RCB Victory Parade: ಬರೋಬ್ಬರಿ 18ವರ್ಷಗಳ ಬಳಿಕ ಐಪಿಎಲ್ ಪಂದ್ಯದಲ್ಲಿ ಕಪ್ ತನ್ನದಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 'ಈ ಸಲ ಕಪ್ ನಮ್ದು' ಎನ್ನುತ್ತಾ ಅಭಿಮಾನಿಗಳೊಂದಿಗೆ ವಿಜಯೋತ್ಸವಕ್ಕೆ ಸಜ್ಜಾಗಿದೆ.

RCB Victory Parade In Bengaluru: ಜೂನ್ 3, ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಆರು ರನ್ಗಳಿಂದ ಸೋಲಿಸಿ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕೋಟ್ಯಾಂತರ ಅಭಿಮಾನಿಗಳ 18ವರ್ಷಗಳ ಕನಸನ್ನು ನನಸಾಗಿಸಿದೆ. ಇದೀಗ 'ಈ ಸಲ ಕಪ್ ನಮ್ದು' ಎನ್ನುತ್ತಾ ಆರ್ಸಿಬಿ ವಿಕ್ಟರಿ ಪರೇಡ್ ಗೆ ಸಜ್ಜಾಗಿದ್ದು ಈ ಬಗ್ಗೆ ಇಲ್ಲಿದೆ ಮಾಹಿತಿ.
ಹೌದು, ಸತತ 17ವರ್ಷಗಳಿಂದ ಒಂದು ಬಾರಿಯೂ ಐಪಿಎಲ್ ಕಪ್ ಗೆಲ್ಲದಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಬಗ್ಗೆ ಅಪಾರ ಪ್ರೀತಿ, ಗೌರವವನ್ನು ಹೊಂದಿದ್ದ ತಮ್ಮ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ತಮ್ಮ ವೈಭವವನ್ನು ಆಚರಿಸಲು, ಫ್ರಾಂಚೈಸಿ ವಿಜಯೋತ್ಸವದ ಮೆರವಣಿಗೆಯನ್ನು (ಆರ್ಸಿಬಿ ವಿಕ್ಟರಿ ಪರೇಡ್) ಘೋಷಿಸಿದೆ.
ಆರ್ಸಿಬಿ ವಿಕ್ಟರಿ ಪರೇಡ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಜಯೋತ್ಸವದ ಮೆರವಣಿಗೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜುಗೊಂಡಿದ್ದು, ಜೂನ್ 4 ರಂದು ಮಧ್ಯಾಹ್ನ 3:30 ಕ್ಕೆ (IST) ಮೆರವಣಿಗೆ ಆರಂಭವಾಗಲಿದ್ದು, ವಿಧಾನಸೌಧದಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ 'ಆರ್ಸಿಬಿ ವಿಕ್ಟರಿ ಪರೇಡ್' ನಡೆಯಲಿದೆ.
ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವ ಪರೇಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, "ಇದು ನಿಮಗಾಗಿ, 12ನೇ ಮ್ಯಾನ್ ಆರ್ಮಿ. ಪ್ರತಿ ಹರ್ಷೋದ್ಗಾರ, ಪ್ರತಿ ಕಣ್ಣೀರು, ಪ್ರತಿ ವರ್ಷ. ನಿಷ್ಠೆಯೇ ರಾಯಲ್ಟಿ ಮತ್ತು ಇಂದು ಕಿರೀಟ ನಿಮ್ಮದು," ಎಂದು ಶೀರ್ಷಿಕೆಯಲ್ಲಿ ಬರೆದಿದೆ.
? RCB Victory Parade in Bengaluru ‼️
This one’s for you, 12th Man Army.
For every cheer, every tear, every year.
??????? ?? ??????? ??? ?????, ??? ????? ?? ?????.?More details soon… pic.twitter.com/fMWuCGkVWX
— Royal Challengers Bengaluru (@RCBTweets) June 4, 2025
ಆರ್ಸಿಬಿ ವಿಕ್ಟರಿ ಪರೇಡ್ ಅನ್ನು ಎಲ್ಲಿ ಯಾವಾಗ ವೀಕ್ಷಿಸಬಹುದು:
ಆರ್ಸಿಬಿಯ ವಿಜಯೋತ್ಸವ ಬೆಂಗಳೂರಿನಲ್ಲಿ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಈ ಶುಭ ಗಳಿಗೆಯನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗದವರು ' ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಟಿವಿಯಲ್ಲಿ' ವೀಸ್ಖಿಸಬಹುದು. ಇದಲ್ಲದೆ, ಜಿಯೋಹಾಟ್ಸ್ಟಾರ್ನಲ್ಲಿ ವಿಜಯೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.