IPL 2025: KKRಗೆ ದೊಡ್ಡ ಆಘಾತ, ಈ ‌ಸ್ಟಾರ್ ಆಟಗಾರ ಟೂರ್ನಮೆಂಟ್‌ನಿಂದ ಔಟ್!!

Kolkata Knight Riders: ಐಪಿಎಲ್ 2025 ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಬೌಲರ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಈಗ ಒಬ್ಬ ವೇಗದ ಬೌಲರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

Written by - Puttaraj K Alur | Last Updated : Mar 17, 2025, 12:38 PM IST
  • ಐಪಿಎಲ್ 2025 ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹಿನ್ನಡೆ
  • ಗಾಯದ ಕಾರಣ ತಂಡದ ಸ್ಟಾರ್ ಬೌಲರ್ ಟೂರ್ನಿಯಿಂದ ಹೊರಗುಳಿದಿದ್ದಾರೆ
  • ಅವರ ಸ್ಥಾನದಲ್ಲಿ ಈಗ ಒಬ್ಬ ವೇಗದ ಬೌಲರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ
IPL 2025: KKRಗೆ ದೊಡ್ಡ ಆಘಾತ, ಈ ‌ಸ್ಟಾರ್ ಆಟಗಾರ ಟೂರ್ನಮೆಂಟ್‌ನಿಂದ ಔಟ್!!
ಐಪಿಎಲ್ 2025

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಭಾರೀ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ತಂಡದ ಸ್ಟಾರ್ ವೇಗದ ಬೌಲರ್ ಉಮ್ರಾನ್ ಮಲಿಕ್ ಗಾಯದ ಕಾರಣದಿಂದ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಉಮ್ರಾನ್ ತಂಡದಿಂದ ಹೊರನಡೆದಿರುವುದು ಕೆಕೆಆರ್‌ಗೆ ದೊಡ್ಡ ಹೊಡೆತವಾಗಲಿದೆ.

Add Zee News as a Preferred Source

ಏಕೆಂದರೆ ಈ ಆಟಗಾರ ತಮ್ಮ ವೇಗದ ಬೌಲಿಂಗ್‌ನಿಂದ ಎದುರಾಳಿ ತಂಡದ ಆಟಗಾರರಿಗೆ ಭಯ ಹುಟ್ಟಿಸಿದ್ದರು. ಇದೀಗ ಅವರು ಟೂರ್ನಿಯಿಂದ ಔಟ್‌ ಆಗಿರುವ ಕಾರಣ ಫ್ರಾಂಚೈಸಿ ತಕ್ಷಣವೇ ಬದಲಿ ಆಟಗಾರರನನ್ನು ಘೋಷಿಸಿದೆ. ಉಮ್ರಾನ್ ಸ್ಥಾನದಲ್ಲಿ ಮಧ್ಯಮ ವೇಗಿ ಚೇತನ್ ಸಕರಿಯಾ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಕೆಕೆಆರ್ 75 ಲಕ್ಷಕ್ಕೆ ಖರೀದಿಸಿತ್ತು.

ಇದನ್ನೂ ಓದಿ: ಡಿವೋರ್ಸ್‌ ಬೆನ್ನಲ್ಲೆ ಚಹಾಲ್‌ ರಿವೆಂಜ್‌..! ಹೊಸ ಗರ್ಲ್‌ಫ್ರೆಂಡ್‌ ಲಿಪ್‌ ಕಿಸ್‌ ಕೊಟ್ಟ ಕ್ರಿಕೆಟಿಗ.. ವಿಡಿಯೋ ವೈರಲ್

2024ರಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು

27 ವರ್ಷದ ಸಕರಿಯಾ ಅವರನ್ನು ಕಳೆದ ವರ್ಷ ಹಾಲಿ ಚಾಂಪಿಯನ್ ಕೆಕೆಆರ್ ಖರೀದಿಸಿತ್ತು, ಆದರೆ ಆ ಋತುವಿನಲ್ಲಿ ಅವರು ತಂಡಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. ಕಳೆದ ವರ್ಷದ ಕೊನೆಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅವರಿಗೆ ಯಾವುದೇ ಖರೀದಿದಾರರು ಸಿಗಲಿಲ್ಲ, ಆದರೆ ಈಗ ಅವರಿಗೆ ಬದಲಿ ಆಟಗಾರನಾಗಿ ಅವಕಾಶ ಸಿಕ್ಕಿದೆ. ಅವರನ್ನು 75 ಲಕ್ಷ ರೂ. ಬೆಲೆಗೆ ಖರೀದಿಸಲಾಗಿದೆ. ಚೇತನ್ ಸಕಾರಿಯಾಗೆ ಈ ಋತುವಿನಲ್ಲಿ ಅವಕಾಶ ಸಿಕ್ಕರೆ ಅವರು ಖಂಡಿತ ಉತ್ತಮ ಪ್ರದರ್ಶನ ನೀಡಲಿದ್ದಾರೆಂದು ಹೇಳಲಾಗುತ್ತಿದೆ. 

ಐಪಿಎಲ್‌ನಲ್ಲಿ ಚೇತನ್ ಸಕಾರಿಯಾ ಪ್ರದರ್ಶನ

ಸಕರಿಯಾ ಮೂರು ಋತುಗಳಲ್ಲಿ (2021-23) 19 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 8.43ರ ಎಕಾನಮಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2021ರಲ್ಲಿ ಅವರು ರಾಜಸ್ಥಾನ್ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ್ದರು. ನಂತರ ಅವರು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರು. ಟಿ-20 ಮಾದರಿಯಲ್ಲಿ ಅವರ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಅವರು 46 ಪಂದ್ಯಗಳಲ್ಲಿ 7.69ರ ಎಕಾನಮಿಯಲ್ಲಿ 65 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: IPL 2025: ಜಸ್ಪ್ರೀತ್ ಬುಮ್ರಾ ಔಟ್ ಆದ್ರೆ ಮುಂಬೈ ಇಂಡಿಯನ್ಸ್ ಈ 3 ಆಟಗಾರರಿಗೆ ಅವಕಾಶ ನೀಡಬಹುದು!

ಐಪಿಎಲ್ 2025ಕ್ಕೆ ಕೆಕೆಆರ್ ತಂಡ

ಅಜಿಂಕ್ಯ ರಹಾನೆ (ನಾಯಕ), ಸುನಿಲ್ ನರೈನ್, ರಿಂಕು ಸಿಂಗ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರಮಣದೀಪ್ ಸಿಂಗ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಎನ್ರಿಕ್ ನಾರ್ಕಿಯಾ, ಅಂಗ್ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಾಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲವ್ನೀತ್ ಸಿಸೋಡಿಯಾ, ಅನುಕುಲ್ ರಾಯ್, ಮೊಯಿನ್ ಅಲಿ, ಚೇತನ್ ಸಕರಿಯಾ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News