ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಯಾವುದೇ ಕಾರಣಕ್ಕೂ ಭಾರತ ಗೆಲ್ಲಲ್ಲ: ಮಾಜಿ ನಾಯಕನ ಶಾಕಿಂಗ್‌ ಹೇಳಿಕೆ

Champions Trophy: ಬಹುತೇಕರು ಭಾರತ ತಂಡವೇ ಚಾಂಪಿಯನ್‌ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಆದರೆ ಭಾರತವು ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನಪೇಕ್ಷಿತ ದಾಖಲೆಯನ್ನ ಹೊಂದಿದೆ. ಇಂದಿನ ಪಂದ್ಯ ಗೆದ್ದರೆ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಲಿದೆ. ಒಂದು ವೇಳೆ ಇಂದಿನ ಫೈನಲ್‌ ಫೈಟ್‌ನಲ್ಲಿ ರೋಹಿತ್‌ ಪಡೆ ಗೆದ್ದರೆ 37 ವರ್ಷಗಳ ಹಳೆಯ ಶಾಪದಿಂದ ವಿವೋಚನೆ ದೊರೆಯಲಿದೆ. 

Written by - Puttaraj K Alur | Last Updated : Mar 9, 2025, 01:36 PM IST
  • ಇಂದು ದುಂಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ VS ನ್ಯೂಜಿಲೆಂಡ್‌ ಫೈನಲ್‌ ಫೈಟ್‌
  • ಇಂದಿನ ಹೈವೋಲ್ಟೇಜ್‌ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗುವ ನಿರೀಕ್ಷೆ ಇದೆ
  • ಭಾರತ ತಂಡವು ಫೈನಲ್‌ ಪಂದ್ಯದಲ್ಲಿ ಗೆಲ್ಲುವುದಿಲ್ಲವೆಂದು ಭವಿಷ್ಯ ನುಡಿದ ಇಂಗ್ಲೆಂಡ್‌ ಮಾಜಿ ಕ್ಯಾಪ್ಟನ್
ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಯಾವುದೇ ಕಾರಣಕ್ಕೂ ಭಾರತ ಗೆಲ್ಲಲ್ಲ: ಮಾಜಿ ನಾಯಕನ ಶಾಕಿಂಗ್‌ ಹೇಳಿಕೆ
ಭಾರತ VS ನ್ಯೂಜಿಲೆಂಡ್‌ ಫೈನಲ್‌ ಫೈಟ್‌

Champions Trophy Final: ಇಂದು ದುಂಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ VS ನ್ಯೂಜಿಲೆಂಡ್‌ ನಡುವೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಫೈಟ್‌ ನಡೆಯಲಿದೆ. ಉಭಯ ತಂಡಗಳು ಬಲಿಷ್ಠವಾಗಿರುವುದರಿದ ಯಾರಿಗೆ ವಿಜಯಲಕ್ಷ್ಮಿ ಸಿಗುತ್ತಾಳೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಟೂರ್ನಿಯಲ್ಲಿ ಅಜೇಯವಾಗಿ ಫೈನಲ್‌ ತಲುಪಿರುವ ರೋಹಿತ್‌ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ನ್ಯೂಜಿಲೆಂಡ್‌ ಕೂಡ ಬಲಿಷ್ಠವಾಗಿದ್ದು ಇಂದಿನ ಹೈವೋಲ್ಟೇಜ್‌ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯಾಗುವ ನಿರೀಕ್ಷೆ ಇದೆ. 

Add Zee News as a Preferred Source

ಬಹುತೇಕರು ಭಾರತ ತಂಡವೇ ಚಾಂಪಿಯನ್‌ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಆದರೆ ಭಾರತವು ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನಪೇಕ್ಷಿತ ದಾಖಲೆಯನ್ನ ಹೊಂದಿದೆ. ಇಂದಿನ ಪಂದ್ಯ ಗೆದ್ದರೆ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಲಿದೆ. ಒಂದು ವೇಳೆ ಇಂದಿನ ಫೈನಲ್‌ ಫೈಟ್‌ನಲ್ಲಿ ರೋಹಿತ್‌ ಪಡೆ ಗೆದ್ದರೆ 37 ವರ್ಷಗಳ ಹಳೆಯ ಶಾಪದಿಂದ ವಿವೋಚನೆ ದೊರೆಯಲಿದೆ. ಹೀಗಾಗಿ ಹೊಸದೊಂದು ಇತಿಹಾಸ ನಿರ್ಮಿಸುವ ಸುವರ್ಣಾವಕಾಶ ಸಿಕ್ಕಿದ್ದು, ಟೀಂ ಇಂಡಿಯಾ ಗೆಲ್ಲಲಿ ಅಂತಾ ಕೋಟ್ಯಂತರ ಅಭಿಮಾನಿಗಳು ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. 

ಇದನ್ನೂ ಓದಿ: Rohit Sharma : ಇಂದು ಫೈನಲ್ ಪಂದ್ಯ ಮುಗಿಯುತ್ತಲೇ ರೋಹಿತ್ ಶರ್ಮಾ ನಿವೃತ್ತಿ..!? ಶುಭಮನ್ ಗಿಲ್ ಪ್ರಮುಖ ಹೇಳಿಕೆ

ನ್ಯೂಜಿಲೆಂಡ್‌ ವಿರುದ್ಧ ಭಾರತವೇ ಗೆಲ್ಲಲಿದೆ ಅಂತಾ ಅಭಿಮಾನಿಗಳು ಹೇಳುತ್ತಿದ್ದರೆ, ಅತ್ತ ಟೀಂ ಇಂಡಿಯಾ ಯಾವುದೇ ಕಾರಣಕ್ಕೂ ಫೈನಲ್‌ ಪಂದ್ಯವನ್ನ ಗೆಲ್ಲುವುದಿಲ್ಲವೆಂದು ಇಂಗ್ಲೆಂಡ್‌ ತಂಡ ಮಾಜಿ ನಾಯಕ ನಾಸರ್ ಹುಸೇನ್ ಭವಿಷ್ಯ ನುಡಿದಿದ್ದಾರೆ. ಹೌದು, ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ರೀತಿಯ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ʼಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ನ್ಯೂಜಿಲೆಂಡ್‌ ಸೋಲುವುದಿಲ್ಲವೆಂದು ನಾನು ಭಾವಿಸುತ್ತೇನೆ. ಆರನ್‌ ಫಿಂಚ್‌ ಮನೆಯಲ್ಲಿ ನಡೆದ ಔತಣಕೂಟದಲ್ಲಿಯೂ ನಾವು ಇದರ ಬಗ್ಗೆಯೇ ಮಾತನಾಡಿದ್ದೇವು. ಅಲ್ಲಿ ಬಂದಿದ್ದ ಬಹುತೇಕರು ನ್ಯೂಜಿಲೆಂಡ್‌ ತಂಡವೇ ಗೆಲ್ಲುತ್ತದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವೇ ಗೆಲುವು ಸಾಧಿಸಲಿದ್ದು, ಪ್ರಶಸ್ತಿಗೆ ಮುತ್ತಿಕ್ಕಲಿದೆʼ ಎಂದು ಹೇಳಿದ್ದಾರೆ. 

ನ್ಯೂಜಿಲೆಂಡ್‌ ತಂಡದ ಪ್ರದರ್ಶನ ನೋಡುವುದಾದರೆ ಟೂರ್ನಿಯುದ್ದಕ್ಕೂ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಫೈನಲ್‌ ಪ್ರವೇಶಿಸಿದ್ದಾರೆ. ಎಲ್ಲಾ ಆಟಗಾರರ ನಡುವೆ ಉತ್ತಮ ಹೊಂದಾಣಿಕೆಯಿದ್ದು, ನನ್ನ ಪ್ರಕಾರ ನ್ಯೂಜಿಲೆಂಡ್‌ ತಂಡದ ಗೆಲುವು ಫಿಕ್ಸ್‌ ಅಂತಾ ನಾಸರ್‌ ಹುಸೇನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಆರಂಭಕ್ಕೂ ಮುನ್ನ ಕ್ರಿಕೆಟ್‌ ಲೋಕಕ್ಕೆ ಶಾಕ್‌; ಕ್ಯಾಪ್ಟನ್‌ ರೋಹಿತ್‌ ಶರ್ಮಾ ನಿವೃತ್ತಿ! ವಿರಾಟ್‌ ಕೊಹ್ಲಿ...

ಪ್ರಸಕ್ತ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಟೀಂ ಇಂಡಿಯಾ ಎದುರು ನ್ಯೂಜಿಲೆಂಡ್‌ ಸೋಲು ಕಂಡಿತ್ತು. ಗ್ರೂಪ್‌ ʼಎʼ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಭಾರತ ತಂಡವು ನೀಡಿದ್ದ 249 ರನ್‌ಗಳ ಗೆಲುವಿನ ಗುರಿ ತಲುಪಲು ಕಿವೀಸ್‌ ವಿಫಲವಾಗಿತ್ತು. ಇದೀಗ ಮತ್ತೆ ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್‌ ಮೇಲೆ ಸಂಪೂರ್ಣ ಪಂದ್ಯದ ಫಲಿತಾಂಶ ನಿಂತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News