IPL 2025: ಪಂಜಾಬ್‌ ವಿರುದ್ಧ ಹೀನಾಯ ಸೋಲುಂಡ ಆರ್‌ಸಿಬಿ... ಈಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?

IPL 2025 Points Table: ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೋಲುಂಡ ಬಳಿಕ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನ ತಲುಪಿದೆ.

Written by - Bhavishya Shetty | Last Updated : Apr 19, 2025, 01:46 PM IST
    • ಐಪಿಎಲ್ 2025ರ ಪಾಯಿಂಟ್ಸ್‌ ಟೇಬಲ್‌ ಹೇಗಿದೆ?
    • ಆರ್‌ಸಿಬಿ ನಾಲ್ಕನೇ ಸ್ಥಾನ ತಲುಪಿದರೆ, ಗುಜರಾತ್ ತಂಡ ಮೂರನೇ ಸ್ಥಾನ ಗಳಿಸಿದೆ
    • ರಾಜಸ್ಥಾನ ಮತ್ತು ಲಕ್ನೋ ನಡುವೆ ಪಂದ್ಯ ನಡೆಯಲಿದೆ
IPL 2025: ಪಂಜಾಬ್‌ ವಿರುದ್ಧ ಹೀನಾಯ ಸೋಲುಂಡ ಆರ್‌ಸಿಬಿ... ಈಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?
IPL 2025 Points Table

IPL 2025 Points Table: ಐಪಿಎಲ್ 2025 ರ ಪ್ಲೇಆಫ್ ರೇಸ್ ಆಸಕ್ತಿದಾಯಕವಾಗುತ್ತಿರುವಂತೆ ಕಾಣುತ್ತಿದೆ. ಏಪ್ರಿಲ್ 18 ರ ರಾತ್ರಿ ಪಂಜಾಬ್ ಕಿಂಗ್ಸ್ ತಂಡವು ಆರ್‌ಸಿಬಿಯನ್ನು ತವರಿನಲ್ಲಿ ರೋಮಾಂಚಕ ರೀತಿಯಲ್ಲಿ ಸೋಲಿಸಿತು. ಈ 5 ವಿಕೆಟ್‌ಗಳ ಗೆಲುವು ಶ್ರೇಯಸ್ ಅಯ್ಯರ್ ಮತ್ತು ತಂಡಕ್ಕೆ ದೊಡ್ಡ ಜಿಗಿತವನ್ನು ನೀಡಿದೆ. ಆದರೆ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ಉಸಿರು ಬಿಗಿಹಿಡಿದು ಕುಳಿತಿದ್ದು, ಡೆಲ್ಲಿ ತಂಡ ಸ್ವಲ್ಪದರಲ್ಲೇ ಹಿನ್ನಡೆಯಿಂದ ಪಾರಾಗಿದೆ.

Add Zee News as a Preferred Source

ಇದನ್ನೂ ಓದಿ: ಕಿರುತೆರೆಯ ಈ ಫೇಮಸ್‌ ಜೋಡಿ ತೆರೆಯ ಮೇಲೆ ತಾಯಿ ಮಗ, ಆದರೆ ನಿಜ ಜೀವನದಲ್ಲಿ ಗಂಡ ಹೆಂಡತಿ!

ಚಿನ್ನಸ್ವಾಮಿ ಮೈದಾನದಲ್ಲಿ ಮಳೆ ಬಂದ ಕಾರಣ ಪಂಜಾಬ್ ಮತ್ತು ಆರ್‌ಸಿಬಿ ನಡುವಿನ ಪಂದ್ಯ 14 ಓವರ್‌ಗಳದ್ದಾಗಿತ್ತು. ಪಂಜಾಬ್ ಇಲ್ಲಿಯೂ ತನ್ನ ಬಲಿಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು, 5 ವಿಕೆಟ್‌ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಿಂದ ನೇರವಾಗಿ ಎರಡನೇ ಸ್ಥಾನಕ್ಕೆ ಏರಿದೆ. ಪಂಜಾಬ್ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, 10 ಅಂಕಗಳನ್ನು ಗಳಿಸಿದೆ. ಈ ಗೆಲುವು ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್‌ಗೆ ಸೋಲಿಗೆ ಕಾರಣವಾಗಿದೆ. ಆರ್‌ಸಿಬಿ ನಾಲ್ಕನೇ ಸ್ಥಾನ ತಲುಪಿದರೆ, ಗುಜರಾತ್ ತಂಡ ಮೂರನೇ ಸ್ಥಾನ ಗಳಿಸಿದೆ.

ಪಂಜಾಬ್ ತಂಡದ ಗೆಲುವಿನಿಂದಾಗಿ ದೆಹಲಿ ತಂಡ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ದೆಹಲಿ ಮತ್ತು ಪಂಜಾಬ್ ಎರಡೂ ತಂಡಗಳು ತಲಾ 10 ಅಂಕಗಳನ್ನು ಹೊಂದಿವೆ ಆದರೆ ಉತ್ತಮ ರನ್ ರೇಟ್‌ನಿಂದಾಗಿ ದೆಹಲಿ ತಂಡವು ಅಗ್ರಸ್ಥಾನದಲ್ಲಿದೆ. ಡೆಲ್ಲಿ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. ಈಗ ತಂಡವು ಅಗ್ರ ಸ್ಥಾನದಲ್ಲಿ ಉಳಿಯಲು ಮುಂದಿನ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕಾಗಿದೆ. ದೆಹಲಿಯ ಮುಂದಿನ ಪಂದ್ಯ ಶನಿವಾರ ಗುಜರಾತ್ ವಿರುದ್ಧ ನಡೆಯಲಿದೆ.

ಇದನ್ನೂ ಓದಿ: ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ? ವಿಶ್ವಸಂಸ್ಥೆ ಸುಧಾರಣೆಯಲ್ಲಿ ಮಹತ್ವದ ಬೆಳವಣಿಗೆ

ದೆಹಲಿ vs ಗುಜರಾತ್ ಪಂದ್ಯದ ಜೊತೆಗೆ, ಶನಿವಾರ ರಾಜಸ್ಥಾನ ಮತ್ತು ಲಕ್ನೋ ನಡುವೆ ಪಂದ್ಯವೂ ನಡೆಯಲಿದೆ. ಭಾನುವಾರ ಮತ್ತೊಮ್ಮೆ ಪಂಜಾಬ್ ಮತ್ತು ಆರ್‌ಸಿಬಿ ನಡುವೆ ಹಣಾಹಣಿ ನಡೆಯಲಿದೆ. ಅದೇ ಸಮಯದಲ್ಲಿ, ಭಾನುವಾರ ಸಂಜೆ ಮುಂಬೈ ಮತ್ತು ಸಿಎಸ್‌ಕೆ ನಡುವೆ ಭರ್ಜರಿ ಹೋರಾಟ ನಡೆಯಲಿದೆ. ಹೀಗಿರುವಾಗ ವಾರಾಂತ್ಯದ ನಂತರ ಐಪಿಎಲ್ ಪಾಯಿಂಟ್ ಟೇಬಲ್‌ ಸ್ಥಿತಿ ಏನಾಗಲಿದೆ ಎಂದು ಕಾದುನೋಡಬೇಕಿದೆ.

 

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News