Watch: ನಿಂದು ಎಷ್ಟಿದೆಯೋ ನೋಡ್ಕೋ ಎಂದು ಯುವ ಕ್ರಿಕೆಟಿಗನ ಮೇಲೆ ಇಶಾಂತ್‌ ಶರ್ಮಾ ಗರಂ!

Indian Premier League 2025: ಈ ಪಂದ್ಯದಲ್ಲಿ ದೆಹಲಿ ತಂಡವನ್ನ ಗುಜರಾತ್‌ 7 ವಿಕೆಟ್‌ಗಳಿಂದ ಮಣಿಸಿತ್ತು. ಆದರೆ ದೆಹಲಿ ಬ್ಯಾಟಿಂಗ್ ವೇಳೆ ಹಿರಿಯ ವೇಗಿ ಇಶಾಂತ್ ಶರ್ಮಾ ಮತ್ತು ಯುವ ಬ್ಯಾಟ್ಸ್‌ಮನ್‌ ಆಶುತೋಷ್ ಶರ್ಮಾ ನಡುವೆ ಜಗಳ ನಡೆದಿದೆ.

Written by - Puttaraj K Alur | Last Updated : Apr 20, 2025, 04:58 PM IST
  • ದೆಹಲಿ vs ಗುಜರಾತ್‌ ಪಂದ್ಯದಲ್ಲಿ ಯುವ ಕ್ರಿಕೆಟಿಗ vs ಹಿರಿಯ ಆಟಗಾರನ ನಡುವೆ ಫೈಟ್‌
  • ಮೈದಾನದಲ್ಲಿಯೇ ಅಶುತೋಷ್‌ ಶರ್ಮಾಗೆ ಝಾಡಿಸಿದ ಹಿರಿಯ ವೇಗಿ ಇಶಾಂತ್‌ ಶರ್ಮಾ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ಆಟಗಾರರ ಜಗಳದ ವಿಡಿಯೋ
Watch: ನಿಂದು ಎಷ್ಟಿದೆಯೋ ನೋಡ್ಕೋ ಎಂದು ಯುವ ಕ್ರಿಕೆಟಿಗನ ಮೇಲೆ ಇಶಾಂತ್‌ ಶರ್ಮಾ ಗರಂ!

IPL 2025, DC vs GT: ೧೮ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಟೈಟನ್ಸ್‌ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಯುವ ಕ್ರಿಕೆಟಿಗನ ಮೇಲೆ ಹಿರಿಯ ವೇಗಿ ಇಶಾಂತ್‌ ಶರ್ಮಾ ಗರಂ ಆಗಿರುವ ಘಟನೆ ನಡೆದಿದೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಯುವ ಕ್ರಿಕೆಟಿಗ ಅಶುತೋಷ್ ಶರ್ಮಾಗೆ ಇಶಾಂತ್‌ ಶರ್ಮಾ ಮೈದಾನದಲ್ಲಿಯೇ ಝಾಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಮ್ಯಾಚ್‌ ಫಿಕ್ಸಿಂಗ್‌ ಆರೋಪ.. ಟೀಂ ಇಂಡಿಯಾ ಮಾಜಿ ನಾಯಕನಿಗೆ ಆಘಾತ..! ಪ್ರಕರಣದಲ್ಲಿ ಸಿಕ್ಕಿಬಿದ್ದ ಆಟಗಾರನ ವಿರುದ್ಧ HCA ಕಠಿಣ ನಿರ್ಧಾರ

ಈ ಪಂದ್ಯದಲ್ಲಿ ದೆಹಲಿ ತಂಡವನ್ನ ಗುಜರಾತ್‌ 7 ವಿಕೆಟ್‌ಗಳಿಂದ ಮಣಿಸಿತ್ತು. ಆದರೆ ದೆಹಲಿ ಬ್ಯಾಟಿಂಗ್ ವೇಳೆ ಹಿರಿಯ ವೇಗಿ ಇಶಾಂತ್ ಶರ್ಮಾ ಮತ್ತು ಯುವ ಬ್ಯಾಟ್ಸ್‌ಮನ್‌ ಆಶುತೋಷ್ ಶರ್ಮಾ ನಡುವೆ ಜಗಳ ನಡೆದಿದೆ.

ಪಂದ್ಯದ 19ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಅಶುತೋಷ್‌ ವಿರುದ್ದ ಕ್ಯಾಚ್ ಔಟ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಂಪೈರ್ ಔಟ್‌ ನೀಡರಲಿಲ್ಲ. ಇದೇ ವೇಳೆ ಗುಜರಾತ್ ಬಳಿಯ ಎಲ್ಲಾ DRS ಕೋಟ ಮುಗಿದಿತ್ತು. ಹೀಗಾಗಿ ಇಶಾಂತ್ ಹತಾಶೆಯಿಂದ ಅಶುತೋಷ್ ಮೇಲೆ ಕೂಗಾಡಿದ್ದಾರೆ.

ಇದನ್ನೂ ಓದಿ: ಯಾರು ಈ ವೈಭವ್ ಸೂರ್ಯವಂಶಿ? ಚೊಚ್ಚಲ ಪಂದ್ಯದಲ್ಲಿ ಸಿಕ್ಸರ್‌ನೊಂದಿಗೆ ಸಂಚಲನ ಮೂಡಿಸಿದ 14 ರ ಬಾಲಕ..!

ಈ ವೇಳೆ ಅಶುತೋಷ್ ತಾಳ್ಮೆ ಕಳೆದುಕೊಳ್ಳದೇ ಹಿರಿಯ ಆಟಗಾರನಿಗೆ ಆ ಬಾಲ್ ನನ್ನ ಭುಜಕ್ಕೆ ತಗುಲಿತ್ತು ಅಂತಾ ತಿಳಿಸಲು ಪ್ರಯತ್ನಿಸಿದ್ದರು. ಆದರೆ ಇಶಾಂತ್ ಕೋಪದಿಂದ ʼನಿಂದು ಎಷ್ಟಿದೆಯೋ ಅಷ್ಟು ನೋಡ್ಕೋʼ ಅಂತಾ ಹೇಳಿ ತೆರಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News