Indian Premier League 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ 2025ರ ಋತುವಿನ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ನಿಧಾನಗತಿಯ ಓವರ್ ರೇಟ್‌ಗೆ ನಿಷೇಧ ಹೇರುವ ಬದಲು ತಂಡದ ನಾಯಕರಿಗೆ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಂತೆ ಈ ಲೀಗ್‌ನಲ್ಲೂ ಡಿಮೆರಿಟ್ ಪಾಯಿಂಟ್ ವ್ಯವಸ್ಥೆ ಜಾರಿಗೆ ತರಲು ಬಿಸಿಸಿಐ ನಿರ್ಧರಿಸಿದೆ. ಇದರ ಅತ್ಯಂತ ವಿಶಿಷ್ಟವಾದ ವಿಷಯವೆಂದರೆ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯು ನಾಯಕರಿಗೆ ಮತ್ತು ನಿಧಾನಗತಿಯ ಓವರ್ ರೇಟ್ ಪ್ರಕರಣಗಳಿಗೆ ಮಾತ್ರ ಅನ್ವಯಿಸುವುದಿಲ್ಲ, ಜೊತೆಗೆ ಇದನ್ನು ಇಡೀ ನೀತಿ ಸಂಹಿತೆಯಲ್ಲಿ ಸೇರಿಸಲಾಗಿದೆ. ಇದರ ಅಡಿಯಲ್ಲಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ: RCB vs KKR: ಕೋಲ್ಕತಾ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿಯ ಸಂಭಾವ್ಯ ಪ್ಲೇಯಿಂಗ್ 11, ಮುಖಾಮುಖಿ ದಾಖಲೆ ಹೇಗಿದೆ ನೋಡಿ!
ಡಿಮೆರಿಟ್ ಅಂಕ ಪಡೆಯುವುದು ಹೀಗೆ!
ವರದಿಯ ಪ್ರಕಾರ, ಈಗ ಯಾವುದೇ ಆಟಗಾರ ಅಥವಾ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿರುವಂತೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗುವುದು. ಅದು ಆ ಆಟಗಾರ ಅಥವಾ ತಂಡದ ಖಾತೆಯಲ್ಲಿ ನಿಖರವಾಗಿ 36 ತಿಂಗಳುಗಳು ಅಂದರೆ 3 ವರ್ಷಗಳವರೆಗೆ ಇರುತ್ತದೆ. ಈ ಡಿಮೆರಿಟ್ ಅಂಕಗಳ ಆಧಾರದ ಮೇಲೆ ಆಟಗಾರರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆಟಗಾರನು ಲೆವೆಲ್-1 ಅನ್ನು ಉಲ್ಲಂಘಿಸಿದರೆ, ಆತನಿಗೆ ಪಂದ್ಯ ಶುಲ್ಕದ ಶೇ.25ರಷ್ಟು ಮತ್ತು 1 ಡಿಮೆರಿಟ್ ಅಂಕವನ್ನು ದಂಡ ವಿಧಿಸಬಹುದು. ಲೆವೆಲ್-2 ನಿಯಮಗಳನ್ನು ಉಲ್ಲಂಘಿಸುವವರಿಗೆ 4 ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಲೆವೆಲ್-3 ಉಲ್ಲಂಘನೆಗೆ ಆಟಗಾರರಿಗೆ 5-6 ಡಿಮೆರಿಟ್ ಅಂಕಗಳನ್ನು ಮತ್ತು ಲೆವೆಲ್-4 ಉಲ್ಲಂಘನೆಗೆ 7-8 ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ.
ಹಲವು ಪಂದ್ಯಗಳಿಗೆ ಆಟಗಾರರಿಗೆ ನಿಷೇಧ!
ಇಲ್ಲಿಯವರೆಗೆ ನಾವು ಆಟಗಾರರು ಡಿಮೆರಿಟ್ ಅಂಕಗಳನ್ನು ಹೇಗೆ ಪಡೆಯುತ್ತಾರೆ ಎಂದು ತಿಳಿದುಕೊಂಡಿದ್ದೇವೆ. ಈಗ ಎಷ್ಟು ಡಿಮೆರಿಟ್ ಪಾಯಿಂಟ್‌ಗಳಿಗೆ ಎಷ್ಟು ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಯೋಣ. ನೀತಿ ಸಂಹಿತೆಯ ಆರ್ಟಿಕಲ್ 7.6ರ ಪ್ರಕಾರ, 4 ರಿಂದ 7 ಡಿಮೆರಿಟ್ ಅಂಕಗಳು ಆಟಗಾರನ ಮೇಲೆ ಒಂದು ಪಂದ್ಯದ ನಿಷೇಧಕ್ಕೆ ಕಾರಣವಾಗುತ್ತವೆ. 8-11 ಅಂಕಗಳನ್ನು ಸೇರಿಸಿದರೆ ಎರಡು ಪಂದ್ಯಗಳ ನಿಷೇಧ ಹೇರಲಾಗುತ್ತದೆ. ಒಬ್ಬ ಆಟಗಾರನ ಖಾತೆಯಲ್ಲಿ 3 ವರ್ಷಗಳ ಒಳಗೆ 12-15 ಡಿಮೆರಿಟ್ ಪಾಯಿಂಟ್‌ಗಳಿದ್ದರೆ, ಅವರನ್ನು 3 ಪಂದ್ಯಗಳಿಗೆ ನಿಷೇಧಿಸಬಹುದು. ಯಾವುದೇ ಆಟಗಾರನು ತನ್ನ ಖಾತೆಯಲ್ಲಿ 16 ಡಿಮೆರಿಟ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಅವರನ್ನ 5 ಪಂದ್ಯಗಳಿಗೆ ನಿಷೇಧಿಸಬಹುದು.
ಇದನ್ನೂ ಓದಿ: ಕೆಕೆಆರ್ vs ಆರ್‌ಸಿಬಿ ನಡುವಿನ ಉದ್ಘಾಟನಾ ಪಂದ್ಯ ರದ್ದಾಗುವ ಸಾಧ್ಯತೆ! ಕಾರಣ ಇದು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









