ಡಿಸೆಂಬರ್ 19 ಕ್ಕೆ ಕೋಲ್ಕತ್ತಾದಲ್ಲಿ ಐಪಿಎಲ್ 2019 ರ ಹರಾಜು ಪ್ರಕ್ರಿಯೆ ಸಾಧ್ಯತೆ..!

ಮುಂದಿನ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಸಲು ಮುಂಬೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿದೆ. 

Updated: Nov 5, 2019 , 06:55 PM IST
 ಡಿಸೆಂಬರ್ 19 ಕ್ಕೆ ಕೋಲ್ಕತ್ತಾದಲ್ಲಿ ಐಪಿಎಲ್ 2019 ರ ಹರಾಜು ಪ್ರಕ್ರಿಯೆ ಸಾಧ್ಯತೆ..!
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂದಿನ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಸಲು ಮುಂಬೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಐಪಿಎಲ್ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತದೆ.ಆದರೆ ಈ ಬಾರಿ ಹರಾಜು ಪ್ರಕ್ರಿಯೆ ವಿಳಂಬವಾಗಿದೆ.    

ಇದೆ ಮೊದಲ ಬಾರಿಗೆ ಐಪಿಎಲ್ ಆಟಗಾರರ ಹರಾಜನ್ನು ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಕೋಲ್ಕತ್ತಾದಲ್ಲಿನ ಐಪಿಎಲ್ ಹರಾಜು ಪ್ರಕ್ರಿಯೆ ವಿಚಾರವಾಗಿ ಮಾತನಾಡಿದ ಆಡಳಿತ ಮಂಡಳಿ ಸದಸ್ಯರೊಬ್ಬರು 'ಇದು ಬೆಂಗಳೂರಿನ ಸಾಂಪ್ರದಾಯಿಕ ಸ್ಥಳದಿಂದ ನಿರ್ಗಮಿಸುತ್ತದೆ' ಎಂದು ಐಪಿಎಲ್ ಮಂಡಳಿ ಸದಸ್ಯರೊಬ್ಬರು ಹೇಳಿದ್ದಾರೆ.

ಐಪಿಎಲ್ 2019 ಕ್ಕೆ ಫ್ರಾಂಚೈಸಿಗಳಿಗೆ ತಲಾ 82 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ.