IPL 2022: ಚೆನ್ನೈ ತಂಡಕ್ಕೆ ಏಕಾಏಕಿ ಎಂಟ್ರಿ ಕೊಟ್ಟ ಈ ಅಪಾಯಕಾರಿ ಆಟಗಾರ, ಲಕ್ನೋಗೆ ಭೀತಿ!
ಈ ಆಟಗಾರನು ಪಿಚ್‌ಗೆ ಕಾಲಿಟ್ಟಾಗಲೆಲ್ಲ ಚೆನ್ನೈ ಸೋಲುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿದೆ. ಮಾರಕ ಬೌಲಿಂಗ್ ಜೊತೆಗೆ ವೇಗದ ಶೈಲಿಯ ಬ್ಯಾಟಿಂಗ್‍ಗೂ ಈ ಆಟಗಾರ ಹೆಸರುವಾಸಿ.
ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League 2022)ಯ 7ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಭರ್ಜರಿ ಪೈಪೋಟಿ(LSG vs CSK) ನಡೆಯಲಿದೆ. ಲಕ್ನೋ ವಿರುದ್ಧದ ಈ ಪಂದ್ಯಕ್ಕೆ ಇದ್ದಕ್ಕಿದ್ದಂತೆ ಚೆನ್ನೈ ತಂಡದ ಅಪಾಯಕಾರಿ ಆಟಗಾರನೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಈ ಆಟಗಾರ ತಂಡಕ್ಕೆ ಸೇರಿದ್ದು ಚೆನ್ನೈಗೆ ಆನೆಬಲ ಬಂದಂತಾಗಿದೆ. ಅಲ್ಲದೆ ಮೊದಲ ಪಂದ್ಯದಲ್ಲಿಯೇ ಸೋತು ಸುಣ್ಣವಾಗಿರುವ ಲಕ್ನೋ ಪಾಳಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸಿಎಸ್‌ಕೆಗೆ ಅಪಾಯಕಾರಿ ಆಟಗಾರನ ಎಂಟ್ರಿ!
ಈ ಆಟಗಾರನು ಪಿಚ್‌ಗೆ ಕಾಲಿಟ್ಟಾಗಲೆಲ್ಲ ಚೆನ್ನೈ(Chennai Super Kings) ಸೋಲುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿದೆ. ಮಾರಕ ಬೌಲಿಂಗ್ ಜೊತೆಗೆ ವೇಗದ ಶೈಲಿಯ ಬ್ಯಾಟಿಂಗ್‍ಗೂ ಈ ಆಟಗಾರ ಹೆಸರುವಾಸಿ. ಈ ಆಟಗಾರ ಬೇರೆ ಯಾರೂ ಅಲ್ಲ. ಚೆನ್ನೈ ತಂಡದ ಆಲ್‌ರೌಂಡರ್ ಮೊಯಿನ್ ಅಲಿ(Moeen Ali).
ವೀಸಾ ಸಮಸ್ಯೆಯಿಂದ ಭಾರತಕ್ಕೆ ತಡವಾಗಿ ಆಗಮಿಸಿದ ಮೊಹಿನ್ ಅಲಿ(Moeen Ali) ಇದೀಗ ತಮ್ಮ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. CSK ತಂಡವನ್ನು ಸೇರಿಕೊಂಡಿರುವ ಅವರು ಎದುರಾಳಿ ಕೆ.ಎಲ್.ರಾಹುಲ್ ಪಡೆಯಲ್ಲಿ ಭಯ ಹುಟ್ಟಿಸಿದ್ದಾರೆ. ವೀಸಾ ಸಮಸ್ಯೆಯಿಂದ ಈ ಆಟಗಾರ ಕೆಕೆಆರ್ ವಿರುದ್ಧದ ಮೊದಲ ಪಂದ್ಯ ಆಡಲಾಗಲಿಲ್ಲ. ಅವರ ಸ್ಥಾನವನ್ನು ಮಿಚೆಲ್ ಸ್ಯಾಂಟ್ನರ್ ತುಂಬಿದ್ದರು. ಆದರೆ ಇದೀಗ ಮೊಯಿನ್ ಆಗಮನದಿಂದ ಸಿಎಸ್‌ಕೆ ತಂಡದ ಮಧ್ಯಮ ಕ್ರಮಾಂಕ ಬಲಗೊಳ್ಳಲಿದ್ದು, ಬೌಲಿಂಗ್‌ನಲ್ಲೂ ಅವರು ಉತ್ತಮ ಕೊಡುಗೆ ನೀಡಬಲ್ಲರು.
ಇದನ್ನೂ ಓದಿ: Ravindra Jadeja : ಟೀಂ ಇಂಡಿಯಾದಲ್ಲಿ ಜಡೇಜಾ ಸ್ಥಾನ ಕಸಿದುಕೊಳ್ಳಲಿದ್ದಾನೆ ಈ ಸ್ಟಾರ್ ಆಲ್ ರೌಂಡರ್!
ಚೆನ್ನೈ ತಂಡದ ಬಲ ಮೊಯಿಲ್ ಅಲಿ
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ತಂಡಕ್ಕೆ ಮೊಯಿಲ್ ಅಲಿ(Moeen Ali) ದೊಡ್ಡ ಕೊಡುಗೆ ನೀಡಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಮಿಂಚುವ ಅಲಿ ಚೆನ್ನೈಗೆ ಅನೇಕ ಗೆಲುವು ತಂದುಕೊಟ್ಟಿದ್ದಾರೆ. ಮೊಯಿನ್ ಮಾರಕ ಬೌಲಿಂಗ್ ದಾಳಿಗೆ ಎದುರಾಳಿ ತಂಡದ ಬ್ಯಾಟ್ಸ್ ಮನ್‍ಗಳು ರನ್ ಗಳಿಸಲು ಪರದಾಡುತ್ತಾರೆ. ಹೀಗಾಗಿ ಚೆನ್ನೈ ತಂಡಕ್ಕೆ ಅವರು ದೊಡ್ಡ ಬಲವಾಗಿದ್ದಾರೆ.
ಇಂದಿನ ಪಂದ್ಯಕ್ಕೆ ಚೆನ್ನೈನ ಸಂಭಾವ್ಯ ಆಟಗಾರರು
ರವೀಂದ್ರ ಜಡೇಜಾ (ನಾಯಕ), ಎಂ.ಎಸ್.ಧೋನಿ(ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ, ಡ್ವೇನ್ ಬ್ರಾವೋ, ಆಡಮ್ ಮಿಲ್ನೆ, ತುಷಾರ್ ದೇಶಪಾಂಡೆ.
ಇದನ್ನೂ ಓದಿ: Ab de Villiers : ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.