IPL 2025: ಮುಂಬೈ ಇಂಡಿಯನ್ಸ್ (MI) ತಂಡವು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬೆನ್ನು ನೋವಿನಿಂದ ಬುಮ್ರಾ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಜನವರಿ 4ರಂದು ಸಿಡ್ನಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಗಾಯಗೊಂಡಿದ್ದರು. ಈಗ ಈ ವೇಗದ ಬೌಲರ್ ಏಪ್ರಿಲ್ ಆರಂಭದಲ್ಲಿ ಮುಂಬೈ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ತನ್ನ ಋತುವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (ಮಾರ್ಚ್ 23) ಆರಂಭಿಸಲಿದ್ದು, ನಂತರ ಗುಜರಾತ್ ಟೈಟಾನ್ಸ್ ವಿರುದ್ಧ (ಮಾರ್ಚ್ 29) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ (ಮಾರ್ಚ್ 31) ತನ್ನ ಮೊದಲ ತವರು ಪಂದ್ಯವನ್ನು ಆಡಲಿದೆ. ಬುಮ್ರಾ ನಿರ್ಗಮನದ ನಂತರ ಮುಂಬೈ ತಂಡದ ನಿರ್ವಹಣೆಗೆ ಇರುವ ದೊಡ್ಡ ಸವಾಲೆಂದರೆ, ಆಡುವ ಹನ್ನೊಂದರಲ್ಲಿ ಅವರ ಬದಲಿಗೆ ಯಾರನ್ನು ಸೇರಿಸಬೇಕೆಂದು ನಿರ್ಧರಿಸುವುದು. ವೇಗಿ ತಂಡಕ್ಕೆ ಮರಳುವವರೆಗೆ ವೇಗದ ಬೌಲಿಂಗ್ ಜವಾಬ್ದಾರಿ ಟ್ರೆಂಟ್ ಬೌಲ್ಟ್ ಮತ್ತು ದೀಪಕ್ ಚಹಾರ್ ಅವರ ಮೇಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಪಂದ್ಯಗಳಿಗೆ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರರಾಗಬಹುದಾದ 3 ಆಟಗಾರರ ಮಾಹಿತಿ ಇಲ್ಲಿದೆ ನೋಡಿ...
1) ಕಾರ್ಬಿನ್ ಬಾಷ್
ದೀಪಕ್ ಚಹಾರ್ ಮತ್ತು ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI ತಂಡದ ಭಾಗವಾಗಲಿದ್ದಾರೆ. ಈಗ ಮುಂಬೈ ಇಂಡಿಯನ್ಸ್ ತಂಡವು ಸಿಎಸ್‌ಕೆ ವಿರುದ್ಧ ಬುಮ್ರಾ ಬದಲಿಗೆ ಬೇರೊಬ್ಬರನ್ನು ಸೇರಿಸಿಕೊಳ್ಳಬೇಕಾಗಬಹುದು. ಆದರೆ ತಂಡದ ಬಳಿ ಹೆಚ್ಚಿನ ಆಯ್ಕೆಗಳಿಲ್ಲ. ಆದರೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾರ್ಬಿನ್ ಬಾಷ್ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು. ಈ ಆಫ್ರಿಕನ್ ವೇಗಿ ತನ್ನ ದೇಶದ ಪರ ಯಾವುದೇ ಟಿ-20 ಪಂದ್ಯಗಳನ್ನು ಆಡಿಲ್ಲ, ಆದರೆ ಅವರ ಟಿ-20 ಅಂಕಿಅಂಶಗಳು ಉತ್ತಮವಾಗಿವೆ. ಅವರು 86 ಟಿ-20 ಪಂದ್ಯಗಳಿಂದ 59 ವಿಕೆಟ್‌ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಅವರನ್ನು ಲಿಜಾರ್ಡ್ ವಿಲಿಯಮ್ಸ್ ಬದಲಿಗೆ ತಂಡಕ್ಕೆ ಸೇರಿಸಲಾಯಿತು. ಬಾಷ್ ವಿಕೆಟ್ ತೆಗೆದುಕೊಳ್ಳುವ ಬೌಲರ್ ಆದರೆ ಅವರಲ್ಲಿರುವ ಒಂದು ಸಮಸ್ಯೆ ಎಂದರೆ ಅವರು ಬಹಳಷ್ಟು ರನ್‌ಗಳನ್ನು ಬಿಟ್ಟುಕೊಡುತ್ತಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಕಾರ್ಬಿನ್ ಬಾಷ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು.
2) ಮುಜೀಬ್ ಉರ್ ರೆಹಮಾನ್
ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ತುಂಬಾ ಸಹಾಯಕವಾಗಿದೆ. ಒಂದು ವೇಳೆ ಬುಮ್ರಾ ಮೊದಲ ಪಂದ್ಯದಲ್ಲಿ ಆಡದಿದ್ದರೆ, ಮುಂಬೈ ಮ್ಯಾನೇಜ್‌ಮೆಂಟ್ ಸೂಪರ್ ಕಿಂಗ್ಸ್ ವಿರುದ್ಧದ ಆಡುವ XIನಲ್ಲಿ ಹೆಚ್ಚುವರಿ ಸ್ಪಿನ್ನರ್ ಸೇರಿಸಿಕೊಳ್ಳುವ ಬಗ್ಗೆ ಪರಿಗಣಿಸಬಹುದು. ಮುಜೀಬ್-ಉರ್-ರೆಹಮಾನ್ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದು, ಟೂರ್ನಿಯಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಚೆನ್ನೈ ಪಿಚ್‌ನಲ್ಲಿ ತಮ್ಮ ನಿಗೂಢ ಸ್ಪಿನ್‌ನಿಂದ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸುವ ಸಾಮರ್ಥ್ಯ ಅವರಿಗಿದೆ.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೆ ಚಹಾಲ್ ರಿವೆಂಜ್..! ಹೊಸ ಗರ್ಲ್‌ಫ್ರೆಂಡ್ ಲಿಪ್ ಕಿಸ್ ಕೊಟ್ಟ ಕ್ರಿಕೆಟಿಗ.. ವಿಡಿಯೋ ವೈರಲ್
3) ವೆಂಕಟ್ ಸತ್ಯನಾರಾಯಣ ಪೆನ್ಮೆತ್ಸ
ಆಂಧ್ರ ಪ್ರೀಮಿಯರ್ ಲೀಗ್‌ನಲ್ಲಿ 6.15ರ ಎಕಾನಮಿಯಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ ಬಲಗೈ ವೇಗಿ ವೆಂಕಟ್ ಅವರ ಅದ್ಭುತ ಪ್ರದರ್ಶನದ ನಂತರ ಅವರು ಬೆಳಕಿಗೆ ಬಂದರು. ಮುಂಬೈ ತಂಡವು ಹೊಸ ಆಟಗಾರರಿಗೆ ಅವಕಾಶಗಳನ್ನು ನೀಡುವ ಮೂಲಕ ಯಾವಾಗಲೂ ಅವರಲ್ಲಿ ವಿಶ್ವಾಸವನ್ನು ತೋರಿಸುತ್ತಾ ಬಂದಿರುವ ಫ್ರಾಂಚೈಸಿಯಾಗಿದೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಫ್ರಾಂಚೈಸಿ ಇದನ್ನೇ ಮಾಡಿದೆ. ಹಾರ್ದಿಕ್ ಪಾಂಡ್ಯ ಈ ಯುವಕನನ್ನು CSK ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಿದರೆ ಆಶ್ಚರ್ಯವೇನಿಲ್ಲ. ಈ ಬೌಲರ್ CSK ಬ್ಯಾಟ್ಸ್‌ಮನ್‌ಗಳ ವಿರುದ್ಧ ಅಪಾಯಕಾರಿಯಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5 ನಲ್ಲೂ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









