IPL 2025: ಐಪಿಎಲ್‌ ನಲ್ಲಿ ಹುಟ್ಟಿದ ಪ್ರೇಮ ಕಥೆಗಳು..!

ಐಪಿಎಲ್‌ನಲ್ಲಿ ಚೀರ್‌ಗರ್ಲ್ಸ್‌ರನ್ನು ಮದುವೆಯಾದ ಆಟಗಾರರ ಪಟ್ಟಿಯನ್ನು ನೋಡಿದಾಗ ಈ ಪಟ್ಟಿಯಲ್ಲಿ ಬರುವ ಮೊದಲ ಆಟಗಾರನೆಂದರೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್, ಈ ಜಮೈಕಾದ ಆಟಗಾರ ಐಪಿಎಲ್ ಸೀಸನ್‌ವೊಂದರಲ್ಲಿ ಚೀರ್‌ಲೀಡರ್ ಆಗಿದ್ದ ಜಸ್ಸಿಮ್ ಲೋರಾರನ್ನು ಭೇಟಿಯಾಗಿದರು

Written by - Manjunath Naragund | Last Updated : Mar 20, 2025, 06:54 PM IST
  • ಈ ಜಮೈಕಾದ ಆಟಗಾರ ಐಪಿಎಲ್ ಸೀಸನ್‌ವೊಂದರಲ್ಲಿ ಚೀರ್‌ಲೀಡರ್ ಆಗಿದ್ದ ಜಸ್ಸಿಮ್ ಲೋರಾರನ್ನು ಭೇಟಿಯಾಗಿದರು.
  • ಚೀರ್‌ಲೀಡರ್‌ಗಳು ಕೇವಲ ಪ್ರೇಕ್ಷಕರನ್ನು ಅಷ್ಟೇ ರಂಜಿಸುವುದಿಲ್ಲ,
  • ಕೆಲವೊಮ್ಮೆ ಆಟಗಾರರ ಹೃದಯವನ್ನೂ ಗೆಲ್ಲುತ್ತಾರೆ
IPL 2025: ಐಪಿಎಲ್‌ ನಲ್ಲಿ ಹುಟ್ಟಿದ ಪ್ರೇಮ ಕಥೆಗಳು..!

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತನ್ನ ರೋಚಕ ಕ್ರಿಕೆಟ್‌ಗೆ ಮಾತ್ರವಲ್ಲದೆ, ಮೈದಾನದ ಆಚೆಗಿನ ಕಥೆಗಳಿಗೂ ಜಗತ್ತಿನಾದ್ಯಂತ ಅಭಿಮಾನಿಗಳ ಗಮನ ಸೆಳೆಯುತ್ತದೆ.ಇದಕ್ಕೆ ಅಪರೂಪದ ನಿದರ್ಶನವೆಂದರೆ ಪ್ರಸಿದ್ಧ ಕ್ರಿಕೆಟಿಗರು ಚೀರ್‌ಲೀಡರ್‌ಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು.ಹಾಗಾಗಿ ಈಗ ನಾವು ಐಪಿಎಲ್‌ನಲ್ಲಿ ಚೀರ್‌ಗರ್ಲ್ಸ್‌ರನ್ನು ಮದುವೆಯಾದ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Add Zee News as a Preferred Source

ಐಪಿಎಲ್‌ನಲ್ಲಿ ಚೀರ್‌ಗರ್ಲ್ಸ್‌ರನ್ನು ಮದುವೆಯಾದ ಆಟಗಾರರ ಪಟ್ಟಿಯನ್ನು ನೋಡಿದಾಗ ಈ ಪಟ್ಟಿಯಲ್ಲಿ ಬರುವ ಮೊದಲ ಆಟಗಾರನೆಂದರೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಲ್‌ರೌಂಡರ್ ಆಂಡ್ರೆ ರಸೆಲ್, ಈ ಜಮೈಕಾದ ಆಟಗಾರ ಐಪಿಎಲ್ ಸೀಸನ್‌ವೊಂದರಲ್ಲಿ ಚೀರ್‌ಲೀಡರ್ ಆಗಿದ್ದ ಜಸ್ಸಿಮ್ ಲೋರಾರನ್ನು ಭೇಟಿಯಾಗಿದರು.ಆರಂಭದಲ್ಲಿ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ ತದನಂತರ ಇಬ್ಬರು 2016 ರಲ್ಲಿ ಮದುವೆಯಾದರು.ಈಗ ದಂಪತಿಗಳಿಗೆ ಆಲಿಯಾ ಎಂಬ ಮಗಳಿದ್ದಾಳೆ.

ಇದನ್ನೂ ಓದಿ: ನಿಮ್ಮ ಮುಖದ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಈ 3 ವಿಧಾನಗಳಲ್ಲಿ ಈ ಹಿಟ್ಟನು ಬಳಸಿ..!

ಇದೇ ರೀತಿ, ಐಪಿಎಲ್‌ನಲ್ಲಿ ಇತರ ಆಟಗಾರರ ಬಗ್ಗೆಯೂ ಗಾಸಿಪ್‌ಗಳು ಕೇಳಿಬಂದಿದ್ದವು. ಅದರಲ್ಲಿ ಪ್ರಮುಖವಾಗಿ ಕೇಳಿಬಂದದ್ದು ಶಿಖರ್ ಧವನ್ ಅವರ ಹೆಸರು, ದೆಹಲಿ ಕ್ಯಾಪಿಟಲ್ಸ್‌ನ ಆಟಗಾರನಾಗಿದ್ದಾಗ ಚೀರ್‌ಗರ್ಲ್‌ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ಧವನ್ ಅಂತಿಮವಾಗಿ ಐಶಾ ಮುಖರ್ಜಿಯನ್ನು (ಚೀರ್‌ಲೀಡರ್ ಅಲ್ಲ) ಮದುವೆಯಾಗಿ ಈ ವದಂತಿಗಳಿಗೆ ತೆರೆ ಎಳೆದರು. ಅದೇ ರೀತಿ ರಾಜಸ್ಥಾನ್ ರಾಯಲ್ಸ್‌ನ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಕ್ರೀಡಾ ನಿರೂಪಕಿಯಾಗಿದ್ದ ಲೀ ಫರ್ಲಾಂಗ್‌ರನ್ನು ಭೇಟಿಯಾದರು. ಮುಂದೆ ಈ ಭೇಟಿ ಅವರಿಬ್ಬರನ್ನು ದಾಂಪತ್ಯ ಜೀವನಕ್ಕೆ ಕಾಲಿರಿಸುವಂತೆ ಮಾಡಿತು.

ಇದನ್ನೂ ಓದಿ: ಇನ್ಮುಂದೆ ಮಧುಮೇಹದ ಚಿಂತೆ ಬಿಟ್ಟು ಬಿಡಿ..! ಪ್ರತಿ ದಿನ ಹೀಗೆ ಮಾಡಿದ್ರೆ ಯಾವ ಸಕ್ಕರೆ ಕಾಯಿಲೆಯೂ ಹತ್ತಿರ ಸುಳಿಯಲ್ಲ

2008 ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಗೆ ಮೊದಲ ಬಾರಿಗೆ ಚೀರ್ ಗರ್ಲ್ಸ್ ಗಳನ್ನು ಪರಿಚಯಿಸಿದಾಗ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.ಆದರೆ ಒಂದರ್ಥದಲ್ಲಿ ಇದು ಈ ಟೂರ್ನಿಗೆ ನಿಜಕ್ಕೂ ಗ್ಲಾಮರ್ ಕಳೆಯನ್ನು ತಂದಿದೆ. ಹಾಗಾಗಿ ಚೀರ್‌ಲೀಡರ್‌ಗಳು ಈಗ ಐಪಿಎಲ್ ಅನುಭವದ ಅವಿಭಾಜ್ಯ ಅಂಗವಾಗಿದ್ದಾರೆ. ಆ ಮೂಲಕ ಅವರು ಕೇವಲ ಪ್ರೇಕ್ಷಕರನ್ನಷ್ಟೇ ರಂಜಿಸದೆ ಆಟಗಾರರ ಹೃದಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದಕ್ಕೆ ಆಂಡ್ರೆ ರಸೆಲ್ ಮತ್ತು ಜಸ್ಸಿಮ್ ಲೋರಾ ಅವರ ನಿದರ್ಶನವೇ ಸಾಕ್ಷಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Trending News