IPL 2020: ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್, ಕೊಲ್ಕತ್ತಾ ವಿರುದ್ಧ ಮುಂಬೈಗೆ ಗೆಲುವು

ಆಬುದಾಬಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡ 49 ರನ್ ಗಳ ಅಂತರದಿಂದ ಗೆಲುವಿನ ನಗೆ ಬಿರಿದೆ.

Last Updated : Sep 23, 2020, 11:57 PM IST
IPL 2020: ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್, ಕೊಲ್ಕತ್ತಾ ವಿರುದ್ಧ ಮುಂಬೈಗೆ ಗೆಲುವು  title=
Photo Courtsey : Twitter (Mumbai Indians)

ನವದೆಹಲಿ: ಆಬುದಾಬಿಯಲ್ಲಿನ ಶೇಕ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡ 49 ರನ್ ಗಳ ಅಂತರದಿಂದ ಗೆಲುವಿನ ನಗೆ ಬಿರಿದೆ.

ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಅವರ ( 80) ಸ್ಪೋಟಕ ಬ್ಯಾಟಿಂಗ್ ನಲ್ಲಿ ಆರು ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ  ತಂಡ ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

ಇಷ್ಟು ದಿನದ ಕಾತುರಕ್ಕೆ ತೆರೆ: ಯುಎಇಯಲ್ಲಿ ಇಂದಿನಿಂದ ಐಪಿಎಲ್ 2020 ಆರಂಭ

ಇನ್ನೊಂದೆಡೆಗೆ ಮುಂಬೈ ತಂಡದ ಪರವಾಗಿ ಸೂರ್ಯ ಕುಮಾರ್ ಯಾದವ್ ಕೂಡ ಸ್ಪೋಟಕ ಬ್ಯಾಟಿಂಗ್ ಆಡಿದರು ಕೇವಲ 28 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸುವ ಮೂಲಕ 47 ರನ್ ಗಳಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ಐದು ವಿಕೆಟ್ ನಷ್ಟಕ್ಕೆ 195 ರನ್ಗಳನ್ನು ಗಳಿಸಿತು.

ಗೆಲುವಿನ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು ತಂಡದ ಮೊತ್ತ 14 ಆಗಿದ್ದಾಗ ಶುಭ್ಮನ್ ಗಿಲ್ ಅವರ ವಿಕೆಟ್ ನ್ನು ಕಳೆದುಕೊಂದಿತು ಇದಾದ ನಂತರ ಸುನಿಲ್ ನರೈನ್ ಅವರು 25 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು. ಒಂದೆಡೆ  ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದ ದಿನೇಶ್ ಕಾರ್ತಿಕ್ 30 ರನ್ ಗಳಿಸಿದ್ದಾಗ ರಾಹುಲ್ ಚಹಾರ್ ಅವರ ಎಸೆತದಲ್ಲಿ ಎಲ್ಬಿಡಬ್ಲೂ ಗೆ ಬಲಿಯಾದರು. ತದನಂತರ ಪ್ಯಾಟ್ ಕಮಿನ್ಸ್ ಅವರು ಕೇವಲ 12 ಎಸೆತದಲ್ಲಿ 33 ರನ್ ಗಳಿಸಿದರೂ ಕೂಡ ಗೆಲುವಿನ ದಡ ಸೇರಲು ಯಶಸ್ವಿಯಾಗಲಿಲ್ಲ.
 

Trending News