ಕನ್ನಡಿಗ ಮನೀಶ್ ಪಾಂಡೆ ಅದ್ಭುತ ಆಟಗಾರ. ದೇಶೀಯ ಕ್ರಿಕೆಟ್ನ ಸರದಾರ ಎನಿಸಿಕೊಂಡಿರುವ ಈ ಆಟಗಾರ ಪ್ರಾರಂಭದಿಂದ ಪ್ರಸಕ್ತ ಐಪಿಎಲ್ ಟೂರ್ನಿವರೆಗೆ 18 ವರ್ಷವೂ ವಿವಿಧ ತಂಡಗಳ ಪರ ಆಡಿದ್ದಾರೆ. ಆದರೆ ಈ ಆಟಗಾರನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಹೇಳಿಕೊಳ್ಳುವಂತಹ ಅವಕಾಶಗಳು ಸಿಕ್ಕಿಲ್ಲ...

Manish pandey: ಕನ್ನಡಿಗ ಮನೀಶ್ ಪಾಂಡೆಯಂತಹ ನತದೃಷ್ಟ ಕ್ರಿಕೆಟಿಗ ಮತ್ತೊಬ್ಬನ್ನಿಲ್ಲ.. ಬ್ಯಾಟಿಂಗ್ನಲ್ಲಿ ಅವನು ವಿರಾಟ್ ಕೊಹ್ಲಿಯಷ್ಟೇ ಪ್ರತಿಭಾವಂತ.. ಕ್ಷೇತ್ರರಕ್ಷಣೆಯ ವಿಚಾರಕ್ಕೆ ಬಂದರೆ ರವೀಂದ್ರ ಜಡೇಜನಿಗೆ ಸರಿಸಾಟಿಯಾಗಿ ನಿಲ್ಲುವವನು. ಫಿಟ್ನೆಸ್ನಲ್ಲಿಯೂ ಇವರಿಬ್ಬರಿಗಿಂತಲೂ ಒಂದು ಹೆಜ್ಜೆ ಮುಂದೆ.. ಆತನಲ್ಲಿ ಆಟವಿತ್ತು, ಕೌಶಲ್ಯವಿತ್ತು.. ಆಟದ ಮೇಲೆ ಅಕ್ಕರೆಯೂ ಇತ್ತು. ಅದೃಷ್ಟವೊಂದು ಇರಲಿಲ್ಲ ಅಷ್ಟೇ... ಈತ ಭಾರತ ಪರ ಕನಿಷ್ಠ 10 ವರ್ಷ ಆಡಬೇಕಿದ್ದ ಕ್ರಿಕೆಟಿಗ..
ಆಟಕ್ಕೆ ನಿಂತರೆ ಅವನನ್ನು ತಡೆಯುವವರಿರಲಿಲ್ಲ. ರಣಜಿ ಸಾಮ್ರಾಟ ಮುಂಬೈ ವಿರುದ್ಧವಂತೂ ಮನೀಶ್ ಕದಳಿ ವನಕ್ಕೆ ನುಗ್ಗಿದ ಮದ್ದಾನೆ. ಮುಂಬೈಯನ್ನು ಹೊಡೆದದ್ದಷ್ಟೇ ಅಲ್ಲ, ಅಟ್ಟಾಡಿಸಿ ಹೊಡೆದವನು ನಮ್ಮ ಪಾಂಡೆ. ಆಟವಷ್ಟೇ ಮಾನದಂಡವಾಗಿದ್ದರೆ 2010ರಲ್ಲೇ ಮನೀಶ್ ಪಾಂಡೆ ಭಾರತ ತಂಡದ ಪರ ಆಡಬೇಕಿತ್ತು. ಕಾರಣ 2009-10ನೇ ಸಾಲಿನ ರಣಜಿ ಋತುವಿನಲ್ಲಿ ಪಾಂಡೆ ಒಂಬತ್ತೇ ಪಂದ್ಯಗಳಲ್ಲಿ 882 ರನ್ ಗಳಿಸಿದ್ದ. ಮೈಸೂರಿನಲ್ಲಿ ನಡೆದ ಫೈನಲ್ನಲ್ಲಂತೂ ಮನೀಶ್ ಬಾರಿಸಿದ ಶತಕವನ್ನು ಮರೆಯಲು ಸಾಧ್ಯವೇ ಇಲ್ಲ. ಅದಕ್ಕೂ ಮೊದಲು ಐಪಿಎಲ್ನಲ್ಲಿ ಶತಕ ಬಾರಿಸಿದ್ದ. ಆ ದಿನಗಳಲ್ಲಿ ಭಾರತ ಪರ ಆಡಲು ಎಲ್ಲಾ ರೀತಿಯಿಂದಲೂ ಅರ್ಹನಾಗಿದ್ದ ಹೊಸ ಆಟಗಾರರಲ್ಲಿ ಮನೀಶ್ ಪಾಂಡೆ ಮೊದಲಿಗ.. ಆದರೆ ಅದೃಷ್ಟ ಅವನ ಪರ ಇರಲಿಲ್ಲ..
ಅವಕಾಶ ನ್ಯಾಯವಾಗಿ ಸಿಗಬೇಕಾದಾಗ ಸಿಗಲಿಲ್ಲ. ಸಿಕ್ಕಾಗ ಹಸಿವು ಕಾಣಿಸಲಿಲ್ಲ. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ವೀರಾವೇಶದ ಶತಕ ಬಾರಿಸಿದ್ದವನು ಭಾರತ ತಂಡದಲ್ಲಿ ಮಿನುಗುವ ಮೊದಲೇ ಮರೆಯಾಗಿಬಿಟ್ಟ. ಹೌದು.. 15 ವರ್ಷಗಳ ಹಿಂದೆ ಮನೀಶ್ ಪಾಂಡೆಗೆ ಅನ್ಯಾಯವಾಗಿತ್ತು. ಅವನ ದುರದೃಷ್ಟ, ಇವತ್ತೂ ಅದೇ ಅನ್ಯಾಯ.. ಐಪಿಎಲ್ 18ನೇ ವರ್ಷಕ್ಕೆ ಕಾಲಿಟ್ಟಿದೆ. 2008ರಿಂದ 2025ರವರೆ ಅಷ್ಟೂ 18 ಟೂರ್ನಿಗಳಲ್ಲಿ ಆಡಿದವರು ನಾಲ್ಕೇ ನಾಲ್ಕು ಮಂದಿ. ಒಬ್ಬ ಎಂ.ಎಸ್.ಧೋನಿ, ಮತ್ತೊಬ್ಬ ವಿರಾಟ್ ಕೊಹ್ಲಿ, ಮಗದೊಬ್ಬ ರೋಹಿತ್ ಶರ್ಮಾ, ಇನ್ನೊಬ್ಬ ಮನೀಶ್ ಪಾಂಡೆ.
2008ರಲ್ಲಿ ಮುಂಬೈ ಇಂಡಿಯನ್ಸ್, 2009-2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2011-2013ರಲ್ಲಿ ಪುಣೆ ವಾರಿಯರ್ಸ್, 2014-2017ರಲ್ಲಿ ಕೋಲ್ಕತಾ ನೈಟ್ ರೈಡರ್ಸ್, 2018-2021ರಲ್ಲಿ ಸನ್ ರೈಸರ್ಸ್ ಹೈದರಾಬಾದ್, 2022ರಲ್ಲಿ ಲಕ್ನೋ ಸೂಪರ್ ಜೇಂಟ್ಸ್, 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು 2024-2025ರಲ್ಲಿ ಮತ್ತೆ ಕೋಲ್ಕತಾ ನೈಟ್ ರೈಡರ್ಸ್ ಪರ ಮನೀಶ್ ಆಡಿದ್ದಾರೆ.
2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟ್ರೋಫಿ ಗೆದ್ದು ಕೊಟ್ಟದ್ದು ಮನೀಶ್ ಪಾಂಡೆಯ ಆಟ. 2024ರಲ್ಲೂ ಕೆಕೆಆರ್ ಚಾಂಪಿಯನ್ ಆದಾಗ ಪಾಂಡೆ ಆ ತಂಡದಲ್ಲಿದ್ದ. 18 ವರ್ಷಗಳ ಐಪಿಎಲ್ ಪ್ರಯಾಣದಲ್ಲಿ ಅಷ್ಟೂ 18 ಟೂರ್ನಿಗಳಲ್ಲಿ ಆಡಿದ ಧೋನಿ, ಕೊಹ್ಲಿ ಮತ್ತು ರೋಹಿತ್ ಶರ್ಮಾನನ್ನು ಬಿಸಿಸಿಐ ಗೌರವಿಸಿದೆ. ಹಾಗಾದರೆ ಈ ದಿಗ್ಗಜರಿಗೆ ಕೊಟ್ಟ ಗೌರವ ಮನೀಶ್ ಪಾಂಡೆಗೇಕಿಲ್ಲ..? ಅವರಂತೆ ಇವನು ಸೂಪರ್ ಸ್ಟಾರ್ ಅಲ್ಲವೆಂಬ ಕಾರಣಕ್ಕಾ..? ಅಥವಾ low profile ಕ್ರಿಕೆಟರ್ ಎಂದಾ..?
ನೆನಪಿರಲಿ.. ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡದೇ ಇರಬಹುದು. ಆದರೆ ದೇಶೀಯ ಕ್ರಿಕೆಟ್ನಲ್ಲಿ ಆತ ದಿಗ್ಗಜ. ಐಪಿಎಲ್ನಲ್ಲೂ ದಿಗ್ಗಜ. 18 ವರ್ಷ ಐಪಿಎಲ್ ಆಡಿದ್ದಕ್ಕೆ ಆ ಮೂವರನ್ನು ಬಿಸಿಸಿಐ ಗೌರವಿಸುವುದಾದರೆ ಮನೀಶ್ ಪಾಂಡೆಗೂ ಅದೇ ಗೌರವ ಸಿಗಲೇಬೇಕು. ಸಿಗುವುದಿಲ್ಲ... ಆ ಗೌರವವನ್ನು ಕೊಡುವುದಿಲ್ಲ ಎಂದಾದರೆ ನಿಮ್ಮಂತಹ ಆಷಾಢಭೂತಿಗಳು ಯಾರೂ ಇರುವುದಿಲ್ಲ.
-ಸುದರ್ಶನ್ (ಇದು ಸುದರ್ಶನ್ ಅವರ ಫೇಸ್ಬುಕ್ ಖಾತೆಯಲ್ಲಿ ಪ್ರಕಟವಾದ ಲೇಖನ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.