India vs South Africa: ಮೂರು ಪ್ರಯತ್ನಗಳ ನಂತರವೂ ಕ್ಯಾಚ್ ಕೈಬಿಟ್ಟ ಮೊಹಮ್ಮದ್ ಸಿರಾಜ್

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಫೀಲ್ಡರ್‌ಗಳು ಅತ್ಯಂತ ಕಳಪೆ ಆಟ ಪ್ರದರ್ಶಿಸಿ ಸೋಲುಂಡಿದ್ದಾರೆ. ಅವೇಶ್ ಖಾನ್ ಅವರ ಓವರ್‌ನಲ್ಲಿ 3 ಪ್ರಯತ್ನಗಳ ನಂತರವೂ ಮೊಹಮ್ಮದ್ ಸಿರಾಜ್ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. 

Written by - Yashaswini V | Last Updated : Oct 7, 2022, 11:57 AM IST
  • ಅವೇಶ್ ಖಾನ್ ಭಾರತಕ್ಕೆ ಇನಿಂಗ್ಸ್ ನ 38ನೇ ಓವರ್ ಮಾಡಿದರು.
  • ಈ ಓವರ್‌ನಲ್ಲಿ ಭಾರತೀಯರು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿದರು.
  • ಈ ಓವರ್‌ನಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟರು.
India vs South Africa: ಮೂರು ಪ್ರಯತ್ನಗಳ ನಂತರವೂ ಕ್ಯಾಚ್  ಕೈಬಿಟ್ಟ  ಮೊಹಮ್ಮದ್ ಸಿರಾಜ್  title=
Mohammed Siraj Drop Catch

ಭಾರತ vs ದಕ್ಷಿಣ ಆಫ್ರಿಕಾ:  ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 9 ರನ್‌ಗಳಿಂದ ಸೋತಿದೆ. ಟೀಂ ಇಂಡಿಯಾ ಪರವಾಗಿ ಬೌಲರ್‌ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅದೇ ಸಮಯದಲ್ಲಿ, ಫೀಲ್ಡರ್‌ಗಳು ಅನೇಕ ಕ್ಯಾಚ್‌ಗಳನ್ನು ಕೈಬಿಟ್ಟರು. ಅವರಲ್ಲಿ ಮೊಹಮ್ಮದ್ ಸಿರಾಜ್ ಮುಂಚೂಣಿಯಲ್ಲಿದ್ದರು. ಮೊಹಮ್ಮದ್ ಸಿರಾಜ್ ಅವರು  ಅವೇಶ್ ಖಾನ್ ಅವರ ಓವರ್‌ನಲ್ಲಿ ಮೂರು ಬಾರಿ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ  ಕ್ಯಾಚ್ ಹಿಡಿಯಲು ಯಶಸ್ವಿಯಾಗಲಿಲ್ಲ.  

ಕ್ಯಾಚ್ ಕೈಬಿಟ್ಟ ಮೊಹಮ್ಮದ್ ಸಿರಾಜ್:
ಅವೇಶ್ ಖಾನ್ ಭಾರತಕ್ಕೆ ಇನಿಂಗ್ಸ್ ನ 38ನೇ ಓವರ್ ಮಾಡಿದರು. ಈ ಓವರ್‌ನಲ್ಲಿ ಭಾರತೀಯರು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿದರು. ಈ ಓವರ್‌ನಲ್ಲಿ ಎರಡು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟರು. ಈ ಓವರ್‌ನ ಮೊದಲ ಎಸೆತದಲ್ಲಿ, ಹೆನ್ರಿಕ್ ಕ್ಲಾಸೆನ್ ಅವೇಶ್ ಖಾನ್ ಮೇಲೆ ಲಾಂಗ್ ಸ್ಟ್ರೋಕ್ ಹೊಡೆದರು, ಆದರೆ ಚೆಂಡು ತುಂಬಾ ಎತ್ತರಕ್ಕೆ ಏರಿತು. 3 ಪ್ರಯತ್ನಗಳ ನಂತರ ಮೊಹಮ್ಮದ್ ಸಿರಾಜ್ ಈ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಇದು ಸುಲಭವಾದ ಕ್ಯಾಚ್ ಆಗಿತ್ತು. ಅದರ ಮುಂದಿನ ಎಸೆತದಲ್ಲಿ ರವಿ ಬಿಷ್ಣೋಯ್ ಅವರು ಡೇವಿಡ್ ಮಿಲ್ಲರ್ ಅವರ ಕ್ಯಾಚ್ ತೊರೆದರು.  

ಇದನ್ನೂ ಓದಿ- ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ!

ಕ್ಯಾಚ್ ಕೈ ತಪ್ಪಿದ ಬಳಿಕ ಡೇವಿಡ್ ಮಿಲ್ಲರ್ ಜೀವದಾನದ ಸಂಪೂರ್ಣ ಲಾಭ ಪಡೆದರು. ಈ ಓವರ್ ನ ಮೂರನೇ ಎಸೆತದಲ್ಲಿ ಸುದೀರ್ಘ ಸಿಕ್ಸರ್ ಬಾರಿಸಿದ ಅವರು, ಕ್ರೀಡಾಂಗಣದಲ್ಲಿ ನಿಂತಿದ್ದ ಬಾಲ್ ಬಾಯ್ ಗೆ ಅತ್ಯಂತ ಸುಲಭವಾಗಿ ಕ್ಯಾಚ್ ನೀಡಿದ್ದು ಅಲ್ಲಿದ್ದವರೆಲ್ಲರಲ್ಲಿ ಅಚ್ಚರಿ ಮೂಡಿಸಿತು. 

ಇದನ್ನೂ ಓದಿ- 77 ಎಸೆತ, 205 ರನ್: ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು!

ಭಾರತ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದು ಸಂಪೂರ್ಣವಾಗಿ ತಪ್ಪು ಎಂದು ಸಾಬೀತಾಯಿತು. ಭಾರತೀಯ ಬೌಲರ್‌ಗಳು ತುಂಬಾ ದುಬಾರಿ ಎಂದು ಸಾಬೀತಾಯಿತು. ಇವರಿಂದಾಗಿ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿದ್ದು, ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News