)
India vs South Aftrica match score : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಮತ್ತು ನಿರ್ಣಾಯಕ ಏಕದಿನ ಸರಣಿಯನ್ನು ಭಾರತ ಆಲ್ರೌಂಡ್ ಪ್ರದರ್ಶನದೊಂದಿಗೆ ಗೆದ್ದುಕೊಂಡಿತು. ವಿಶಾಖಪಟ್ಟಣದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ನೀಡಿದ್ದ 271 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ, 9 ವಿಕೆಟ್ ಪಡೆದುಕೊಂಡು ಸೋಲಿಸಿ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಅಂತರರಾಷ್ಟ್ರೀಯ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕ ಈ ಅದ್ಬುತ ಗೆಲುವಿಗೆ ದಾರಿ ಮಾಡಿಕೊಟ್ಟಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ಉತ್ತಮ ಆರಂಭವನ್ನು ನೀಡಿತು. ವೇಗಿ ಪರಿಧಿ ಕೃಷ್ಣ (4/66) ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (4/41) ತಲಾ ನಾಲ್ಕು ವಿಕೆಟ್ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾವನ್ನು 47.5 ಓವರ್ಗಳಲ್ಲಿ 270 ರನ್ಗಳಿಗೆ ಸೀಮಿತಗೊಳಿಸಿದರು. ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (106) ಆಪ್ರಿಕಾ ಪರ ಶತಕ ಗಳಿಸಿದ ಏಕೈಕ ಬ್ಯಾಟ್ಸ್ಮನ್. ಡಿ ಕಾಕ್ ನಾಯಕಿ ಟೆಂಬಾ ಬವುಮಾ (48) ಅವರೊಂದಿಗೆ 113 ರನ್ಗಳ ಜೊತೆಯಾಟ ನಡೆಸಿದರು, ಆದರೆ ಇತರ ಐದು ಆಟಗಾರರು ಒಂದೇ ಅಂಕೆಗೆ ಸೀಮಿತರಾದರು, ಇದರಿಂದಾಗಿ ತಂಡವು ದೊಡ್ಡ ಮೊತ್ತವನ್ನು ಗಳಿಸುವುದಲ್ಲಿ ವಿಫಲವಾಯಿತು.
271 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ ಗೆ 155 ರನ್ ಗಳ ಬೃಹತ್ ರನ್ ಕಲೆಹಾಕಿದರು. ಹಿಟ್ ಮ್ಯಾನ್ 54 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ರೋಹಿತ್ 73 ಎಸೆತಗಳಲ್ಲಿ 75 ರನ್ ಗಳಿಸಿ ಔಟಾದರು (7 ಬೌಂಡರಿ, 3 ಸಿಕ್ಸರ್). ರೋಹಿತ್ ಔಟಾದ ನಂತರ, ಜೈಸ್ವಾಲ್ 111 ಎಸೆತಗಳಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಗಳಿಸಿದರು.
ನಂತರ ವಿರಾಟ್ ಕೊಹ್ಲಿ ಜೈಸ್ವಾಲ್ ಜೊತೆಗೂಡಿ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಕೊಹ್ಲಿ ಕೇವಲ 40 ಎಸೆತಗಳಲ್ಲಿ ತಮ್ಮ 76 ನೇ ಏಕದಿನ ಅರ್ಧಶತಕ ಪೂರೈಸಿದರು. ಯಶಸ್ವಿ ಜೈಸ್ವಾಲ್ 116 ರನ್ ಗಳಿಸಿ ಅಜೇಯರಾಗಿ ಉಳಿದರು. ವಿರಾಟ್ ಕೊಹ್ಲಿ 65 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 39.5 ಓವರ್ಗಳಲ್ಲಿ ಗುರಿಯನ್ನು ಬೆನ್ನಟ್ಟಿ 9 ವಿಕೆಟ್ಗಳಿಂದ ಸರಣಿಯನ್ನು ಗೆದ್ದುಕೊಂಡಿತು.