಯನ್ನು ಗೆಲ್ಲುವಲ್ಲಿ 50-50 ಅವಕಾಶವನ್ನು ಹೊಂದಿದೆ.ಒಂದೆಡೆಗೆ ಟೀಮ್ ಇಂಡಿಯಾ ಇಲ್ಲಿನ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಂಡಿರುವುದರಿಂದ ಒಂದು ರೀತಿ ಇದು ತಂಡಕ್ಕೆ ವರದಾನವಾಗಲಿದೆ. ಆದರೆ ನ್ಯೂಜಿಲೆಂಡ್‌ನ ಬುದ್ಧಿವಂತ ತಂತ್ರಗಾರಿಕೆ ಮತ್ತು ಒತ್ತಡದಲ್ಲಿ ಶಾಂತವಾಗಿ ಆಟವಾಡುವ ಸಾಮರ್ಥ್ಯವು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.ಅಲ್ಲದೆ, ದುಬೈನಲ್ಲಿ ಈಗಾಗಲೇ ಆಡಿರುವುದರಿಂದ ಭಾರತದಂತೆಯೇ ಅವರು ಇಲ್ಲಿನ ಪರಿಸ್ಥಿತಿಗಳಿಗೆ ಚೆನ್ನಾಗಿ ಒಗ್ಗಿಕೊಂಡಿದ್ದಾರೆ. ಐಸಿಸಿ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಯಾವಾಗಲೂ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ, ಇದುವರೆಗೆ ಕಿವೀಸ್ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರು ಬಾರಿ ಟೀಮ್ ಇಂಡಿಯಾ ತಂಡವನ್ನು ಸೋಲಿಸಿದೆ. ಹಾಗಾಗಿ ಇದು ನಿಜಕ್ಕೂ ಟೀಮ್ ಇಂಡಿಯಾಗೆ ಬೆದರಿಕೆಯಾಗಿದೆ.

ಫೈನಲ್‌ನಲ್ಲಿ ಭಾರತ ತಂಡಕ್ಕೆ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ರಂತಹ ಸ್ಪಿನ್ ಮಾಂತ್ರಿಕರು ಬಲ ತುಂಬಲಿದ್ದಾರೆ. ಇನ್ನೊಂದೆಡೆಗೆ ನ್ಯೂಜಿಲೆಂಡ್ ತಂಡವು ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್ ಮತ್ತು ಗ್ಲೆನ್ ಫಿಲಿಪ್ಸ್ ರಂತಹ ತನ್ನದೇ ಆದ ಬೌಲಿಂಗ್ ಅಸ್ತ್ರಗಳನ್ನು ಹೊಂದಿದೆ.ಅವರ ಬೌಲಿಂಗ್ ಸಾಮರ್ಥ್ಯವು ಟೀಮ್ ಇಂಡಿಯಾದ ಬ್ಯಾಟಿಂಗ್ ಬಲವನ್ನು ಹೆಡೆ ಮುರಿ ಕಟ್ಟುವಂತಹ ಸಾಮರ್ಥ್ಯವನ್ನು ಹೊಂದಿದೆ.ಇನ್ನು ಭಾರತದ ಬ್ಯಾಟ್ಸ್‌ಮನ್‌ಗಳು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಈ ವಿಚಾರದಲ್ಲಿ ನ್ಯೂಜಿಲೆಂಡ್ ತಂಡವು ಕೂಡ ಹಿಂದೆ ಬಿದ್ದಿಲ್ಲ, ಕೇನ್ ವಿಲಿಯಮ್ಸನ್, ರಾಚಿನ್ ರವೀಂದ್ರ, ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಈಗಾಗಲೇ ಶತಕ ಗಳಿಸಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಷಯದಲ್ಲಿ ನ್ಯೂಜಿಲೆಂಡ್ ಭಾರತಕ್ಕಿಂತ ಮುಂದಿದೆ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್ ಮತ್ತು ವಿಲಿಯಂ ಒ ರೂರ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.ಈಗ ಟೀಮ್ ಇಂಡಿಯಾ ಮೇಲೆ 140 ಕೋಟಿ ಜನರ ಒತ್ತಡ ಇರುವುದರಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.ಹಾಗಾಗಿ ಈ ಒತ್ತಡವನ್ನು ಒಂದು ವೇಳೆ ನಿಭಾಯಿಸಲು ಟೀಮ್ ಇಂಡಿಯಾ ವಿಫಲವಾದರೆ.ಖಂಡಿತಾ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂದೇ ಹೇಳಬಹುದು.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

About the Author

Trending News