ಕಟಕ್: ಇಲ್ಲಿನ ಬಾರಬತಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು 101 ರನ್‌ಗಳ ಅಂತರದ ಭಾರೀ ಜಯ ಸಾಧಿಸಿತು.ಆ ಮೂಲಕ ಟಿ20 ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆಯನ್ನು ಸಾಧಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಾರ್ಕ್ರಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದೆ ವೇಳೆ ಮೊದಲು ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಿ ಕೇವಲ 17 ರನ್ ಗಳಿಗೆ ಎರಡು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತು.ಇದೆ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅಜೇಯ 59 ರನ್ (ಕೇವಲ 28 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್) ಸಿಡಿಸುವ ಮೂಲಕ ಕೊನೆಯ ಹತ್ತು ಓವರ್‌ಗಳಲ್ಲಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಲು ನೆರವಾದರು.ಇನ್ನೊಂದೆಡೆಗೆ ತಿಲಕ್ ವರ್ಮ (26), ಅಕ್ಷರ್ ಪಟೇಲ್ (23) ಮತ್ತು ಅಭಿಷೇಕ್ ಶರ್ಮ (17) ಸಹ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು.
What a knock from Hardik Pandya! 💪💪
Put on an absolute show with the bat here in Cuttack! 🔥
5⃣9⃣* Runs
2⃣8⃣ Balls
6⃣ Fours
4⃣ SixesScorecard ▶️ https://t.co/tiemfwcNPh #TeamIndia | #INDvSA | @hardikpandya7 | @IDFCFIRSTBank pic.twitter.com/MJNzTCokA6
— BCCI (@BCCI) December 9, 2025
ಇದೆ ವೇಳೆ ಟೀಮ್ ಇಂಡಿಯಾ ನೀಡಿದ 176 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲಿಯೇ ಆಘಾತವನ್ನು ಎದುರಿಸಿತು.ಕೇವಲ 16 ರನ್ ಗಳಾಗುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು, ಟೀಮ್ ಇಂಡಿಯಾದ ಪರವಾಗಿ ಆರಂಭಿಕ ಆಘಾತ ನೀಡಿದ ಅರ್ಶ್‌ದೀಪ್ ಸಿಂಗ್ (2-14) ಕ್ವಿಂಟನ್ ಡಿ ಕಾಕ್‌ನ್ನು ಎರಡೇ ಎಸೆತದಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಅಕ್ಷರ್ ಪಟೇಲ್ (2-7), ಜಸ್ಪ್ರೀತ್ ಬುಮ್ರಾ (2-17), ವರುಣ್ ಚಕ್ರವರ್ತಿ (2-19) ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದೂಬೆ ತಲಾ ಒಂದು ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 12.3 ಓವರ್‌ಗಳಲ್ಲಿ 74 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
An emphatic win in the #INDvSA T20I series opener 🥳#TeamIndia register a 1⃣0⃣1⃣-run victory in Cuttack to go 1⃣-0⃣ up 🙌
Scorecard ▶️ https://t.co/tiemfwcNPh@IDFCFIRSTBank pic.twitter.com/mw3oxC5AHw
— BCCI (@BCCI) December 9, 2025
ಎಲ್ಲಾ ವಿಭಾಗಗಳಲ್ಲೂ ಆಧಿಪತ್ಯ ಸಾಧಿಸಿದ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈಗ ಸರಣಿಯ ಎರಡನೇ ಟಿ-20 ಪಂದ್ಯ ಡಿಸೆಂಬರ್ 11 ರಂದು ನಡೆಯಲಿದೆ. ಈ ಭರ್ಜರಿ ಜಯದೊಂದಿಗೆ ಭಾರತ ತಂಡವು ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ.









