IPL 2024: CSK ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್, ಆರಂಭಿಕ ಪಂದ್ಯಗಳಲ್ಲಿ ಈ ಪ್ರಮುಖ ವೇಗಿ ಆಡುವುದಿಲ್ಲ!
IPL 2024: CSK VS RCB ನಾಳೆಯಿಂದ ಇಂಡಿಯನ್ ಪ್ರಿಮಿಯರ್ ಲೀಗ್ 2024 ಆರಂಭಗೊಳ್ಳಲಿದೆ. ಐಪಿಎಲ್ 2024ರ ಮೊದಲ ಪಂದ್ಯದ ಸಂಭ್ರಮ ಭಾರತದ ಮೂಲೆ ಮೂಲೆಗೂ ಹಬ್ಬಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿಗೆ ಇಳಿಯಲಿದೆ. ಅಂಕಿಅಂಶಗಳು ಸಿಎಸ್ಕೆ ಪರವಾಗಿಯೇ ಇದ್ದರೂ(bad news for csk fans ), ಆರಂಭಿಕ ಪಂದ್ಯದಲ್ಲಿ ತಂಡಕ್ಕೆ ಒಂದರ ಮೇಲೊಂದರಂತೆ ಕಂಟಕಗಳು ಎದುರಾಗುತ್ತಿವೆ. (IPL 2024 News In Kannada)
IPL 2024: CSK VS RCB ನಾಳೆಯಿಂದ ಇಂಡಿಯನ್ ಪ್ರಿಮಿಯರ್ ಲೀಗ್ 2024 ಆರಂಭಗೊಳ್ಳಲಿದೆ. ಐಪಿಎಲ್ 2024ರ ಮೊದಲ ಪಂದ್ಯದ ಸಂಭ್ರಮ ಭಾರತದ ಮೂಲೆ ಮೂಲೆಗೂ ಹಬ್ಬಿದೆ(bad news for csk fans ). ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿಗೆ ಇಳಿಯಳಿದೆ. ಅಂಕಿಅಂಶಗಳು ಸಿಎಸ್ಕೆ ಪರವಾಗಿಯೇ ಇದ್ದರೂ ಆರಂಭಿಕ ಪಂದ್ಯದಲ್ಲಿ ತಂಡಕ್ಕೆ ಒಂದರ ಮೇಲೊಂದರಂತೆ ಕಂಟಕಗಳು ಎದುರಾಗುತ್ತಿವೆ. ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನಾ ಸಿಎಸ್‌ಕೆಯ ಬೌಲಿಂಗ ದಾಳಿಯ ಪ್ರಮುಖ ಕೊಂಡಿಯಾಗಿದ್ದರು. ಆದರೆ ಇದೀಗ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. (IPL 2024 News In Kannada)
ಹ್ಯಾಮ್ಸ್ಟ್ರಿಂಗ್ ಕಾರಣ ಹೊರಗುಳಿಯಲಿದ್ದಾರೆ
ಕಳೆದ ಐಪಿಎಲ್ ಋತುವಿನಲ್ಲಿ ಮತಿಶಾ ಪತಿರಾನ (matheesha pathirana out of team in few matches) ತಮ್ಮ ಬೌಲಿಂಗ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದರ ನಂತರ ಅವರ ಪ್ರದರ್ಶನವು ಸಾಕಷ್ಟು ಏರಿಳಿತಗಳಿಂದ ತುಂಬಿತ್ತು. ಪತಿರಾನ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ. ಇದೀಗ ಗಾಯ ಅವರ ಪಾಲಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿ ಪರಿಣಮಿಸಿದೆ. ಮಂಡಿನೋವು ಸಮಸ್ಯೆಯಿಂದಾಗಿ ಪತಿರಾನಾ ಐಪಿಎಲ್‌ನಿಂದ ಕೆಲವು ವಾರಗಳ ಕಾಲ ಹೊರಗುಳಿಯಲಿದ್ದಾರೆ. ಹೀಗಿರುವಾಗ ಮುಸ್ತಫಿಜುರ್ ರೆಹಮಾನ್‌ಗೆ ಡೆತ್ ಬೌಲರ್ ಹೆಡ್ಲೈನ್ ಗಿಟ್ಟಿರುವ ಅವಕಾಶ ದೊರೆತಂತಾಗಿದೆ.
ಡೆವೊನ್ ಕಾನ್ವೇ ಕೂಡ ಔಟ್ ಆಗಿದ್ದಾರೆ
ಸಿಎಸ್ ಕೆ ತಂಡದ ಡೆವೊನ್ ಕಾನ್ವೇ ಕೂಡ ತಂಡಕ್ಕೆ ಆಘಾತ ನೀಡಿದ್ದಾರೆ. ಹೆಬ್ಬೆರಳಿನ ಗಾಯದ ಕಾರಣ ಅವರು ಈಗಾಗಲೇ ಹೊರಗುಳಿದಿದ್ದಾರೆ. ಕಾನ್ವೇ ಕಳೆದ ಋತುವಿನಲ್ಲಿ CSK ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೀಗ ಅವರ ಸ್ಥಾನದಲ್ಲಿ ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್ ಅಥವಾ ರಚಿನ್ ರವೀಂದ್ರ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ-IPL 2024: CSK ಅಭಿಮಾನಿಗಳಿಗೆ ಬಿಗ್ ಶಾಕ್.. ಧೋನಿ ಕ್ಯಾಪ್ಟನ್ಸಿ ಅಂತ್ಯ.. ಈ ಯುವ ಆಟಗಾರನೇ ನಾಯಕ!!
ಮುಸ್ತಫಿಜುರ್ ತಂಡಕ್ಕೆ ಮರಳಿದ್ದಾರೆ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮುಸ್ತಫಿಜುರ್ ಕೂಡ ಸಿಎಸ್‌ಕೆ ಅಭಿಮಾನಿಗಳಿಗೆ ಶಾಕ್ ನೀಡಿದರು. ಸೆಳೆತದಿಂದಾಗಿ ಅವರು ಮೈದಾನದಿಂದ ಹೊರಕ್ಕೆ ಹೋಗಿದ್ದರು. ಆದರೆ, ಇದೀಗ ಸಿಎಸ್‌ಕೆಗೆ ಮತ್ತೆ ಮರಳಿದ್ದಾರೆ. ಹೀಗಾಗಿ ಮತಿಶಾ ಪತಿರಾನ ಅನುಪಸ್ಥಿತಿಯಲ್ಲಿ ಮುಸ್ತಫಿಜುರ್‌ಗೆ ಮಿಂಚುವ ಉತ್ತಮ ಅವಕಾಶ ಲಭಿಸಿದೆ. ಮಾರ್ಚ್ 22 ರಂದು ಚೆನ್ನೈನ ತವರು ಮೈದಾನದಲ್ಲಿ CSK ಮತ್ತು RCB ನಡುವೆ ಹಣಾಹಣಿ ನಡೆಯಲಿದೆ. ಚೆಪಾಕ್‌ನಲ್ಲಿ ಆರ್‌ಸಿಬಿ ತಂಡ 2008ರಲ್ಲಿ ಒಮ್ಮೆ ಮಾತ್ರ ಚೆನ್ನೈ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಇತಿಹಾಸವನ್ನು ಬದಲಿಸುವಲ್ಲಿ ಈ ಬಾರಿ ಆರ್‌ಸಿಬಿ ಯಶಸ್ವಿಯಾಗುತ್ತದೆಯೇ ಅಥವಾಇಲ್ಲವೇ ಎಂಬುದನ್ನು ಸಮಯವೇ ನಿರ್ಧರಿಸಲಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ