IPL 2025: CSK ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌, ಬಸ್‌ ಮತ್ತು ಮೆಟ್ರೋ ಪ್ರಯಾಣ ಎಲ್ಲಾ ಫ್ರೀ.. ಫ್ರೀ..

IPL 2025 CSK : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಸೀಸನ್‌ ನೋಡಲು ಕ್ರೀಡಾಭಿಮಾನಿಗಳಿಗೆ ಇನ್ನಷ್ಟು ಸುಲಭವಾಗಲಿ ಎನ್ನುವ ಉದ್ದೇಶದಿಂದ ಮೆಟ್ರೋ, ಬಸ್‌ ಸೇವೆಯನ್ನು ಉಚಿತಗೊಳಿಸಲಾಗಿದೆ. CSK ಪಂದ್ಯವಿರುವ ದಿನ ಮಾತ್ರ ಈ ಸೌಲಭ್ಯ ಪಡೆಯಬಹುದು. 

Written by - Krishna N K | Last Updated : Mar 16, 2025, 12:41 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ
    • CSK ಪಂದ್ಯವಿರುವ ದಿನ ಮಾತ್ರ ಈ ಸೌಲಭ್ಯ ಪಡೆಯಬಹುದು.
    • ಐಪಿಎಲ್ ವೀಕ್ಷಕರಿಗೆ ಪ್ರತ್ಯೇಕವಾಗಿ ವಿಶೇಷ ಪ್ರಯಾಣ ಸೌಲಭ್ಯ
IPL 2025: CSK ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌, ಬಸ್‌ ಮತ್ತು ಮೆಟ್ರೋ ಪ್ರಯಾಣ ಎಲ್ಲಾ ಫ್ರೀ.. ಫ್ರೀ..

CSK match schedule 2025 : ಐಪಿಎಲ್‌ 2025 ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಚಾಂಪಿಯನ್ಸ್‌ ಟ್ರೋಪಿ ನಂತರ ಇದೀಗ ಎಲ್ಲರ ಕಣ್ಣು IPL 2025 ಮ್ಯಾಚ್‌ ಮೇಲೆ ಬಿದ್ದಿದೆ. ಅದರಂತೆ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (ಸಿಎಂಆರ್ಎಲ್) ಮತ್ತು ಚೆನ್ನೈ ಮೆಟ್ರೋಪಾಲಿಟನ್ ಸಾರಿಗೆ ನಿಗಮ (ಎಂಟಿಸಿ) ಐಪಿಎಲ್ ವೀಕ್ಷಕರಿಗೆ ಪ್ರತ್ಯೇಕವಾಗಿ ವಿಶೇಷ ಪ್ರಯಾಣ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದೆ..

Add Zee News as a Preferred Source

ಚೆನ್ನೈ ಸೂಪರ್ ಕಿಂಗ್ಸ್ (CSK) ತವರು ಪಂದ್ಯಗಳಿಗೆ ಹಾಜರಾಗುವ ಅಭಿಮಾನಿಗಳಿಗೆ ಉಚಿತ ಮೆಟ್ರೋ ರೈಲು ಮತ್ತು ಬಸ್ ಸೇವೆಗಳು ಲಭ್ಯವಿರುತ್ತವೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಐಪಿಎಲ್ 2025 ರಲ್ಲಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳಿಗೆ ಟಿಕೆಟ್ ಹೊಂದಿರುವ ಪ್ರೇಕ್ಷಕರು ಮೆಟ್ರೋ ರೈಲು ಸೇವೆಗಳನ್ನು ಉಚಿತವಾಗಿ ಬಳಸಬಹುದು. ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ:Virat Kohli retirement: ಟೀಂ ಇಂಡಿಯಾ ಅಭಿಮಾನಿಗಳಿಗೆ ಬಿಗ್‌ ಶಾಕ್‌! ನಿವೃತ್ತಿಯ ಕುರಿತು ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ವಿರಾಟ್‌ ಕೊಹ್ಲಿ

ಈ ಸೌಲಭ್ಯ ಪಂದ್ಯದ ದಿನಗಳಲ್ಲಿ ಮಾತ್ರ ಲಭ್ಯವಿದೆ. ಪಂದ್ಯ ಮುಗಿದ ನಂತರ 90 ನಿಮಿಷಗಳ ಕಾಲ ಅಂದ್ರೆ, ಮಧ್ಯರಾತ್ರಿ 1 ಗಂಟೆಯವರೆಗೆ ಮೆಟ್ರೋ ರೈಲುಗಳು ಲಭ್ಯವಿರುತ್ತವೆ. ಪ್ರಯಾಣಿಕರ ಬೇಡಿಕೆಯನ್ನು ಅವಲಂಬಿಸಿ, ಕೆಲವು ಸಂದರ್ಭಗಳಲ್ಲಿ ಮೆಟ್ರೋ ರೈಲಿನ ಕೊನೆಯ ಸೇವಾ ಸಮಯವನ್ನು ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ..

ಮೆಟ್ರೋ ರೈಲು ಮಾತ್ರವಲ್ಲದೆ, ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆ (ಎಂಟಿಸಿ) ಐಪಿಎಲ್ ಅಭಿಮಾನಿಗಳಿಗೆ ವಿಶೇಷ ಬಸ್ ಸೌಲಭ್ಯಗಳನ್ನು ಒದಗಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ವಿಶ್ವನಾಥನ್ ಅವರ ಪ್ರಕಟಣೆಯ ಪ್ರಕಾರ, ಸಿಎಸ್‌ಕೆ ತವರು ಪಂದ್ಯಕ್ಕೆ ಹಾಜರಾಗುವ ಅಭಿಮಾನಿಗಳು ತಮ್ಮ ಕ್ರಿಕೆಟ್ ಪಂದ್ಯದ ಟಿಕೆಟ್ ತೋರಿಸುವ ಮೂಲಕ ಎಂಟಿಸಿ ನಾನ್-ಎಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಇದನ್ನೂ ಓದಿ: I Love You ಜಹೀರ್ ಎಂದಿದ್ದ ಯುವತಿ 20 ವರ್ಷದ ನಂತರ ಪ್ರತ್ಯಕ್ಷ..! ಶಾಕ್ ಆದ ಕ್ರಿಕೆಟರ್ ಜಹೀರ್ ಖಾನ್..! ವಿಡಿಯೋ ವೈರಲ್

ಪಂದ್ಯ ಆರಂಭವಾಗುವ ಮೂರು ಗಂಟೆಗಳ ಮೊದಲು ಈ ಉಚಿತ ಬಸ್ ಸೇವೆಗಳು ಲಭ್ಯವಿರುತ್ತವೆ. ಕಳೆದ ವರ್ಷ ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯಗಳಿಗೆ ಸುಮಾರು 8,000 ಜನರು ಎಂಟಿಸಿ ಬಸ್‌ಗಳ ಸೇವೆಗಳನ್ನು ಬಳಸಿದ್ದಾರೆ ಎಂದು ವಿಶ್ವನಾಥನ್ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News