IPL 2024, RCB vs KKR: IPL 2024 ರ ಹೈವೋಲ್ಟೇಜ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30 ರಿಂದ ನಡೆಯಲಿದೆ. RCB ಈಗಾಗಲೇ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಸೀಸನ್’ನ ತನ್ನ ಮೊದಲ ಜಯವನ್ನು ದಾಖಲಿಸಿದೆ. ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಲು ಸತತ ಗೆಲುವು ದಾಖಲಿಸುವ ತವಕದಲ್ಲಿದೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆ KKR ಐಪಿಎಲ್ 2024 ರ ತನ್ನ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ಗೆದ್ದಿದೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಅಭಿಮಾನಿಗಳ ಕಣ್ಣು ವಿರಾಟ್ ಕೊಹ್ಲಿ ಹಾಗೂ ಆಂಡ್ರೆ ರಸೆಲ್ ಮೇಲಿದ್ದು, ಈ ಇಬ್ಬರೂ ಆಟಗಾರರು ತಮ್ಮ ತಂಡಗಳಿಗೆ ಎಕ್ಸ್ ಫ್ಯಾಕ್ಟರ್ ಆಗಿ ಆಟವಾಡೋದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ: Job Alert: ತಿಂಗಳಿಗೆ 1.43 ಲಕ್ಷ ಸಂಬಳ ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿರಿ


ಐಪಿಎಲ್‌’ನ 32 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಕೆಕೆಆರ್ ಮೇಲುಗೈ ಸಾಧಿಸಿದೆ. ಕೋಲ್ಕತ್ತಾ ತನ್ನ ಕೊನೆಯ ಐದು ಪಂದ್ಯಗಳಲ್ಲಿಯೂ ಸಹ RCB ವಿರುದ್ಧ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ದಾಖಲೆಯನ್ನು ಉಳಿಸಿಕೊಂಡಿದೆ.


ಆರ್‌ ಸಿ ಬಿ ವಿರುದ್ಧ ಕೆಕೆಆರ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. RCB vs KKR ನ ಲೈವ್ ಸ್ಟ್ರೀಮಿಂಗ್ JioCinema ನಲ್ಲಿ ಲಭ್ಯವಿರುತ್ತದೆ. ಈ ಪಂದ್ಯವು 7.30 PM ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಪಂದ್ಯದ ಅರ್ಧ ಗಂಟೆ ಮೊದಲು ಅಂದರೆ 7 ಗಂಟೆಗೆ ನಡೆಯುತ್ತದೆ.


ಚಿನ್ನಸ್ವಾಮಿಯಲ್ಲಿ ಬೌಂಡರಿ-ಸಿಕ್ಸರ್’ಗಳ ಸುರಿಮಳೆ:


ಪಂಜಾಬ್ ವಿರುದ್ಧದ 177 ರನ್‌’ಗಳ ಗುರಿಯನ್ನು ಬೆನ್ನಟ್ಟಿದ ಆರ್‌ ಸಿ ಬಿ ತಂಡವು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಅರ್ಧಶತಕದಿಂದ ಗೆಲುವಿನ ಹಾದಿ ಹಿಡಿದಿತ್ತು. ಅದಾದ ಬಳಿಕ ದಿನೇಶ್ ಕಾರ್ತಿಕ್ ಅನುಭವ ಮತ್ತು ಮಹಿಪಾಲ್ ಲೊಮ್ರೋರ್ ಪ್ರಭಾವದಿಂದ ಉಪಯುಕ್ತ ಇನ್ನಿಂಗ್ಸ್ ಆಡಿ, ಪಂಜಾಬ್ ವಿರುದ್ಧ ಕೊನೆಯ ಕ್ಷಣಗಳಲ್ಲಿ ಗೆಲುವು ಪಡೆಯುವಂತಾಯಿತು.


ಇದನ್ನೂ ಓದಿ:  Job Alert: ತಿಂಗಳಿಗೆ 1.43 ಲಕ್ಷ ಸಂಬಳ ನೀಡುವ ಈ ಕೆಲಸಕ್ಕೆ ಇಂದೇ ಅರ್ಜಿ ಸಲ್ಲಿಸಿರಿ


ಆರ್‌ ಸಿ ಬಿ ಪರ ವೇಗದ ಬೌಲರ್‌’ಗಳಾದ ಮೊಹಮ್ಮದ್ ಸಿರಾಜ್ ಮತ್ತು ಯಶ್ ದಯಾಲ್ ಪಂಜಾಬ್ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಆದರೆ ಉಳಿದ ಬೌಲರ್‌’ಗಳು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ವೇಗಿ ಅಲ್ಜಾರಿ ಜೋಸೆಫ್ ಮೊದಲ ಪಂದ್ಯದಲ್ಲಿ 38 ರನ್ ನೀಡಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಎರಡನೇ ಪಂದ್ಯದಲ್ಲಿ 43 ರನ್ ನೀಡಿ ಒಂದು ವಿಕೆಟ್ ಪಡೆದರು. ಹೀಗಿರುವಾಗ ಆರ್‌ಸಿಬಿ ಪಾಳಯವು ಇಂಗ್ಲೆಂಡ್‌’’ನ ಎಡಗೈ ವೇಗದ ಬೌಲರ್ ರೀಸ್ ಟೋಪ್ಲೆ ಅವರನ್ನು ಕಣಕ್ಕಿಳಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.