IPL ಬ್ರ್ಯಾಂಡ್‌ ಮೌಲ್ಯ ಭಾರೀ ಕುಸಿತ.. ಸಿಎಸ್‌ಕೆನ ಹಿಂದಿಕ್ಕಿದ RCB, ಟಾಪ್‌ನಲ್ಲಿ ಯಾವ ಟೀಮ್‌ ಇದೆ?

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಸಲ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯದಲ್ಲಿ ಭಾರೀ ಕುಸಿತ ಕಂಡಿದೆ. ಇದರಿಂದ ಆರ್‌ಸಿಬಿ ಚೆನ್ನೈ ಫ್ರಾಂಚೈಸಿನ ಹಿಂದಿಕ್ಕಿ ಮುಂದೆ ಸಾಗಿದೆ.   

Written by - Bhimappa | Last Updated : Dec 10, 2025, 04:01 PM IST
  • ಚೆನ್ಮೈ ಟೀಮ್‌ ಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ತಲುಪಿದ್ದೇ ಮುಳ್ಳಾಯಿತು
  • ಐಪಿಎಲ್‌ ಬ್ರ್ಯಾಂಡ್‌ ವ್ಯಾಲ್ಯೂ ಕುಸಿಯಲು ಮುಖ್ಯ ಕಾರಣಗಳು ಏನು?
  • ಆರ್‌ಸಿಬಿನ ಈಗಲೂ ಕೈ ಬಿಡದ ಅಭಿಮಾನಿಗಳು, ಎಷ್ಟನೇ ಸ್ಥಾನದಲ್ಲಿದೆ?
IPL ಬ್ರ್ಯಾಂಡ್‌ ಮೌಲ್ಯ ಭಾರೀ ಕುಸಿತ.. ಸಿಎಸ್‌ಕೆನ ಹಿಂದಿಕ್ಕಿದ RCB, ಟಾಪ್‌ನಲ್ಲಿ ಯಾವ ಟೀಮ್‌ ಇದೆ?
ಕೃಪೆ; RCB

2025ರ ಇಂಡಿಯನ್‌ ಪ್ರಿಮೀಯರ್‌ ಲೀಗ್‌ (ಐಪಿಎಲ್‌)ನ ಬ್ರ್ಯಾಂಡ್‌ ಮೌಲ್ಯವು ವಿವಿಧ ಕಾರಣಗಳಿಂದ ಶೇಕಡಾ 20 ರಷ್ಟು ಕುಸಿತವಾಗಿದೆ ಎಂದು ಬ್ರ್ಯಾಂಡ್‌ ಫೈನಾನ್ಸ್‌ ಅಂಕಿಅಂಶಗಳನ್ನು ಬಹಿರಂಗ ಪಡಿಸಿದೆ. 2024ರಲ್ಲಿ 12 ಬಿಲಿಯನ್‌ ಡಾಲರ್‌ ಇದ್ದ ಬ್ರ್ಯಾಂಡ್‌ ಮೌಲ್ಯವು ಈಗ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದ್ದರಿಂದ 9.6 ಬಿಲಿಯನ್‌ ಡಾಲರ್‌ಗೆ ತಲುಪಿದೆ ಎಂದು ಹೇಳಲಾಗುತ್ತಿದೆ. 

Add Zee News as a Preferred Source

ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಕುಸಿತಕ್ಕೆ ಕಾರಣಗಳು ಎಂದರೆ ಪಾಕಿಸ್ತಾನ ಹಾಗೂ ಭಾರತದ ನಡುವಿನ ಘರ್ಷಣೆ, ಐಪಿಎಲ್‌ನ ಕೆಲ ಪಂದ್ಯಗಳನ್ನು ಮುಂದೂಡಿಕೆ ಮಾಡಿರುವುದು, ಆಟಗಾರರನ್ನು ಬದಲಿಸಿರುವುದು, ಆಪರೇಷನ್‌ ಸಿಂಧೂರ, ಮೆಗಾ ಹರಾಜು, ಆಕ್ಷನ್‌ಗಳಲ್ಲಿ ಆಟಗಾರರನ್ನು ಬಿಟ್ಟುಕೊಟ್ಟಿರುವುದು, ಆಟಗಾರರ ಬಗೆಗೆ ಗೊಂದಲಗಳು ಇವೆಲ್ಲವೂ ಮೌಲ್ಯ ಕುಸಿಯಲು ಕಾರಣವಾಗಿವೆ ಎಂದು ತಿಳಿಸಲಾಗಿದೆ. 

ಈ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಕುಸಿತ ಕಂಡರೂ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿನ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಹಿಂದಿಕ್ಕಿದೆ. ಸದ್ಯ ನಂಬರ್‌- 1 ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ ಇದೆ. ಹಾಗೇ ಈ ವರ್ಷದ ಬ್ರ್ಯಾಂಡ್‌ ಮೌಲ್ಯದಲ್ಲಿ ಹೆಚ್ಚಿಗೆ ಮಾಡಿಕೊಂಡ ಫ್ರಾಂಚೈಸಿ ಎಂದರೆ ಅದು ಗುಜರಾತ್‌ ಟೈಟಾನ್ಸ್‌ ಆಗಿದೆ. ಐಪಿಎಲ್‌ನಲ್ಲಿ ಎರಡನೇ ಅತ್ಯಂತ ಮೌಲ್ಯಯುತ ಟೀಮ್‌ ಎಂದರೆ ಅದು ಆರ್‌ಸಿಬಿ ಆಗಿದೆ. 

ಬ್ರ್ಯಾಂಡ್‌ ಫೈನಾನ್ಸ್‌ ವರದಿ ಪ್ರಕಾರ ಐಪಿಎಲ್‌ನ ಅತ್ಯಂತ ಮೌಲ್ಯಯುತ ಟೀಮ್‌ ಎಂದರೆ ಅದು ಮುಂಬೈ ಇಂಡಿಯನ್ಸ್‌ ಆಗಿದೆ. ಇದು ಪಟ್ಟಿಯಲ್ಲಿ ಸದ್ಯ ಟಾಪ್‌ನಲ್ಲಿದೆ. 108 ಮಿಲಿಯನ್‌ ಡಾಲರ್‌ ಅಂದರೆ ಸುಮಾರು ರೂ 902 ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದೆ.       

ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿರುವ ಆರ್‌ಸಿಬಿ ಫ್ರಾಂಚೈಸಿ 105 ಮಿಲಿಯನ್‌ ಡಾಲರ್‌ನೊಂದಿಗೆ ಅಂದರೆ 876 ಕೋಟಿ ರೂಪಾಯಿಗೂ ಅಧಿಕ ಮೌಲ್ಯವನ್ನು ಬೆಂಗಳೂರು ತಂಡ ಹೊಂದಿದೆ. 2024ಕ್ಕೆ ಹೋಲಿಕೆ ಮಾಡಿದರೆ ಈಗ ಶೇಕಡಾ 10 ರಷ್ಟು ಕುಸಿತ ಕಂಡಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಆಡಿದ್ದೇ 13 ಟಿ20 ಮ್ಯಾಚ್‌.. ಲೆಜೆಂಡ್ರಿ ವಿಕೆಟ್‌ ಕೀಪರ್‌ ದಾಖಲೆ ಸರಿಗಟ್ಟಿದ ಯಂಗ್‌ ಮ್ಯಾನ್‌..!

2025ರ ಐಪಿಎಲ್‌ನ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದ್ದ ಸಿಎಸ್‌ಕೆ ಟೀಮ್‌ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 93 ಮಿಲಿಯನ್‌ ಡಾಲರ್‌ ಅಂದರೆ, 776 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ತಂಡವಾಗಿದೆ. ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿ ಕೆಕೆಆರ್‌, ಗುಜರಾತ್‌ ಟೈಟಾನ್ಸ್‌, ಪಂಜಾಬ್‌, ಲಕ್ನೋ ಸೂಪರ್‌ ಜೈಂಟ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ರೈಸರ್ಸ್‌ ಹೈದ್ರಾಬಾದ್‌, ರಾಜಸ್ತಾನ್‌ ರಾಯಲ್ಸ್‌ ನಂತರದ ಕ್ರಮವಾದ ಸ್ಥಾನಗಳನ್ನು ಪಡೆದುಕೊಂಡಿವೆ. 

ಇದನ್ನೂ ಓದಿ: ಬೆತ್ತಲೆಯಾಗಿ ಓಡಾಡುತ್ತೇನೆ ಎಂದಿದ್ದ ತಂದೆ.. ಅಪ್ಪನ ಮಾತಿಗೆ ಮಗಳಿಗೆ ಮುಜುಗರ, ಆಕೆ ಹೇಳಿದ್ದು ಏನು?

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News