IPL 2026 : ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಭಾರಿ ಮೊತ್ತಕ್ಕೆ ಸೇಲ್‌ ಆದ ಆಲ್‌ ರೌಂಡರ್‌ ಶಾರ್ದೂಲ್ ಠಾಕೂರ್..! ಎಷ್ಟು ಕೋಟಿಗೆ ಗೊತ್ತಾ?

2026ರ IPL ಆಡಳಿತ ಮಂಡಳಿಯು ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಸೀಸನ್‌ ಹರಾಜಿಗೂ ಮುನ್ನವೇ MI ತಂಡ ಇವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.  

Written by - Zee Kannada News Desk | Last Updated : Nov 13, 2025, 06:44 PM IST
  • ಐಪಿಎಲ್ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಎಸ್‌ಜಿಯಿಂದ ಮುಂಬೈಗೆ 2 ಕೋಟಿ ರೂಪಾಯಿಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.
  • MI ತಂಡ ಇವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.
IPL 2026 : ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಭಾರಿ ಮೊತ್ತಕ್ಕೆ ಸೇಲ್‌ ಆದ ಆಲ್‌ ರೌಂಡರ್‌ ಶಾರ್ದೂಲ್ ಠಾಕೂರ್..! ಎಷ್ಟು ಕೋಟಿಗೆ ಗೊತ್ತಾ?

IPL 2026 : ಐಪಿಎಲ್‌ ಆಡಳಿತ ಮಂಡಳಿಯು ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದೆ. ಈ ಸೀಸನ್‌ ಹರಾಜಿಗೂ ಮುನ್ನವೇ MI ತಂಡ ಇವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.

Add Zee News as a Preferred Source

ಐಪಿಎಲ್ ಆಡಳಿತ ಮಂಡಳಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಶಾರ್ದೂಲ್ ಠಾಕೂರ್ ಅವರನ್ನು ಎಲ್‌ಎಸ್‌ಜಿಯಿಂದ ಮುಂಬೈಗೆ 2 ಕೋಟಿ ರೂಪಾಯಿಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸ್ಟಾರ್‌ ಸೆಲೆಬ್ರಿಟಿಯೊಂದಿಗೆ ಕಾವ್ಯಾ ಮಾರನ್‌ ಡೇಟಿಂಗ್‌! ಸೀಕ್ರೆಟ್‌ ಜೋಡಿ ನೋಡಿ ಬೆರಗಾದ ನೆಟಿಜನ್ಸ್‌..

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಎರಡೂ ಫ್ರಾಂಚೈಸಿಗಳ ನಡುವಿನ ಒಪ್ಪಂದದ ನಂತರ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಮುಂಬೈ ಮೂಲದ ಆಲ್‌ರೌಂಡರ್ ಅವರನ್ನು 18 ನೇ ಆವೃತ್ತಿಯ ಲೀಗ್‌ಗೆ ಗಾಯದ ಬದಲಿಯಾಗಿ ಲಕ್ನೋ ಸೂಪರ್ ಜೈಂಟ್ಸ್ 2 ಕೋಟಿ ರೂಪಾಯಿಗೆ ಖರೀದಿಸಿತು, ಆ ಲೀಗ್‌ನಲ್ಲಿ ಅವರು 10 ಪಂದ್ಯಗಳಲ್ಲಿ ಆಡಿದ್ದರು.

ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಸಲು ಒಳ ಸಂಚು.. ಪಿಚ್‌ ಪರಿಸ್ಥಿತಿಗೆ ಆಕ್ರೋಶ ಹೊರಹಾಕಿದ ಶುಭ್ಮನ್‌ ಗಿಲ್‌- ಗೌತಮ್‌ ಗಂಭೀರ್‌

ಕಳೆದ ಸೀಸನ್‌ಗಳಿಂದ ಉತ್ತಮ ಪ್ರದರ್ಶನದೊಂದಿಗೆ ಒಳ್ಳೆಯ ಫಾರ್ಮಿಗ್‌ನಲ್ಲಿರುವ ಆಲ್‌ ರೌಂಡರ್‌ ಶಾರ್ದೂಲ್ ಅವರು LSG ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಈಗ ಎರಡು ಪ್ರಾಂಚೈಸಿಗಳ ನಡುವೆ ನಡೆದಿರುವ ಒಪ್ಪಂದದಿಂದ ಈ ಸೀಸನ್‌ ಮುಂಬೈ ಮೂಲದವರಾಗಿರುವ ಅವರು MI ತಂಡದಲ್ಲೇ ಆಡಲಿದ್ದಾರೆ ಎಂಬುವುದು ವಿಶೇಷ. ಅವರ ಉತ್ತಮ ಆಟದ ಶೈಲಿಯೇ ಅವರನ್ನು ಇಷ್ಟು ದೊಡ್ಡ ಮಟ್ಟದ ಹಣಕ್ಕೆ ಮುಂಬೈ ಇಂಡಿಯನ್ಸ್‌ ಖರೀದಿಸಲು ಕಾರಣವಾಗಿದೆ.
 

Trending News