)
IPL Stars Face Serious Allegations: ಐಪಿಎಲ್ 2026ರ ಆಟಗಾರರನ್ನು ಉಳಿಸಿಕೊಳ್ಳುವ ಗಡುವು ನವೆಂಬರ್ 15ಕ್ಕೆ ಸಮೀಪಿಸುತ್ತಿರುವಾಗ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ದೊಡ್ಡ ಸಂಕಷ್ಟ ಎದುರಿಸುತ್ತಿವೆ. ಇದಕ್ಕೆ ಕಾರಣ—ವಿಪ್ರಜ್ ನಿಗಮ್ ಮತ್ತು ಯಶ್ ದಯಾಳ್ ಮೇಲಿರುವ ಅತ್ಯಾಚಾರ ಆರೋಪಗಳು. ಈ ಆರೋಪಗಳು ವೈರಲ್ ಆದ ನಂತರ, ಇವರ ಭವಿಷ್ಯ ಐಪಿಎಲ್ನಲ್ಲಿ ಹೇಗಿರುತ್ತದೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ಆಲ್ರೌಂಡರ್ ವಿಪ್ರಜ್ ನಿಗಮ್ ಮೇಲೆ ಇತ್ತೀಚೆಗೆ ಮಹಿಳಾ ಕ್ರಿಕೆಟಿಗರೊಬ್ಬರು ಅತ್ಯಾಚಾರ ಮತ್ತು ದಾಳಿ ಮಾಡಿರುವುದಾಗಿ ಆರೋಪಗಳನ್ನು ಮಾಡಿದ್ದಾರೆ. ಮದುವೆಯ ಭರವಸೆ ನೀಡಿ ಶೋಷಣೆ ಮಾಡಿದ್ದಾರೆ ಎಂಬ ದೂರು ನೋಯ್ಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದೇ ವೇಳೆ ವಿಪ್ರಜ್ ತಾವು ಬ್ಲ್ಯಾಕ್ಮೇಲ್ಗೆ ಒಳಗಾಗ್ತಿದ್ದೇನೆ ಎಂದು ಕೌಂಟರ್ FIR ದಾಖಲಿಸಿದ್ದಾರೆ.
ಐಪಿಎಲ್ 2024ರಲ್ಲಿ 14 ಪಂದ್ಯಗಳಲ್ಲಿ 142 ರನ್ ಮತ್ತು 11 ವಿಕೆಟ್ ಪಡೆದಿದ್ದ ವಿಪ್ರಜ್ ಅವರನ್ನು ಡೆಲ್ಲಿ 50 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ, 2026ರಲ್ಲಿ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಫ್ರಾಂಚೈಸಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ. ಆರೋಪ ಗಂಭೀರವಾಗಿರುವ ಕಾರಣ, ಕ್ರಿಕೆಟ್ ವಲಯದಲ್ಲಿ ಈ ಕುರಿತು ಚರ್ಚೆಗಳೇ ಹೆಚ್ಚಾಗಿವೆ.
ಇದೇ ರೀತಿ, ಆರ್ಸಿಬಿ ತಂಡದ ಯಶ್ ದಯಾಳ್ ಮೇಲೂ ಗಂಭೀರ ಆರೋಪಗಳು ಎದುರಾಗಿವೆ. ಮದುವೆಯ ಭರವಸೆ ನೀಡಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಪ್ರಕರಣ ಗಾಜಿಯಾಬಾದ್ನಲ್ಲಿ ದಾಖಲಾಗಿದೆ. ಈ ಆರೋಪದಿಂದಾಗಿ ಯಶ್ ದಯಾಳ್ UPT20 ಲೀಗ್ನಲ್ಲಿ ಆಡಲು ಅವಕಾಶ ನೀಡಲಿಲ್ಲ.
ಯಶ್ ದಯಾಳ್ ಅವರನ್ನು ಆರ್ಸಿಬಿ ಕಳೆದ ಸೀಸನ್ನಲ್ಲಿ 5 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿತ್ತು. ಡೆತ್ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು 15 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ್ದರು. ಆದರೆ ಈಗ ಅವರ ಮೇಲೆ ಇರುವ ಆರೋಪದ ಕುರಿತು ದೊಡ್ಡ ಪ್ರಶ್ನೆ ಮೂಡಿದೆ. ಆರೋಪಗಳ ಹಿನ್ನೆಲೆಯಲ್ಲಿ, ಆರ್ಸಿಬಿ ಯಾವ ದಿಕ್ಕಿನಲ್ಲಿರುತ್ತದೆ ಎಂಬುದೇ ಚರ್ಚೆಯ ವಿಷಯವಾಗಿದೆ.
ವಿಪ್ರಜ್ ಮತ್ತು ಯಶ್ ಎಂಬ ಇಬ್ಬರು ಆಟಗಾರರು ಐಪಿಎಲ್ನಲ್ಲಿ ಮುಂದುವರಿಯುವರೋ ಇಲ್ಲವೋ ಎಂಬುದನ್ನು ಫ್ರಾಂಚೈಸಿಗಳು ನಿರ್ಧರಿಸುತ್ತವೆ. ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಗಮನ ಹರಿಸಿರುವ ಪ್ರಮುಖ ವಿಚಾರವೇ ಇದು. ಐಪಿಎಲ್ 2026 retention ಪಟ್ಟಿಯಲ್ಲಿ ಇವರ ಹೆಸರುಗಳು ಇರುತ್ತವೆಯೋ ಇಲ್ಲವೋ ಎಂಬುದು ನವೆಂಬರ್ 15ರಂದು ಸ್ಪಷ್ಟಗೊಳ್ಳಲಿದೆ.